ಜಗಳೂರಿನಲ್ಲಿ ರಾಜ್ಯಮಟ್ಟದ ಕಬಡ್ಡಿ ಟೂರ್ನಿಮೆಂಟ್ 

ಜಗಳೂರು.ನ.೭: ನಮ್ಮ ತಾಲೂಕಿನಲ್ಲಿ ಹಲವಾರು ಕ್ರೀಡೆಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಡಿಸೆಂಬರ್‌ನಲ್ಲಿ ನಿಮ್ಮ ಶಾಸಕ ಎಸ್.ವಿ.ರಾಮಚಂದ್ರರವರು ಜಗಳೂರಿನಲ್ಲಿ ರಾಜ್ಯಮಟ್ಟದ ಕಬಡ್ಡಿ ಟೂರ್ನಿಮೆಂಟನ್ನು ನಡೆಸಿ ಕೊಡಲಿದ್ದಾರೆ ಎಂದು ಶಾಸಕ ಎಸ್.ವಿ.ಆರ್ ಧರ್ಮ ಪತ್ನಿ ಇಂದಿರಾ ರಾಮಚಂದ್ರ ಹೇಳಿದರು.ಪಟ್ಟಣದ ವಾಲ್ಮೀಕಿ ಭವನದಲ್ಲಿ ಕೊಂಡು ಕುರಿ ನಾಡಿನ ಪಾರಿವಾಳದ ಪಂದ್ಯಾವಳಿ 2022-23 ಹಾಗೂ ಕರ್ನಾಟಕ ರತ್ನ ಪವರ್ ಸ್ಟಾರ್ ಸ್ಮರಣಾರ್ಥ ಮತ್ತು ಐದನೇ ವರ್ಷದ ಕಲರ್ಸ್ ಹಾಗೂ ಸಿಂಗಲ್ ಗೋಲ್ಡನ್ ಕಪ್ ಟೂರ್ನಮೆಂಟ್ ನ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕ್ಷೇತ್ರದಲ್ಲಿ ಜನರ ಅಭಿಲಾಶೆಯಂತೆ ಕುಡಿಯುವ ನೀರಿನ ಯೋಜನೆಗಳು, ರಸ್ತೆಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆಯುತ್ತಿವೆ. ಅಭಿವೃದ್ಧಿಯ ಜೊತೆಗೆ ಶಿಕ್ಷಣಕ್ಕೆ ಹಾಗೂ ಕ್ರೀಡೆಗೂ ಸಹ ಉತ್ತೇಜನ ನೀಡಲಾಗುತ್ತಿದೆ. ನಮ್ಮ ತಾಲೂಕಿನಲ್ಲಿ ಪಾರಿವಾಳದ ಪಂದ್ಯಗಳ ಆಯೋಜನೆ ಮಾಡಿರುವುದಕ್ಕೆ ಮೆಚ್ಚಿಗೆ ವ್ಯಕ್ತ ಪಡಿಸಿದರು.ಡಾ, ಬಸವರಾಜ ಮಾತನಾಡಿ ಜಗಳೂರಿನಲ್ಲಿ ಸತತವಾಗಿ ಐದು ವರ್ಷಗಳಿಂದ ಪಾರಿವಾಳ ಕ್ರೀಡೆಯನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಪಾರಿವಾಳ ಶೋಕೆಯನ್ನು ನೋಡಲು ಹಲವರು ಬೇರೆ ಬೇರೆ ಜಿಲ್ಲೆಗಳಿಂದ ಬಂದು ನಮಗೆ ಪ್ರೋತ್ಸಾಹ ಮಾಡಿದ್ದಾರೆ ಎಂದರು.ಪಟ್ಟಣ ಪಂಚಾಯಿತಿ ಸದಸ್ಯ ಆರ್. ತಿಪ್ಪೇಸ್ವಾಮಿ ಮಾತನಾಡಿ ರಾಜ ಮಹಾರಾಜರು ಪಾರಿವಾಳ ಮುಖಾಂತರ ಪತ್ರಗಳು ಕಳಿಸುತ್ತಿದ್ದರು. ಹಲವಾರು ಜಿಲ್ಲೆಗಳಿಂದ ಪಾರಿವಾಳದ ಶೋಕೆಯವರು ಭಾಗವಹಿಸಿದ್ದರು. ಪಂದ್ಯದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಆಟ ಆಡುವ ರೀತಿ ಮುಖ್ಯ ಎಂದರು.ಜಗಳುರು ಸ.ಪ್ರ.ದ.ಕಾಲೇಜು ಪ್ರಾಂಶುಪಾಲ ಬಸರಾಜ್ ಮಾತನಾಡಿ ಪಾರಿವಾಳದ ಪಂದ್ಯಾವಳಿಗಳು ರಾಜ್ಯ ಮನೆತನದ ಜನರಿಂದ ನಡೆದುಕೊಂಡು ಬಂದಿದೆ. ನಮ್ಮ ವಿದ್ಯಾರ್ಥಿಯಾದ ಬಸವರಾಜ್ ಅವರು ನಮ್ಮ ಕಾಲೇಜಿನ ಅಚ್ಚುಮೆಚ್ಚಿನ ಶಿಕ್ಷಕರಾಗಿ ಉತ್ತಮ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲೋಕನಾಯ್ಕ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ರಮೇಶ್, ಲುಕ್ಮಾನ್‌ಖಾನ್, ಮಹಮದ್ ಆಲಿ, ಬಿಜೆಪಿ ಮುಖಂಡರಾದ ಓಬಳೇಶ್, ಶಿವಣ್ಣ, ಓಬಳೇಶ್, ಮನೋಹರಿ ಸಿನಿಮಾದ ನಾಯಕ ನಟ ದುರ್ಗದ ಹುಲಿ, ಬಾತಿ ರಾಜಣ್ಣ ಸೇರಿದಂತೆ ಹಲವಾರು ಪಾರಿವಾಳ ಪಂದ್ಯದ ಶೋಕಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Attachments area