ಜಗಳೂರಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

ಜಗಳೂರು.ಮೇ.೮; 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮೇ.10 ರಂದು ನಡೆಯಲಿರುವ ಚುನಾವಣೆಯಲ್ಲಿ ಮತ ದಾರರು ನಿಮ್ಮ ಅಮೂಲ್ಯವಾದ ಮತವನ್ನು ನಿಮ್ಮ ಯೋಗ್ಯ ಅಭ್ಯರ್ಥಿಗೆ ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವದ ಸಂವಿಧಾನದ ಮತದಾನ ನಮ್ಮ ಹಕ್ಕು ಅದನ್ನ ನಾವು ಚಲಾಯಿಸಬೇಕು ಎಂದು ತಹಶೀಲ್ದಾರ್ ಜಿ.ಸಂತೋಷ್‍ ಕುಮಾರ್  ಹೇಳಿದರು.ಜಗಳೂರು ಪಟ್ಟಣದ ಹೊಸ  ಮಹಾತ್ಮಾಗಾಂಧಿ ವೃತ್ತದಲ್ಲಿ   ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಇವರುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮತದಾನ ನಮ್ಮ ಭಾರತದ ಸಂವಿಧಾನ ನಮಗೆ ನೀಡಿರುವ ಒಂದು ಹಕ್ಕು, ಇದರ ಇದರ ಸದುಪಯೋಗವನ್ನು ನಮ್ಮ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕೊಳ್ಳಬೇಕು ಇದು ಪ್ರಜಾಪ್ರಭುತ್ವಕ್ಕೆ ಕೊಟ್ಟ ಬಹುದೊಡ್ಡ ಗೌರವ. 18 ವರ್ಷ ತುಂಬಿದ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಹಣ ಮತ್ತು ಆಮಿಷಗಳಿಗೆ ಒಳಗಾಗದೇ  ನಮಗೆ ಬೇಕಾಗುವ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.ನಂತರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಗ್ಗೂಡಿಸಿಕೊಂಡ ಮೇಲೆ ಮತದಾನ ಮಾಡುವ ಮೂಲಕ ನಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು. ಇದರಿಂದ ವಂಚಿತರಾಗುವುದು ಆತ್ಮವಂಚನೆಗೆ ಸಮಾನವಾದ ಕೆಲಸ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ. ದೇಶದ ಪ್ರಗತಿಗೆ ಶ್ರಮಿಸಿ ಎಂದು ಹೇಳಿದರು.ನಮ್ಮನ್ನಾಳುವ ಪ್ರಜೆಗಳು ಎಂಥ ವ್ಯಕ್ತಿ ಬೇಕು ಮತ್ತು  ಪ್ರಜೆಗೆ  ಎಂಬ ಆಯ್ಕೆ ಕೂಡ ನಮ್ಮ ಕೈಯಲ್ಲೇ ಇದೆ.ಹೀಗಿರುವಾಗ ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯ ಮತದಾನ ದಿನದ ಸಮಯವನ್ನು ನಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ ಮತ್ತು ಮೋಜು ಮಸ್ತಿಗಾಗಿ ಎಂದು ಭಾವಿಸದೇ ತಪ್ಪದೇ ಎಲ್ಲರೂ ಮತಗಟ್ಟೆಗೆ ಹೋಗಿ ನಿಗದಿತ ಸಮಯ ದೊಳಗೆ ಮತದಾನ ಮಾಡಬೇಕು ಎಂದರು ಇದೇ ಸಂದರ್ಭದಲ್ಲಿ  ತಾಪಂ ಇಒ ಚಂದ್ರಶೇಖರ್ ಮಾತನಾಡಿದರು.ವಿದ್ಯಾರ್ಥಿ ನಿಲಯದ ಬಾಲಕಿಯರು ನೂರಾರು ವಿದ್ಯಾರ್ಥಿನಿಯರು ಘೋಷಣೆ  ಕೂಗಿ ಮತದಾನ ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ  ಹಾಸ್ಟೆಲ್ ಮೇಲ್ವಿಚಾರಕರಾದ ಮಂಗಳ ಕನವಳ್ಳಿ, ಮತ್ತು ಸಿಬ್ಬಂದಿವರ್ಗ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಹಾಜರಿದ್ದರು