ಜಗಳೂರಿನಲ್ಲಿ ನೆನೆಗುದಿಗೆ ಬಿದ್ದ ಕಾಮಗಾರಿಗಳು;ಅಸಮಾಧಾನ


ಜಗಳೂರು.ನ.೬; ಜಿಲ್ಲಾ ಪಂಚಾಯಿತಿಯಲ್ಲಿ ಅಭಿಯಂತರು ತಿಂಗಳುಗಟ್ಟಲೇ ಕಚೇರಿಗೆ ಬರುತ್ತಿಲ್ಲ ಮತ್ತು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಕಾಮಗಾರಿಗಳೆಲ್ಲ ನೆನೆಗುದಿಗೆ ಬಿದ್ದಿವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸವಿತಾ ಕಲ್ಲೇಶಪ್ಪ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ಜಿಲ್ಲಾ ಪಂಚಾತ್ ಮತ್ತು ಇಂಜಿನಿಯರಿಂಗ್ ಕಚೇರಿಗೆ ಭೇಟಿ ನೀಡಿದ ಅವರು ಇಲಾಖೆಯ ಅಭಿಯಂತರರು ಸರಿಯಾಗಿ ಕಚೇರಿಗೆ ಬರುತ್ತಿಲ್ಲ ಮತ್ತು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಅಭಿವೃದ್ದಿ ಕಾಮಗಾರಿಗಳೂ ನೆನೆಗುದಿಗೆ ಬಿದ್ದಿವೆ ಬಂದಿರುವ ಅನುದಾನವನ್ನು ಸಮಯಕ್ಕೆ ಸರಿಯಾಗಿ ವೆಚ್ಚ ಮಾಡಬೇಕು ಆದರೆ ಇಂಜಿನಿಯರ್‌ಗಳು ಕೈಗೆ ಸಿಗದೇ ಇರುವುದರಿಂದ ಪ್ಲಾನ್ ಮತ್ತು ಎಸ್ಟಿಮೇಟ್ ಮಾಡುವವರು ಯಾರು ಕಾಮಗಾರಿ ಪರಿಶೀಲನೆ ಮಾಡುವವರು ಯಾರು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮತ್ತು ರಸ್ತೆ ಅಭಿವೃದ್ದಿ ಕಾಮಗಾರಿಗಳು ನಡೆಯದಂತಾಗಿ ಇಂತಹ ಇಂಜಿಯರ್ ಗಳ ಮೇಲೆ ನೀವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಇಇ ಶೀವಕುಮಾರ್ ಗೆ ಸೂಚನೆ ನೀಡಿದರು .ಕೆಲ ಇಂಜಿಯರ್ ಗಳು ತಿಂಗಳುಗಟ್ಟೆಲೆ ಕೆಲಸಕ್ಕೆ ಬಂದಿಲ್ಲ ಹಲವಾರು ಭಾರಿ ನೋಟಿಸ್ ನೀಡಲಾಗಿದೆ ಮತ್ತು ವೇತನವನ್ನು ಸಹ ತಡೆಹಿಡಿಯಲಾಗಿದ್ದು ಮೇಲಾಧಿಕಾರಿಗಳ ಗಮಕ್ಕೆ ತರಲಾಗಿದೆ ಅವರ ಕೆಲಸಗಳನ್ನು ನಾವೇ ಮಾಡಬೇಕಾಗಿದೆ ಎಂದು ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.