ಜಗಳೂರಿನಲ್ಲಿ ನಟ ಸುದೀಪ್ ಜನ್ಮದಿನ ಆಚರಣೆ

ಜಗಳೂರು.ಸೆ.೪; ಪಟ್ಟಣದ  ಶಾಸಕರ  ಕಛೇರಿಯ ಮುಂಭಾಗದಲ್ಲಿ  ಅಭಿನಯ ಚಕ್ರವರ್ತಿ  ಕಿಚ್ಚ ಸುದೀಪ್ ಸೇನಾ  ಸಮಿತಿ (ರಿ) ಜಗಳೂರು  ಆಯೋಜಿಸಿದ್ದ  ಕಿಚ್ಚ  ಸುದೀಪ್ ಅವರ  ೪೯ನೇ  ಹುಟ್ಟುಹಬ್ಬದ  ಕಾರ್ಯಕ್ರಮದಲ್ಲಿ ಶಾಸಕ ಎಸ್ ವಿ ರಾಮಚಂದ್ರ ಭಾಗವಹಿಸಿ ಕೇಕ್  ಕತ್ತರಿಸಿದರು. ನಂತರ ಮಾತನಾಡಿ ಈ  ವರ್ಷದ ಅಂತ್ಯದಲ್ಲಿ  ಚಲನಚಿತ್ರ ನಟ ಕಿಚ್ಚ ಸುದೀಪ್ ಅವರನ್ನು ಕರೆಯಿಸಿ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ಕಬ್ಬಡಿ ಕ್ರೀಡಾಕೂಟ ಉದ್ಘಾಟನೆಯನ್ನು ನೆರವೇರಿಸುತ್ತೇನೆ  ಜಗಳೂರಿನ ಕಿಚ್ಚ ಸುದೀಪ್ ಅಭಿಮಾನಿ ಬಳಗದ ಯುವಕರು  ಅವರ ಜನ್ಮದಿನವನ್ನು ಆಚರಣೆ ಮಾಡುತ್ತಿರುವುದು ನಮಗೆಲ್ಲರಿಗೂ  ಸಂತೋಷದ ವಿಷಯ ಎಂದರು  ಈ  ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸೊಕ್ಕೆ ನಾಗರಾಜ್, ವಕೀಲರಾದ ತಿಪ್ಪೇಸ್ವಾಮಿ, ಕಿಚ್ಚ ಸುದೀಪ್ ಸೇನಾ  ಸಮಿತಿ ಪ್ರಧಾನ,ಕಾರ್ಯದರ್ಶಿ ಪೈಲ್ವಾನ್ ತಿಪ್ಪೇಶ್,  ಕಾರ್ಯದರ್ಶಿ ರಘುಜಾಗ್ವಾರ್,ಸಂಘಟನಾ ಕಾರ್ಯದರ್ಶಿ  ಸಂದೀಪ್,ರಘುನಾಯಕ,ಮುಖಂಡರಾದ ಓಬಳೇಶ್,ಆರ್.ತಿಪ್ಪೇಸ್ವಾಮಿ,ಜೆ.ಸಿ,ಓಬಳೇಶ್,ಶಿವಣ್ಣ,ನಾಗರಾಜ್  ಮರೇನಹಳ್ಳಿ, ತಮಲೇಹಳ್ಳಿ ಅಂಜಿನಪ್ಪ, ಕಾರ್ತಿಕ್, ಓಬಳೇಶ್, ಸೂರ್ಯಕಿರಣ್,ವಿಜಯಕುಮಾರ್.ಅಂಜಿನಪ್ಪ.ಸೇರಿದಂತೆ ಮುಖಂಡರು  ನೂರಾರು ಯುವಕರು ಉಪಸ್ಥಿತರಿದ್ದರು