ಜಗಳೂರಿನಲ್ಲಿ ದೊಡ್ಡ ಮಾರಿಕಾಂಬ ದೇವಿಯ ರಥೋತ್ಸವ  

ಜಗಳೂರು.ಏ.೨೯; ಪಟ್ಟಣದ ಮಾರಿಕಾಂಭದೇವಿ ರಥೋತ್ಸವ  ಅಪಾರ ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಉತ್ಸವದಲ್ಲಿ ನಡೆಯುವ ಜಾತ್ರಾಮಹೋತ್ಸವ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸೇರಿ ದಂತೆ ವಿವಿಧ ಜೆಲ್ಲೆಗಳಿಂದ ಸಾವಿರಾರು ಭಕ್ತರು ದೇವಿಗೆ ಕಾಯಿ, ಹಣ್ಣು ಹಾಕುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.ಮಾರಿಕಾಂಬ ದೇವಿಯ ರಥೋತ್ಸವದ ಬಾವುಟ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ನಾಗರಾಜ ಎಂಬು ವರಿಗೆ 1.35 ಲಕ್ಷ ರೂ.ಗಳಿಗೆ ಹರಾಜಾಗುತ್ತಿದ್ದಂತೆ ದೇವಿಯ ಘೋಷಣೆಗಳೊಂದಿಗೆ ರಥೋತ್ಸವ ಚಾಲನೆ ಗೊಂಡಿತು.ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ರಾಜೇಶ್. ಕೆಪಿಸಿಸಿ ಎಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ. ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಟಿ ಬಿ ದೇವೇಂದ್ರಪ್ಪ ಸೇರಿದಂತೆ ಅನೇಕ ರಾಜಕೀಯ ಮುಖಂಡರುಗಳು ಸಾವಿರಾರು ಭಕ್ತಾದಿಗಳು  ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.