ಜಗಳೂರಿನಲ್ಲಿ ಡಾ ಬಿ.ಆರ್ ಅಂಬೇಡ್ಕರ್ ರವರ 130 ನೇ ಜಯಂತಿ ಸರಳವಾಗಿ ಆಚರಣೆ

ಜಗಳೂರು ಏ 14:ಪಟ್ಟಣದಲ್ಲಿ ಇಂದು ವಿಶ್ವ ರತ್ನ ಮಹಾಮಾನವತಾವಾದಿ ಸಂವಿಧಾನ  ಶಿಲ್ಪಿ ಭಾರತರತ್ನ ಡಾ ಬಿ.ಆರ್ ಅಂಬೇಡ್ಕರ್ ರವರ 130 ನೇ ಜಯಂತಿಯನ್ನು ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ ಮಹೇಶ್ವರಪ್ಪ ಅವರು
ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವ
ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.

ನಂತರ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿದಾನ ರಚಿಸುವ ಮೂಲಕ ಸರ್ವ ಜನಾಂಗದ ಹಿತ ಕಾಯುವ ಮೂಲಕ ಸರ್ವರಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಮೂಲಕ ಸಮಾಜದಲ್ಲಿ ಸಮಾನತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟಂತಹ ಮಹಾನಾಯಕ ಅಂಬೇಡ್ಕರ್ ಅವರನ್ನ ಒಂದು ಜಾತಿಗೆ ಸೀಮಿತಗೊಳಿಸಿವುದು ಸಮಂಜಸವಲ್ಲ ಎಂದರು.

ಅವರು ಕೊಟ್ಟಂತಹ ಮೀಸಲಾತಿ
ಯಿಂದ ನಮ್ಮಂತಹ ದಲಿತ ಜನಸಾಮಾನ್ಯರು ಜನಪ್ರತಿನಿದಿಗಳಾಗಿರಲು ಸಾಧ್ಯವಾಗಿದೆ ಎಂದರು ಅವರ ಜೀವಮಾನ ಸಾಧನೆಗಳನ್ನ ತಿಳಿಯುವ ಮೂಲಕ ಸ್ವಾಭಿಮಾನ ಜೀವನ ನೆಡೆಸಬೇಕು ಡಾ ಬಿ.ಆರ್ ಅಂಬೇಡ್ಕರ್ ಅವರು ಒಬ್ಬ ಭಾರತೀಯ ನ್ಯಾಯವಾದಿ ಅರ್ಥಶಾಸ್ತ್ರಜ್ಞ
ರಾಜಕಾರಣಿ ಮತ್ತು ಸಾಮಾಜಿಕ ಸುಧಾರಕ  ಇವರು ದಲಿತ ಬೌದ್ಧ ಚಳವಳಿಗೆ ಪ್ರೇರಣೆ
ನೀಡಿದರು ಮತ್ತು  ಅಸ್ಪೃಶ್ಯರ ( ದಲಿತರ ) ಬಗ್ಗ ಸಾಮಾಜಿಕ ತಾರತಮ್ಯದ ವಿರುದ್ಧ ಪ್ರಚಾರ ಮಾಡಿದರು.

ಬ್ರಿಟಿಷ್ ಭಾರತದ ಆಗಿತ್ತು ಕಾರ್ಮಿಕ ಸಚಿವ ರಲ್ಲಿ ವೈಸ್ ರಾಯ್ ನಿರ್ವಾಹಕ ಸಮಿತಿಯ ಸದಸ್ಯ ಸಂವಿಧಾನ ರಚನಾ ಸಮಿತಿಯ  ಸ್ವತಂತ್ರಭಾರತದಪ್ರಥಮ 
ಕಾನೂನು ಮತ್ತು ನ್ಯಾಯ ಸಚಿವ , ಮತ್ತು ಮುಖ್ಯ ವಿನ್ಯಾಸಕ ಪರಿಗಣಿಸಲಾಗುತ್ತದೆ ಎಂದರು

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕರಾದ ಉಮೇಶ್. ಸಿಬ್ಬಂದಿಗಳಾದ ಲಿಂಗಣ್ಣನಹಳ್ಳಿ ತಿಮ್ಮಣ್ಣ. ಮಲ್ಲಿಕಾರ್ಜುನ್. ರವಿಕುಮಾರ್. ಅಲ್ಲಾಭಕ್ಷಿ. ಮಲ್ಲಪ್ಪ. ಗಿರೀಶ್. ಗೋವಿಂದಪ್ಪ.ರವಿ
ಕುಮಾರ್ ಕರಿಬಸಪ್ಪ .ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು