ಜಗಳೂರಿನಲ್ಲಿ ಜನಸಂಕಲ್ಪಯಾತ್ರೆಗೆ ಅದ್ದೂರಿ ಸ್ವಾಗತ.

ಜಗಳೂರು.ಮಾ.೧೮ :- ಪಟ್ಟಣದ ಈಶ್ಬರ ದೇವಸ್ಥಾನದಿಂದ ಮಹಾತ್ಮಗಾಂಧಿ ವೃತ್ತ,ಅಂಬೇಡ್ಕರ್ ವೃತ್ತದ ವರೆಗೆ ಬಿಜೆಪಿ ಜನಸಂಕಲ್ಪ ಯಾತ್ರೆ ಅದ್ದೂರಿಯಾಗಿ ಮೆರವಣಿಗೆ ಜರುಗಿತು.ಸ್ವಾಗತ ಕೋರಿ ಮಾತನಾಡಿದ ಶಾಸಕ ಎಸ್.ವಿ.ರಾಮಚಂದ್ರ,ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಬಿಜೆಪಿ ಪಕ್ಷದ ಗೆಲುವಿನ ಸಂಕಲ್ಪ ಅಗತ್ಯ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಆಡಳಿತಾವಧಿಯ ಫಲವಾಗಿ ವಿಧಾನ ಸಭಾ ಕ್ಷೇತ್ರಕ್ಕೆ ₹3500 ಕೋಟಿ ಅನುದಾನ ತಂದಿರುವೆ.ಮಹತ್ವದ ನೀರಾವರಿ ಯೋಜನೆಗಳು ಸಾಕಾರಗೊಂಡಿವೆ.ಮುಂದಿನ ಬಾರಿಯೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ನಾನೂ ನಿಮ್ಮ ಮನೆಯ ಮಗನಾಗಿ ಋಣ ತೀರಿಸುವೆ ಎಂದು ವಿಶ್ವಾಸ ಗಳಿಸಿರುವೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ ಮಾತನಾಡಿ,ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಲ್ಲಿಯೂ ಬಿಜೆಪಿ ಗೆಲುವು ಖಚಿತ.ಜಗಳೂರು ಕ್ಷೇತ್ರದ ಅಭಿವೃದ್ದಿ ಗೆ ಶಾಸಕ ಎಸ್.ವಿ.ರಾಮಚಂದ್ರ ಅವಿರತ ಶ್ರಮವಹಿಸಿದ್ದು. ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಒಕ್ಕೋರಲಿನಿಂದ ಬೆಂಬಲಿಸ ಬೇಕು.ಪ್ರಧಾನಿ ಮೋದಿಜಿ ಅವರ ಜನಪರ ಯೋಜನೆ ಗಳನ್ನು ಮತದಾರರಿಗೆ ಜಾಗೃತಿ ಮೂಡಿಸಬೇಕು ಎಂದರು.