ಜಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಹೈ ಅಲರ್ಟ್

 ಜಗಳೂರು.ಏ.೨೩: ಪಟ್ಟಣದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ ಸಿ.ಪಿ.ಐ.ಮಂಜುನಾಥ್ ಪಂಡಿತ್.ಪಿ.ಎಸ್.ಐ ಸಂತೋಷ್ ಬಾಗೋಜಿ ಪ.ಪಂ.ಮುಖ್ಯಾಧಿಕಾರಿ ರಾಜು ಡಿ ಬಣಕಾರ್ ನೇತೃತ್ವದಲ್ಲಿ  ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಮಹಾಮಾರಿ ಕೊರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು.ನಂತರ ತಾಲೂಕು ದಂಡಾಧಿಕಾರಿ ಡಾ 
ನಾಗವೇಣಿ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ತುರ್ತು ಸಭೆ ಕರೆದು ತಾಲ್ಲೂಕಿನ ಹಳ್ಳಿಗಳಲ್ಲಿ ನೆಡೆಯುವ ಜಾತ್ರೆ ಹಬ್ಬ ತೇರು ಇತರೆ ಧಾರ್ಮಿಕ, ರಾಜಕೀಯ ಚಟುವಟಿಕೆ ಮಾಡಲು ಸೂಚನೆ ನೀಡಿದರು. ರಂಜಾನ್ ಹಬ್ಬವನ್ನು ಮನೆಯಲ್ಲಿಯೇ ಸಾಮಾಜಿಕ ಅಂತರ ಕಾಪಾಡಿಕೊಂಡು ಹೆಚ್ಚು ಜನ ಸೇರದೆ ಪ್ರಾರ್ಥನೆ ಮಾಡಲು ಸೂಚನೆ ನೀಡಿದರು ಹಾಗು ಪ್ರತಿ ಶನಿವಾರ ನಡೆಯುವ ವಾರದ ಸಂತೆ ಅನಿರ್ದಿಷ್ಟಾವದಿಗೆ ಮುಂದೂಡಿಕೆ ಮಾಡಲಾಗಿದೆ ಸಾರ್ವಜನಿಕರು ಮತ್ತು ವ್ಯಾಪಾರಿಗಳು ಸಹಕರಿಸಬೇಕು ಮತ್ತು ಅಗತ್ಯ ವಸ್ತುಗಳು ನಿಗದಿತ ಸ್ಥಳದಲ್ಲಿ ಬೆಳಿಗ್ಗೆ 8 ರಿಂದ 10 ಗಂಟೆ ರವರೆಗೆ ತರಕಾರಿ ಹಾಲು ಹಣ್ಣು ಮಾರಾಟ ಮಾಡಲು ಸೂಚಿಸಿದರು.ವೃತ್ತ ನಿರೀಕ್ಷಕ ಮಂಜುನಾಥ್ ಪಂಡಿತ್ ಮಾತನಾಡಿ ಸಾರ್ವಜನಿಕ ಸ್ಥಳದಲ್ಲಿ ಹಾಗು ಬಸ್ ಬೈಕ್
ಕಾರು ನಲ್ಲಿ ಸಂಚಾರ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಪಟ್ಟಣದ  ಹೋಟೆಲ್.ರೆಸ್ಟೋರೆಂಟ್ ಬೇಕರಿ ಡಾಬಾ ಮದ್ಯದ ಅಂಗಡಿಯಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ ಮಾಡಬೇಕು ಹೋಟೆಲ್ಗಳ ಒಳಗಡೆ ಸೇವಿಸಲು ನಿಷೇದ ಮಾಡಬೇಕು ಎಂದರು ಪ.ಪಂ.ಮುಖ್ಯಧಿಕಾರಿ ರಾಜು ಡಿ ಬಣಕಾರ್ ಮಾತನಾಡಿ ಜ್ವರ ಶೀತ ಕೆಮ್ಮು ನೆಗಡೆ ಹಾಗು ಉಸಿರಾಟ ತೊಂದರೆ ಇದ್ದರೆ ತಕ್ಷಣ ಕೋವಿಡ್ ಸೆಂಟರ್ ಗೆ ತೆರಳಿ ಪರೀಕ್ಷಿಸಿ ಕೊಳ್ಳಬೇಕು 40  ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ವಾಕ್ಸಿನ್ ಹಾಕಿಸಿ ಕೊಳ್ಳಬೇಕು ಅನಗತ್ಯವಾಗಿ ಓಡಾಡ ದಂತೆ ಸಾರ್ವಜನಿಕರಿಗೆ ಸೂಚನೆ ನೀಡಿದರು