ಜಗಳೂರಿನಲ್ಲಿ ಕನಕಜಯಂತಿ ಆಚರಣೆ

ಜಗಳೂರು.ನ.೨೨; ಪಟ್ಟಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ  ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಸರಳವಾಗಿ ಆಚರಿಸಲಾಯಿತು.  ಶಾಸಕ ಎಸ್ ವಿ ರಾಮಚಂದ್ರ ಕನಕದಾಸರ  ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದ ಕನಕದಾಸರು ಹಾಲು ಮತ ಸಮಾಜದಲ್ಲಿ ಜನಿಸಿದರು ಸಹ ಎಲ್ಲಾ ವರ್ಗದ ಜನರ ಸಮಸ್ಯೆಗಳಿಗೆ ಮುಕ್ತಿ ನೀಡಿದಂತಹ ವ್ಯಕ್ತಿಯಾಗಿದ್ದರು ಉಡುಪಿ ಮಠದಲ್ಲಿ ಶ್ರೀ ಕೃಷ್ಣನರೇ ತಿರುಗಿ ದರ್ಶನ ನೀಡಿದ ಪ್ರಸಂಗ ಎಲ್ಲಿಗೂ ತಿಳಿದಿದೆ 16 ನೇ ಶತಮಾನದಲ್ಲಿ ದಾಸಕೂಟದಲ್ಲಿ  ಸೇರಿ ಸಂಗೀತ.ಕೀರ್ತನೆಗಳು ಮೂಲಕ  ವೈಷ್ಣವ ಪಂತಗಳ ಮೇಲು ಕೀಲುಗಳ ಬಗ್ಗೆ ತೊಡೆದು ಹಾಕುವ ಮೂಲಕ ಶ್ರೇಷ್ಠ ಕನಕದಾಸರಾದರು ಎಂದರು.   ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜನಾ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಚ್.ಸಿ ಮಹೇಶ್   ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಉಪಾಧ್ಯಕ್ಷ   ಮಂಜಮ್ಮ. ಪಟ್ಟಣ ಪಂಚಾಯತಿ ಸದಸ್ಯರಾದ  ತಿಪ್ಪೇಸ್ವಾಮಿ.ಪಾಪಲಿಂಗಪ್ಪ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಸೊಕ್ಕೆ  ಜಗಳೂರು ಸಾರ್ವಜನಿಕ ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯರಾದ ಪೂಜಾರಿ ಸಿದ್ದಪ್ಪ.ಕಾಂಗ್ರೆಸ್ ಪಕ್ಷದ ಮುಖಂಡರಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಓಮಣ್ಣ. ಎನ್.ಎಸ್ ರಾಜು ಮಳಮ್ಮನಹಳ್ಳಿ  ವೆಂಕಟೇಶ ವೀರಶೈವ ಸಮಾಜದ ಮುಖಂಡರಾದ ಶಿವನಗೌಡ ತಾಲೂಕು ಕಚೇರಿಯ ಕಂದಾಯ ನಿರೀಕ್ಷಕ ಕುಬೇರ ನಾಯ್ಕ್ ಮತ್ತು ಜನಪ್ರತಿನಿಧಿಗಳು. ಸಿಬ್ಬಂದಿಗಳು ಸಾರ್ವಜನಿಕರು ಇದ್ದರು 

Attachments area