ಜಗಳೂರಿನಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ

ಜಗಳೂರು.ಮಾ.೧೪; ಮೀಸಲಾತಿ ಅನುಭವಿಸುವ ಎಲ್ಲಾ ವರ್ಗದ ಪ್ರತಿ ಮನೆಗಳಲ್ಲೂ ದೇಶದ ಶ್ರೇಷ್ಠ ಧರ್ಮ ಗ್ರಂಥ ಸಂವಿಧಾನ ಪರಿಪಾಲಿಸಿ ಎಂದು ಚಿತ್ರದುರ್ಗ ಛಲವಾದಿ ಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮ ದಲ್ಲಿ ಅವರು ಆಶೀರ್ವಾಚನ ನೀಡಿದರು.ಬಾಬಾ ಸಾಹೇಬರು ಹೇಳಿದಂತೆ ಚುನಾವಣೆ ಸಂದರ್ಭದಲ್ಲಿ ಮತದಾರರು ಮತದಾನದ ಹಕ್ಕನ್ನು ಚಲಾಯಿಸಬೇಕು.ಹಣ ಆಮಿಷಕ್ಕೊಳಗಾಗಿ ಮಾರಾಟವಾಗಬಾರದು.ಒಂದು ವೇಳೆ ಪವಿತ್ರವಾದ ಮತ ಮಾರಾಟವಾದರೆ ತಮ್ಮ ಕುಟುಂಬದ ಮಹಿಳೆಯರು ಮಾರಾಟವಾದಂತೆ ಎಂದು ಸಾಮ್ಯತೆ ನೀಡಿದರುಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ನನ್ನನ್ನು ವಿಧಾನ ಸಭಾ ಎಸ್.ಟಿ ಮೀಸಲು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನನ್ನಾಗಿ ಆಯ್ಕೆಮಾಡಿದ ಪರಿಶಿಷ್ಠ ಸಮುದಾಗಳ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿರುವೆ.ಅಲ್ಲದೆ ಪರಿಶಿಷ್ಠ ಸಮುದಾಯಗಳ ಋಣ ತೀರಿಸಲು ಪಟ್ಟಣದಲ್ಲಿ ವಿಶ್ವಮಾನವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಹಾಗೂ ಮಹರ್ಷಿ ವಾಲ್ಮೀಕಿ ಮಹಾನೀಯರ ಪ್ರತಿಮೆ ನಿರ್ಮಿಸಿದ ಪುಣ್ಯ ನನಗಿದೆ.ಮುಂದಿನ ದಿನಗಳಲ್ಲಿ ಭಕ್ತಿ ಭಂಡಾರಿ ಬಸವೇಶ್ವರ ಸೇರಿದಂತೆ ಕೆಲ ಮಹಾನೀಯರ ಪುತ್ಥಳಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ ಶಿಕ್ಷಣ ಸಂಘಟನೆ ಹೊರಾಟದ ಕಿಚ್ಚು ಹಚ್ಚಿದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳು ನಮಗೆ ಆದರ್ಶವಾಗಬೇಕಿದೆ ಎಂದರು.