ಜಗಳೂರಿಗೆ ಭೇಟಿ ನೀಡಿದ ಟ್ಯಾಟೋ ಸ್ವಾಮಿ

 ಜಗಳೂರು.ಸೆ.೨೦:  ವಿಶ್ವಶಾಂತಿ, ಸಮಾಜದ ಉನ್ನತಿ ಹಾಗೂ ಜಾತಿ ಪದ್ದತಿ ವಿರೋಧಿಸಿ ಪಾದಯಾತ್ರೆ ನಡೆಸುತ್ತಿರುವ ಟ್ಯಾಟೋ ಸ್ವಾಮಿ ಎಂದೇ ಖ್ಯಾತಿ ಪಡೆದಿರುವ ಉಡುಪಿಯ ಶ್ರೀಲಕ್ಷಿö್ಮÃಪತಿ ಸ್ವಾಮಿ  ಪಟ್ಟಣಕ್ಕೆ ಆಗಮಿಸಿದರು.ಮೂಲತಃ ಮೈಸೂರಿನವರಾದ ಇವರು ಸನ್ಯಾಸಿಯಾಗಿದ್ದು, ಆಂಧ್ರದ ವಿಶಾಖ ಪಟ್ಟಣದ ಶಾಂತಿ ಆಶ್ರಮದಲ್ಲಿ ನೆಲಸಿದ್ದಾರೆ. 2016 ಅಕ್ಟೋಬರ್ ತಿಂಗಳಲ್ಲಿ ಆಂಧ್ರ ಪ್ರದೇಶದಿಂದ ಆರಂಭಿಸಿದ ಈ ಯಾತ್ರೆ ತೆಲಂಗಣ, ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯದ ವಿವಿಧ ಹಳ್ಳಿಗಳಿಗೆ ಪಾದಯಾತ್ರೆ ಮೂಲಕ ಪ್ರವಾಸ ಮಾಡಿ ಹಿಂದು ಸನಾತನ ಧರ್ಮದ ಬಗ್ಗೆ ಪ್ರಚಾರ ಪಡಿಸುತ್ತಾ ದೇವಸ್ಥಾನ, ಭಕ್ತರ ಮನೆಯಲ್ಲಿ ಉಳಿದುಕೊಂಡು ಐದು ವರ್ಷ ಪಾದ ಯಾತ್ರೆ ಪೂರ್ಣಗೊಳಿಸಿದ್ದಾರೆ.ಬಿಜೆಪಿ ಮುಖಂಡ ಕಾನನಕಟ್ಟೆ ಪ್ರಭು ಅವರ ಮನೆಗೆ ಭೇಟಿ ನೀಡಿ ಕೆಲವೊತ್ತು ಹಿಂದು ಧರ್ಮದ ಬಗ್ಗೆ ಸಂದೇಶ ನೀಡಿದ ಶ್ರೀಲಕ್ಷಿö್ಮÃಪತಿ ಸ್ವಾಮಿ ನಂತರ ಸುದ್ದಿಗಾರರ ಜತೆ ಮಾತನಾಡಿ, 55 ವರ್ಷಗಳ ಹಿಂದೆಯೇ ಸನ್ಯಾಸಿ ದೀಕ್ಷೆ ತೆಗೆದುಕೊಂಡು ರಾಜ್ಯದ ತುಂಬ ಪ್ರವಾಸ ಮಾಡುತ್ತಿದ್ದೇನೆ. ಜಾತಿ ಪದ್ದತಿ ನಿರ್ಮೂಲನೆ ನನ್ನ ಮೂಲ ಉದ್ದೇಶವಾಗಿದೆ. ಸಂಸ್ಕೃತದಲ್ಲಿ ಜಾತಿ ಎಂದರೆ ಹಂದಿ ಎಂದು ಕರೆಯಲಾಗುತ್ತದೆ. ಭೂಮಿಯಲ್ಲಿ ಹುಟ್ಟಿರುವ ಮಾನವ ಕುಲಕ್ಕೆ ಪಂಚಭೂತಗಳು ಎಲ್ಲರಿಗೂ ಒಂದೇಯಾಗಿದೆ ಬೇರೆ ಇಲ್ಲ. ಅವರವರ ಕುಲ ಕುಸುಬುಗಳಿಂದ ಜಾತಿ ಎಂದು ಕರೆಸಿಕೊಂಡಿದ್ದಾರೆ. ಆದ್ದರಿಂದ ಜಾತಿಯತೆ ತೊಲಗಬೇಕು ಎಂದರು. ಭೂಮಿಯ ಮೇಲೆ, ಭ್ರಷ್ಟಚಾರ, ಅನ್ಯಾಯ, ಅಧರ್ಮ, ಕೊಲೆ, ಅತ್ಯಚಾರದಂತಹ ಮಹಾ ಪಾಪಗಳಿಂದ ದೇವರು ಕುಪಿತನಾಗಿ ಪ್ರಕೃತಿಯ ಮೂಲಕ ನಾಶ ಮಾಡುತ್ತಿದ್ದಾನೆ. ಎಲ್ಲರನ್ನು ಎಚ್ಚರಿಸಲು ಈಗಾಗಲೇ ಹಲವು ಕಡೆ ಭೂಕಂಪನ, ಚಂಡಮಾರುತ, ವಿವಿಧ ರೋಗಗಳು, ದೇಶ ದೇಶಗಳ ನಡುವೆ ಯುದ್ದಗಳು ನಡೆಯುತ್ತಿರುವುದು ದೈವ ಸಂಕಲ್ಪದಿAದ ಈಗಲೂ ಮನುಷ್ಯ ಧರ್ಮದ ಕಡೆ ತಿರುಗದೇ ಹೋದರೆ ಮುಂದೆ ಬೆಂಕಿ ಮಳೆ ಸುರಿದ ಲೋಕ ನಾಶವಾಗಲಿದೆ ಎಂದು ಭವಿಷ್ಯ ನುಡಿದರು. ಮೈ ಮೇಲೆ 35 ದೇವರ ಟ್ಯಾಟೋ: ಉಡುಪಿಯ ಶ್ರೀಲಕ್ಷಿö್ಮÃಪತಿ ಸ್ವಾಮಿಯೂ ಹಣೆ, ಮೈ, ಕೈ ಕಾಲುಗಳ ಮೇಲೆ ಶಿವ ಪಾರ್ವತಿ, ರಾಮ, ಹನುಮ, ಕಾಳಿ, ಬ್ರಹ್ಮ, ವಿಷ್ಟು, ಯಮಧರ್ಮ ಹೀಗೆ 35 ದೇವರುಗಳನ್ನು ಟ್ಯಾಟೋ ಮಾಡಿಸಿಕೊಂಡಿದ್ದಾರೆ. ಹಾಗಾಗಿಯೇ ಈತನು ಟ್ಯಾಟೋ ಸ್ವಾಮಿ ಎಂದೇ ಖ್ಯಾತಿ ಪಡೆದಿದ್ದಾರೆ.ಯಮನ ಆರಾಧಕರು:ಈ ಭೂಮಿಯ ಮೇಲೆ ಯಮ, ಬ್ರಹ್ಮ, ಇಂದ್ರನಿಗೆ ಯಾವುದೇ ದೇವಸ್ಥಾನಗಳಿಲ್ಲ, ಭಕ್ತರು ಪೂಜಿಸುವುದು ವಿರಳ ಆದರೆ ಉಡುಪಿಯ ಶ್ರೀಲಕ್ಷಿö್ಮÃಪತಿ ಸ್ವಾಮಿ ಮಾತ್ರ ಯಮನ ಆರಾಧಕರಾಗಿದ್ದಾರೆ. ಭಕ್ತರ ಮನೆಗೆ ತೆರಳಿದಾಗ ಯಮನ ಶ್ಲೋಕ ಮತ್ತು ಹಾಡುಗಳನ್ನು ಹಾಡಿ ಭಕ್ತಿ ಸಮರ್ಪಣೆ ಮಾಡುತ್ತಾರೆ.