ಜಗಳೂರಿಗೆ ಬಂದ 13 ಜಂಬೋ ಸಿಲೆಂಡರ್

ರ್ಜಗಳೂರು.ಮೇ.೧೯: ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ರೋಗಿಗಳಿಗೆ ಆಕ್ಸಿಜನ್ ಸಮಸ್ಯೆ ಆದ ಸಂದರ್ಭದಲ್ಲಿ ಜಗಳೂರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನೀರಜ್,ಆರೋಗ್ಯ ಇಲಾಖೆಯ ನೋಡೆಲ್ ಅಧಿಕಾರಿ ಗಂಗಾದರಪ್ಪರೊಂದಿಗೆ ಜೆಡಿಎಸ್ ಮುಖಂಡ ಕೆ.ಬಿ.ಕಲ್ಲೇರುದ್ರೇಶ್ ಸ್ವಯಂ ಪ್ರೇರಣೆಯಿಂದ ಜೊತೆಗೂಡಿ ಹರಿಹರ ಸದರನ್ ಆಕ್ಸಿಜನ್ ಲಿಮಿಟೆಡ್‌ನಲ್ಲಿ ತುರ್ತಾಗಿ 13 ಜಂಬೋ ಸಿಲೆಂಡರ್‌ಗಳನ್ನು ತೆಗೆದುಕೊಂಡು ಬಂದು ಕೋವಿಡ್ -19 ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ.ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ಗಂಟೆಗೆ ಎರಡು ಸಿಲೆಂಡರ್ ಅವಶ್ಯಕತೆ ಇದೆ. ಹರಿಹರ ಸದರನ್ ಆಕ್ಸಿಜನ್ ಲಿಮಿಟೆಡ್‌ನಿಂದ ಕೊಟ್ಟೊಷ್ಟು ಸಿಲೆಂಡರ್ ತೆಗೆದುಕೊಂಡು ಬರಬೇಕಾದ ಪರಿಸ್ಥಿತಿ ಇರುವುದರಿಂದ ಜಗಳೂರು ಹರಿಹರಕ್ಕೆ ಎಡತಾಕಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಹಿತದೃಷ್ಠಿಯಿಂದ ಆರೋಗ್ಯ ಇಲಾಖೆಯ ನೋಡೆಲ್ ಅಧಿಕಾರಿ ಗಂಗಾದರಪ್ಪ, ಆಡಳಿತಾಧಿಕಾರಿ ಡಾ.ನೀರಜ್‌ರೊಂದಿಗೆ ಸ್ವಯೋಪ್ರೇರಣೆಯಿಂದ ಭಾಗವಹಿಸಿ ಸೇವೆ ಮಾಡುತ್ತಿದ್ದೇನೆ ಎಂದು ಜೆಡಿಎಸ್ ಮುಖಂಡ ಕೆ.ಬಿ.ಕಲ್ಲೇರುದ್ರೇಶ್ ಪ್ರತಿಕ್ರಿಯೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನೀರಜ್,ಆರೋಗ್ಯ ಇಲಾಖೆಯ ನೋಡೆಲ್ ಅಧಿಕಾರಿ ಗಂಗಾದರಪ್ಪ ಉಪಸ್ಥಿತರಿದ್ದರು.