ಜಗಮಗಿಸುವ ಆಕರ್ಷಕ ವೃತ್ತವಾದ ಕನಕದಾಸ ವೃತ್ತ.


(ಅನಂತ ಜೋಶಿ)
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ, ನ.12: ಹೊಸಪೇಟೆಯ ಕನಕದಾಸ ವೃತ್ತ ಇಂದು ವಿದ್ಯುಕ್ತವಾಗಿ ಉದ್ಘಾಟನೆಯಾದ ಕನಕದಾಸ ವೃತ್ತ ಜಗಮಗಿಸುವ ಮೂಲಕ ಜನಾಕರ್ಷಣೆಯ ತಾಣವಾಗಿ ಕಂಗೊಳಿಸಿತು.
ಹೊಸಪೇಟೆಯ ರೈಲ್ವೆ ನಿಲ್ದಾಣದ ಪ್ರವೇಶದ್ವಾರದಂತಿರುವ ಈ ವೃತ್ತ ಅತ್ಯಂತ ಹಳೆಯ ವೃತ್ತಗಳಲ್ಲಿ ಒಂದಾಗಿದ್ದು ನವೀಕರಣಕ್ಕೆ ಕಾದಿತ್ತು. ಇತ್ತೀಜೆಗೆ ಪ್ರವಾಸೋದ್ಯಮ ಸಚಿವ ಆನಂದಸಿಂಗ್‌ ತಮ್ಮ ಸ್ವಂತ ಅನುದಾನದಲ್ಲಿ ಬೃಹದಾಕಾರದ ಕನಕದಾಸರ ಕಂಚಿನಪ್ರತಿಮೆ ಅದರ ಸೂತ್ತಲೂ ಪ್ರದಕ್ಷಿಣೆಗೆ ಅವಕಾಶ ಹತ್ತಿಳಿಯಲು ವಿಶಾಲ ಮೆಟ್ಟಿಲುಗಳನ್ನು ನಿರ್ಮಾಣ ಮಾಡುವ ಮೂಲಕ ಸುಂದರ ಹಾಗೂ ಹೊಸಪೇಟೆಯಲ್ಲಿಯೆ ವಿಶಾಲ ಜಗಮಗಿಸುವ ವೃತ್ತವಾಗಿ ನಿರ್ಮಾಣ ಮಾಡಿದ್ದಾರೆ. ಕನಕದಾಸರ ಜಯಂತಿಯ ದಿನವಾದ ಇಂದು ವೃತ್ತವನ್ನು ವಿದ್ಯುಕ್ತವಾಗಿ ಉದ್ಘಾಟನೆ ಮಾಡಲಾಗಿದ್ದು ಸಂಜೆ ಆಯೋಜಿಸಿದ್ದ ವಿದ್ಯುತ್ ದೀಪಾಲಂಕಾರ ದೀಪಾವಳಿ ಸಂಭ್ರಮಕ್ಕೆ ಸಾಕ್ಣಿಯಾಗುವಂತಿತು.
ವೃತ್ತದ ಸೂತ್ತವೂ ಮಾಡಿದ ದೀಪಾಲಂಕಾರ ವೃತ್ತದ ಸೌಂದರ್ಯಕ್ಕೂ ಮೆರಗುನೀಡುವಂತಿತ್ತು.
ಸಂಭ್ರಮಿಸಿದ ಆನಂದಸಿಂಗ್
ಹೊಸಪೇಟೆಯಲ್ಲಿಯೆ ಅತ್ಯಾಕರ್ಷಕ ವೃತ್ತವಾಗಿ ನಿರ್ಮಾಣವಾದ ಕನಕದಾಸ ವೃತ್ತದ ಸಂಭ್ರಮವನ್ನು ನೋಡಲು ಬರುವ ಜನರೊಂದಿಗೆ ಹಾಡುಗುನಗೂತ್ತಾ ಸೆಲ್ಪಿಗೆ ಸಾಥ್ ನೀಡುವ ಮೂಲಕ  ಸಂಭ್ರಮದಲ್ಲಿ ಸಚಿವ ಆನಂದಸಿಂಗ್ ಸಂಭ್ರಮಿಸುತ್ತಿರುವುದು ಕಂಡುಬಂತು. ಸುಮಾರು ಎರಡು ತಾಸುಗಳಿಗೂ ಅಧಿಕಕಾಲ ಪುಟಾಣಿ ಮಕ್ಕಳಿಂದ ಹಿಡಿದು ಹಿರಿಜೀವಗಳೊಂದಿಗೂ ಸೆಲ್ಪಿ ತೆಗೆಸಿಕೊಳ್ಳುತ್ತಿರುವುದು ಕಂಡುಬಂತು.
ಒಟ್ಟಾರೆ ಕನಕದಾಸ ವೃತ್ತವೂ ಒಂದು ಜನಾಕರ್ಷಣೆಯ ಕೇಂದ್ರವಾಗುವ ಮುನ್ನಸೂಚನೆಯಂತು ಇಂದು ಕಂಡುಬಂತು.