ಜಗನ್ಮಾತೆಯ ಇಚ್ಛೆಯಂತೆ ನಗರದ ಹುತ್ತಿನಲ್ಲಿ ಉದ್ಭವಿಸಿದ ಯಲ್ಲಮ್ಮ ತಾಯಿ

ಲೋಕ ಕಲ್ಯಾಣಕ್ಕಾಗಿ ತಾಯಿಯ ಉದ್ಭವ : ಉಭಯ ಶ್ರೀಗಳು
ರಾಯಚೂರು.ಅ.27- ನಗರದ ಜ್ಯೋತಿ ಕಾಲೋನಿ ಹಿಂಬಾಗದಲ್ಲಿರುವ ಅಲ್ಲಮ ಪ್ರಭು ಕಾಲೋನಿಯಲ್ಲಿ ಇತ್ತೀಚಿಗೆ ಅದ್ಭುತವಾದ ರೀತಿಯಲ್ಲಿ ಹುತ್ತಿನಲ್ಲಿ ಉದ್ಭವವಾಗಿರುವಂತ ಯಲ್ಲಮ್ಮ ತಾಯಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ನಿಮಿತ್ಯ ಅ.17 ರಿಂದ ಅ.25 ರವರೆಗೆ ಸತತ ಒಂಬತ್ತು ದಿನಗಳ ಕಾಲ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಸ್ಥಾಪಕರಾದ ರಾಜೇಶ್ವರಿ ವೆಂಕಟೇಶ ನಾಯಕ ಹಾಗೂ ದೇವಸ್ಥಾನದ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಅ.22 ರಂದು ಉದ್ಭವ ಯಲ್ಲಮ್ಮ ತಾಯಿಯ ಭಕ್ತಿಗೀತೆಗಳು ಜಿಲ್ಲೆಯ ಕಲಾವಿದರೇ ಇಂಪಾಗಿ ಹಾಡಿದ ಧ್ವನಿ ಸುರುಳಿಯ ಲೋಕಾರ್ಪಣೆ ಕಾರ್ಯಕ್ರಮವೂ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಗರದ ಕಿಲ್ಲೇಬೃಹನ್ಮಠದ ಷ.ಬ್ರ.ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಸೋಮವಾರಪೇಟೆ ಹಿರೇಮಠದ ಷ.ಬ್ರ. ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಧ್ವನಿ ಸುರುಳಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಕಿಲ್ಲೇಬೃಹ್ಮಠದ ಶ್ರೀಗಳು ಬೃಹತ್ ಬೆಟ್ಟದ ಹತ್ತಿರ ಬೃಹತ್ ಗಾತ್ರದ ಹುತ್ತಿನಲ್ಲಿ ಜಗನ್ಮಾತಾ ಯಲ್ಲಮ್ಮ ತಾಯಿಯು ತನ್ನ ಸಂಕಲ್ಪದ ಪ್ರಕಾರ ಜಲಾಭಿಷೇಕ ಮತ್ತು ಕ್ಷೀರಾಭಿಷೇಕವನ್ನು ಗೈದನಂತರವೇ ಈ ನಾಡಿಗೆ ತನ್ನ ದರ್ಶನದ ಭಾಗ್ಯ ನಮಗೆ ಹೊದಗಿಸಿಕೊಟ್ಟಿದ್ದಾಳೆ ಎಂದರೆ ಇದು ನಿಜವಾಗಿಯೂ ದೃಷ್ಠಶಕ್ತಿಗಳನ್ನು ಸರ್ವನಾಶಮಾಡಿ ಶಿಷ್ಠರ ರಕ್ಷಣೆಗೈಯಲೆಂದೇ ಈ ಧರೆಗೆ ಮಾಹಾಂಕಾಳಿ ಬಂದಿರುವಳು ಎಂದರೆ ತಪ್ಪಾಗಲಿಕ್ಕಿಲ್ಲ.
ಕಾರಣ ಸರ್ವ ಸದ್ಭಕ್ತರು ತಾಯಿಯಲ್ಲಿ ತಮ್ಮ ಇಷ್ಠಾರ್ಥಗಳನ್ನು ಭಕ್ತಿಯಿಂದ ಬೇಡಿಕೊಂಡರೆ ಖಂಡಿತವಾಗಿಯೂ ನಮ್ಮ ಇಷ್ಠಾರ್ಥಗಳನ್ನು ಸಿದ್ಧಿಸುವ ಶಕ್ತಿ ಈ ಒಂದು ಸ್ಥಾನದಲ್ಲಿ ಇದೆ ಸರ್ವ ಸದ್ಭಕ್ತರೂ ಸಹಿತ ಯಲ್ಲಮ್ಮ ತಾಯಿಯ ಸೇವೆ ಮಾಡಿ ಸನ್ಮಾರ್ಗದಲ್ಲಿ ತಮ್ಮ ಜೀವನ ಸಾಗಲಿ ಎಂದು ತಮ್ಮ ಶುಭಾಶೀರ್ವಚನದಲ್ಲಿ ಆಶೀರ್ವದಿಸಿದರು. ನಂತರ ಆಶೀರ್ವಚನ ನೀಡಿದ ಸೋಮವಾರಪೇಟೆ ಹಿರೇಮಠದ ಶ್ರೀಗಳು ಹುತ್ತಿನಲ್ಲಿ ಉದ್ಭವವಾದ ಯಲ್ಲಮ್ಮ ತಾಯಿಯ ಭಕ್ತಿಗೀತೆಯ ಧ್ವನಿ ಸುರುಳಿ ತಾಯಿ ಉದ್ಭವವಾದ ಕೆಲವೇ ದಿನಗಳಲ್ಲಿ ನಮ್ಮ ಜಿಲ್ಲೆಯ ಕಲಾವಿದರು ತಾಯಿಯ ಭಕ್ತಿಗೀತೆಗಳನ್ನು ಸಾಹಿತ್ಯ ಲೇಖನ ಮಾಡಿ ಅದಕ್ಕೆ ಬೇಕಾದಂತ ರಾಗಗಳ ಸಂಯೋಜನೆಯನ್ನು ಮಾಡಿ ಸರ್ವ ಕಲಾವಿದರೂ ಸಹಿತ ಒಮ್ಮನಸ್ಸಿನಿಂದ ಕೂಡಿ ಸುಂದರ ಕಂಠದಿಂದ ಹಾಡಿ ಅದಕ್ಕೆ ಬೇಕಾದಂತ ಸಂಗೀತವನ್ನು ಕೊಟ್ಟು ಇಸ್ಟೋಂದು ಬೇಗ ಧ್ವನಿ ಸುರುಳಿಯನ್ನು ಉಭಯ ಶ್ರೀಗಳಿಂದ ಲೋಕಾರ್ಪಣೆ ಮಾಡಿದ ಕೀರ್ತಿ ಜಿಲ್ಲೆಯ ಕಲಾವಿದರಿಗೆ ಸಲ್ಲಬೇಕು ಹಾಗೂ ನಮಗೂ ತುಂಬ ಸಂತೋಷವಾಗಿದೆ ಎಂದು ತಮ್ಮ ಆಶೀರ್ವಚನದಲ್ಲಿ ಹೇಳಿದರು.
ಒಂಬತ್ತು ದಿನಗಳಿಂದ ಸಂಗೀತ ವಿಶೇಷ ಸೇವೆ ಸಲ್ಲಿಸಿದ ಕಲಾವಿದರಾದ ಸುಧಾಕರ್ ಅಸ್ಕಿಹಾಳ, ಗಾನಯೋಗಿ ಸಂಗೀತ ಪಾಠ ಶಾಲೆಯ ರಾಘವೇಂದ್ರ ಆಶಾಪೂರ, ವೆಂಕಟೇಶ ಆಲ್ಕೋಡ್, ಮಹಾಲಕ್ಷ್ಮೀ ನಾಯಕ, ವೀರೇಂದ್ರ ಕುಮಾರ ಕುರ್ಡಿ, ಮಹಾಲಕ್ಷ್ಮೀ, ಅನಿಲ್ ಕುಮಾರ ಜಾಗೀರ ಮರ್ಚೇಡ್,
ಬಸವ ಕೇಂದ್ರ ಹಾಗೂ ಪಿಕಳಿಹಾಳ ಅಯ್ಯಪ್ಪ ಸ್ವಾಮಿ ಹಿರೇಮಠ ಇವರಿಗೆ ಶಾಲು ಹೂಮಾಲೆ ಹಾಕಿ ತಾಯಿಯ ನೆನಪಿನ ಕಾಣಿಕೆ ನೀಡಿ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಯೋಗ ಗುರು ಹಾಗೂ ಪತ್ರಿಕಾ ಛಾಯಾಗ್ರಾಹಕರಾದ ಮಲ್ಲಿಕಾರ್ಜುನ ಸ್ವಾಮಿ, ಉದ್ಭವ ಹುತ್ತಿನ ಯಲ್ಲಮ್ಮ ತಾಯಿ ದೇವಸ್ಥಾನದ ಅರ್ಚಕರಾದ ವೇ.ಮೂ. ರಾಜಶೇಖರ ಶಾಸ್ತಿಗಳು ಕಲ್ಮಲಾ ಹಾಗೂ ಸೇವಾ ಸಮಿತಿಯ ಸರ್ವ ಪದಾಧಿಕಾರಿಗಳು ಬಡಾವಣೆಯ ಸರ್ವ ಸದ್ಭಕ್ತರು ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು. ‌ಶರನ್ನವರಾತ್ರಿಯ ಮುಕ್ತಾಯದ ದಿನದಂದು ಛಾಯಾಗ್ರಾಹಕ ಕಲಾವಿದರಾದ ಪಿಕಳಿಹಾಳ ಅಯ್ಯಪ್ಪ ಸ್ವಾಮಿ ಹಿರೇಮಠ ಇವರು ತಮ್ಮ ಗಾಯನ ಸೇವೆಯಲ್ಲಿ “ಶೆಹೆರಾವಾಲಿ ಮಾತಾ” ಎಂಬ ಹಿಂದಿಯ ಭಕ್ತಿಗೀತೆಯನ್ನು ಹಾಡಿ ನೆರೆದ ಭಕ್ತರ ಮೆಚ್ಚಿಗೆ ಪಡೆದರು. ಇವರಿಗೆ ಹಾರ್ಮೋನಿಯಮ್ ಸಾಥಿ ರಾಘವೇಂದ್ರ ಆಶಾಪೂರು, ತಬಲಾ ಸಾಥಿ ಬ್ರಹ್ಮೇಂದ್ರ ಕುಮಾರ ನೀಡಿದರು. ನಂತರ ದೇವಸ್ಥಾನದ ಮಾತೆ ಶ್ರೀಮತಿ ರಾಜೇಶ್ವರಿ ವೆಂಕಟೇಶರವರು ಸನ್ಮಾನಿಸಿ ಗೌರವಿಸಲಾಯಿತು. ಸತತವಾಗಿ ಒಂಬತ್ತು ದಿನಗಳ ವರೆಗೆ ದೇವಸ್ಥಾನಕ್ಕೆ ಆಗಮಿಸಿದ ಸರ್ವ ಸದ್ಭಕ್ತರಿಗೆ ನಿತ್ಯವೂ ಮಹಾ ಪ್ರಸಾದವನ್ನು ವಿತರಣೆ ಮಾಡಲಾಯಿತು.