ಜಗನ್ಮಾತೆಯ ಅಮೃತ ಮಹೋತ್ಸವ ಕಾರ್ಯಕ್ರಮ

ಮುದಗಲ್,ಜು.೦೯-
ಹೈದರಾಬಾದ್ ಕರ್ನಾಟಕದ ಹಿಂದುಳಿದ ಪ್ರದೇಶವೆನಿಸಿದ ಲಿಂಗಸೂಗೂರು ತಾಲೂಕಿನ ಸಣ್ಣಗ್ರಾಮ ಸಜ್ಜಲಗುಡ್ಡ, ಗುಡುದೂರಿನ ಗುರುದೇವ ದೊಡ್ಡಬಸವೇಶ್ವರ ಯುವಯೋಗಿಗಳ ಕರಸಂಜಾತೆ ಜಗನ್ಮಾತೆ ಸಜ್ಜಲಗುಡ್ಡದ ಶ್ರೀ ಶರಣಮ್ಮ ತಾಯಿಯವರ ಪುಣ್ಯ ತಪೋಭೂಮಿಯಾಗಿ ೭೫ವರ್ಷಗಳ ಹಿಂದೆ ಸರ್ವರಿಗೂ ಒಳಿತಾಗಲೆಂದು ಉಚಿತ ಪ್ರಸಾದ ನಿಲಯ ಒಂದನ್ನು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅರಿವು ಅನ್ನ ನೀಡಿ ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ ಎಂದು ಸಜ್ಜಲಗುಡ್ಡ ಮಠದ ಕರಿವೀರಯ್ಯ ಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದರು.
೭೫ ವರ್ಷಗಳು ತುಂಬಿರುವ ಸುಸಂದರ್ಭದ ಸವಿನೆನಪಿಗಾಗಿ ಬರುವ ಅಗಸ್ಟ್ ೧೨ ಹಾಗೂ ೧೩ರಂದು ಸುಕ್ಷೇತ್ರ ಸಜ್ಜಲಗುಡ್ಡದಲ್ಲಿ ಪ್ರಸ್ತುತ ಪೀಠಾಧಿಪತಿಗಳಾದ ಪೂಜ್ಯಶ್ರೀ ನೀಲಕಂಠರ್ಯಾತಾತನವರು ಗುಡುದೂರು, ಪೂಜ್ಯಶ್ರೀ ದೊಡ್ಡ ಬಸವಾರ್ಯ ತಾತನವರು ಸಜ್ಜಲಗುಡ್ಡ ಉಭಯ ಪೂಜ್ಯರ ಮಹಾದಾಶಿರ್ವಾದದಿಂದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಎರಡು ದಿನಗಳ ಬೃಹತ್ ಕಾರ್ಯಕ್ರಮದಲ್ಲಿ ಉಜ್ಜಯನಿ ಜಗದ್ಗುರು ಮಹಾ ಸನ್ನಿಧಿಯವರು ಹಾಗೂ ನಾಡಿನ ಹರ ಗುರು ಚರ ಮೂರ್ತಿಗಳು ದಯಮಾಡಿಸುತ್ತಿದ್ದು, ಹಿರಿಯ ಸಾಹಿತಿಗಳು ಸಂಗೀತಗಾರರು ಕಲಾವಿದರು ನೃತ್ಯ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಬೃಹತ್ ವೇದಿಕೆಯಲ್ಲಿ ಇದೆಲ್ಲ ನಡೆಯಲಿದ್ದು ಹಳೆಯ ವಿದ್ಯಾರ್ಥಿಗಳು ತನು ಮನ ಧನದಿಂದ ಭಾಗವಹಿಸಲು ಕೋರಲಾಗಿದೆ, ಈ ಕೆಳಗಿನ ದೂರವಾಣಿಗಳಿಗೆ ಸಂಪರ್ಕಿಸಲು ತಿಳಿಸಲಾಗಿದೆ.
೯೦೦೮೮೧೭೩೭೩,೯೮೮೬೯೬೪೨೦೫,೯೯೪೫೪೮೪೯೧. ಶ್ರೀ ಮಠದ ಭಕ್ತಾದಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಶ್ರೀ ಮಠದ ವತಿಯಿಂದ ವಿನಂತಿಸಲಾಯಿತು.