ಜಗದ ಕವಿ, ಯುಗದ ಕವಿ ರಸಋಷಿ ರಾಷ್ಟ್ರಕವಿ ಕುವೆಂಪುಃ ಶೇಷರಾವ್ ಮಾನೆ

ವಿಜಯಪುರ, ಡಿ.30-ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 116ನೇ ಹುಟ್ಟು ಹಬ್ಬವನ್ನು ಕರ್ನಾಟಕ ಸರಕಾರಿ ನೌಕರರ ಭವನದಲ್ಲಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ್ ಮಾನೆ ಮಾತನಾಡಿ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ರಾಷ್ಟ್ರಕವಿ ಕುವೆಂಪು ಅವರು. ಜಗದ ಕವಿ, ಯುಗದ ಕವಿ ರಸಋಷಿ ಎಂಬ ಕನ್ನಡದ ಕಂಪು, ಕನ್ನಡದ ತಂಪು ರಾಷ್ಟ್ರಕವಿ ಕುವೆಂಪು ಎಂದರು.
ಸಾಹಿತ್ಯ ಕೃಷಿಯಿಂದ ಮನುಕುಲಕ್ಕೆ ಸಮಾನತೆಯನ್ನು ಬಿತ್ತಿದವರು. ಕರ್ನಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ ಮಂತ್ರಕಣಾ, ಶಕ್ತಿಕಣಾ, ತಾಯಿ ಕಣಾ, ದೇವಿಕಣಾ, ಬೆಂಕಿಕಣಾ ಎಂಬ ಕವಿತೆಯೊಂದಿಗೆ ಕನ್ನಡದ ಸ್ವಾಭಿಮಾನವನ್ನು ಕನ್ನಡಿಗರಲ್ಲಿ ತುಂಬಿದ ಮಹಾಮಾನವತಾವಾದಿ ಕುವೆಂಪುರವರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಕರ್ನಾಟಕ ನವನಿರ್ಮಾಣ ವೇದಿಕೆ ಜಿಲ್ಲಾಧ್ಯಕ್ಷ ಗುರುರಾಜ ಪಂಚಾಳ, ವಸಂತರಾವ ಕುಲಕರ್ಣಿ, ಸಂತೋಷ ಕವಲಗಿ, ಬಾಸು ರಾಠೋಡ, ತಿಪ್ಪಣ್ಣ ಉಕ್ಕಿ, ಸಾಹೇಬಲಾಲ ದಳವಾಯಿ, ಶಂಕರ ರಾಠೋಡ, ಗೌಸ ಇನಾಮದಾರ, ಸಾದಿಕ ಶೇಖ, ಗಂಗಾರಾಮ ಚವ್ಹಾಣ, ಇಮ್ತಿಯಾಜ ಮುಲ್ಲಾ, ಮುಂತಾದವರು ಉಪಸ್ಥಿತರಿದ್ದರು.