ಜಗದ್ಗುರು ಸಿದ್ಧಾರೂಢರ ಮಂದಿರ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ನ.28ರಿಂದ

ಆಳಂದ:ನ.25: ಪಟ್ಟಣದ ಶರಣನಗರ ಬಳಿಯ ಭಾರತ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಜಗದ್ಗುರು ಶ್ರೀ ಸಿದ್ಧಾರೂಢರ ಮಂದಿರ ಉದ್ಘಾಟನೆ ಹಾಗೂ ಸಿದ್ಧಾರೂಢರ ಅಮೃತ ಶೀಲಾ ಮೂರ್ತಿಯ ಪ್ರತಿಷ್ಠಾಪನೆ, ಅವರ ಕಥಾಮೃತದ ಶತಮಾನೋತ್ಸವ ಕಾರ್ಯಕ್ರಮ ನ.28ರಿಂದ ಡಿ.1ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಯಳಸಂಗಿ ಸಿದ್ಧಾರೂಢ ಮಠದ ಶ್ರೀ ಪರಮಾನಂದ ಮಹಾಸ್ವಾಮಿಗಳು ತಿಳಿಸಿದರು.

ಈ ಕುರಿತು ದೇವಸ್ಥಾನದಲ್ಲಿ ಗುರುವಾರ ನಡೆದ ಕಾರ್ಯಕ್ರಮದ ಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಈಗಾಗಲೇ ಬೃಹತ ವೇದಿಕೆ ಸೇರಿ ಕಾರ್ಯಕ್ರಮದ ಯಶಸ್ವಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನ.28ರಂದು ಬೆಳಗಿನ 10:00ಗಂಟೆಗೆ ಸಿದ್ಧರೂಢರ ಅಮೃತ ಶಿಲಾಮೂರ್ತಿ ಹಾಗೂ ಶತಮಾನೋತ್ಸಸವ ಆಚರಿಸಿಕೊಳ್ಳುತ್ತಿರುವ ಶ್ರೀ ಸಿದ್ಧರೂಢರ ಕಥಾಮೃತದ ಭವ್ಯ ಮೆರವಣಿಗÉಗೆ ಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದೇವ ಜೊತೆ ಚಾಲನೆ ನೀಡಲಾಗುವುದು ಎಂದರು.

ನ.29ರಂದು ಬೆಳಗಿನ 9:00ಗಂಟೆಗೆ ಪ್ರಣವ ಧ್ವಜಾರೋಹಣ ಮುಚಳಂಬ ಸಂಸ್ಥಾನ ಮಠದ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ನೆರವೇರಿಸುವರು. ತಾವು ಗೋ ಪೂಜೆ ನೆರವೇರಿಸಲಿದ್ದು, ಎಂದರು.

ನಂತರ ಧಾರ್ಮಿಕ ಸಮಾರಂಭದ ಉದ್ಘಾಟನೆಯನ್ನು ಅಕ್ಕಲಕೋಟ ಮಠದ ಶ್ರೀ ಚಿಕ್ಕರೇವಣಸಿದ್ಧ ಶಿವಶರಣ ಮಹಾಸ್ವಾಮಿಗಳು ಸಾನ್ನಿಧ್ಯದಲ್ಲಿ ಮುಚ್ಚಳಂಬದ ಶ್ರೀಗಳು ನೇತೃತ್ವ ವಹಿಸುವರು. ಕಲಬುರಗಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಅವರು ಉದ್ಘಾಟನೆ ನೆರವೇರಿಸುವರು. ಶ್ರೀ ಚನ್ನಬಸವ ಪಟ್ಟದೇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮೈಂದರ್ಗಿಯ ಶ್ರೀ ಅಭಿನವ ರೇವಣಸಿದ್ಧ ಪಟ್ಟದೇವರು ಸಮ್ಮುಖ ಕಲ್ಲಹಂಗರಗಾದ ಗೋಪಾಲ ಶಾಸ್ತ್ರೀಗಳು, ಸಿದ್ಧಯ್ಯ ಶಾಸ್ತ್ರೀಗಳು ತೋಳನೂರ ಅಲ್ಲದೆ, ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್. ಖಜೂರಿ, ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ನೇಕಾರ ಸಮಾಜ ಅಧ್ಯಕ್ಷ ಸೂರ್ಯಕಾಂತ ತಟ್ಟಿ, ಗುತ್ತಿಗೆದಾರ ರೇವಣಸಿದ್ಧಪ್ಪ ಎಸ್. ನಾಗೂರೆ ಆಗಮಿಸಲಿದ್ದಾರೆ ಎಂದರು.

ಸಂಜೆ 6:00ಗಂಟೆಗೆ ಧಾರ್ಮಿಕ ಸಮಾರಂಭದ ಸಾನ್ನಿಧ್ಯವನ್ನು ಇಂಚಲ ಶಿವಯೋಗೀಶ್ವರ ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು, ಪವಾನ ಸಾನ್ನಿಧ್ಯವನ್ನು ಬೀದರ ಚಿದಂಬರಾಶ್ರಮದ ಡಾ. ಶಿವುಕುಮಾರ ಮಹಾಸ್ವಾಮಿಗಳು ವಹಿಸುವರು. ಅಕ್ಕಲಕೋಟ ಮಠದ ಚಿಕ್ಕರೇವಣಸಿದ್ಧ ಮಹಾಸ್ವಾಮಿಗಳು, ಯಳವಂತಗಿ, ಮುಚ್ಚಳಂಬ, ಯಳಸಂಗಿ, ಶರಣ ಮಂಟಪ ಶ್ರೀಗಳು ಆಗಮಿಸುವರು. ಕಲಬುರಗಿ ಸಿದ್ಧರೂಢ ಮಠದ ಲಕ್ಷ್ಮೀದೇವಿಯವರು ಅಧ್ಯಕ್ಷತೆ ವಹಿಸುವರು. ಅಲ್ಲದೆ ಇನ್ನಿತರ ಮಠಾಧೀಶರ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಗೃಹ ಸಚಿವ ಸಿದ್ಧರಾಮ ಮೇತ್ರೆ, ಮಾಜಿ ಶಾಸಕ ಬಿ.ಆರ್. ಪಾಟೀಲ, ಮಾಳಿ ಸಮಾಜ ಜಿಲ್ಲಾಧ್ಯಕ್ಷ ಸಿದ್ಧಣ್ಣಾ ಮಾಲಗಾರ, ತಾಲೂಕು ಅಧ್ಯಕ್ಷ ಪಂಡಿತ ಎಂ. ಶೇರಿಕಾರ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶರಣಬಸಪ್ಪ ಎಸ್. ಪಾಟೀಲ, ಶಂಕರರಾವ್ ದೇಶಮುಖ ಪಾಳ್ಗೊಳ್ಳಲಿದ್ದಾರೆ ಎಂದು ಶ್ರೀಗಳು ಹೇಳಿದರು.

ನ.30ರಂದು ಬೆಳಗಿನ ಜಾವ ಬೀದರ್ ಚಿದಂಬರಾಶ್ರಮದ ಡಾ. ಶಿವುಕುಮಾರ ಶ್ರೀಗಳಿಂದ ಸಿದ್ಧಾರೂಢರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ. ನಂತರ ಧಾಮಿಕ ಸಭೆಯಲ್ಲಿ ಬೀದರ್ ಶ್ರೀಗಳು, ಇಂಚಲ ಮಠದ ಶ್ರೀ, ಮುಚ್ಚಳಂಬ, ಅಕ್ಕಲಕೋಟ, ಕಲಬುರಗಿ, ಆಳಂದ, ಯಳಸಂಗಿ, ಮೈಂದರ್ಗಿ, ಯಳವಂತಗಿ ಸೇರಿ ಮತ್ತಿತರು ಶ್ರೀಗಳು ಪಾಲ್ಗೊಳ್ಳುವರು. ಅಲ್ಲದೆ, ಮುಖ್ಯ ಅತಿಥಿಗಳಾಗಿ ಶಾಸಕ ಸುಭಾಷ ಗುತ್ತೇದಾರ, ಎಸ್‍ಪಿ ಇಶಾಪಂತ, ಡಿವೈಎಸ್ಪಿ ರವಿಂದ್ರ ಶಿರೂರ ಇನ್ನಿತರು ಗಣ್ಯರು ಆಗಮಿಸುವರು.

30ರಂದು ಸಂಜೆ 6:30ಕ್ಕೆ ದಾನಮೇಕಂ ಕಲೌಯುಗ ವಿಷಯದ ಪ್ರವಚನ ನಡೆಲಿದೆ. ಅಕ್ಕಲಕೋಟದ ಚಿಕ್ಕರೇವಣಸಿದ್ಧ ಮಹಾಸ್ವಾಮಿಗಳು, ಬಬಲಾದ, ಯಳಸಂಗಿ ಮಠದ ಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳು, ಆಳಂದ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ಬೀದರನ ಸಿದ್ಧೇಶ್ವರಿ ಮಾತಾಜಿ ಮತ್ತು ಅಧ್ಯಕ್ಷತೆಯನ್ನು ಬೀದರ ಗಣೇಶಾನಂದ ಮಹಾರಾಜರು ಸೇರಿ ಶ್ರೀಗಳು ಗಣ್ಯರು ಆಗಮಿಸಲಿದ್ದಾರೆ ಎಂದರು.

ಡಿ.1ರಂದು ಬೆಳಗಿನ 9:30ಕ್ಕೆ ಪ್ರವಚನ ಸಮಾರಂಭದ ಸಾನ್ನಿಧ್ಯವನ್ನು ನಿರಗುಡಿಯ ಮಲ್ಲಯ್ಯಾ ಮುತ್ತ್ಯಾ ಅವರು ವಹಿಸುವರು. ಬಡದಾಳ, ಮಾದನಹಿಪ್ಪರಗಾ, ನಾಗರಾಳ, ಬೀದರ ಅನೇಕ ಶ್ರೀಗಳು ಆಗಮಿಸುವರು. ಕಾರ್ಯಕ್ರಮದ ಯಶಸ್ವಿಗೂ ನಗರದ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿ ಮಹಾರಾಜ ಸಾಮಾಜಿಕ, ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಧರ್ಮಲಿಂಗ ಜಗದೆ, ಸುಭಾಷ ಬಳುರಗಿ, ಶಿವಾನಂದ ಚಿಂಚೋಳಿ, ಬಸವರಾಜ ಯಳಮೇಲಿ, ಸಂಜಯಕುಮಾರ ಉಂಬರಗಿ, ಮಲ್ಲಿಕಾರ್ಜುನ ಮಾಳಿ, ಮುಖಂಡ ಶ್ರೀಶೈಲ ಖಜೂರಿ ಮತ್ತಿತರು ಉಪಸ್ಥಿತರಿದ್ದರು.