ಜಗದ್ಗುರು ಶ್ರೀ ರೇಣುಕಾಚಾರ್ಯರ ತತ್ವಾದರ್ಶ ಪಾಲನೆಗೆ ಮಹಾಂತ ಶ್ರೀ ಕರೆ

ಆಳಂದ:ಮಾ.6: ಸಮಸ್ತ ಮಾನವ ಕಲ್ಯಾಣಕ್ಕಾಗಿ ತಮ್ಮ ತತ್ವಾದರ್ಶವನ್ನು ಬೋಧಿಸಿದ ಜಗದ್ಗುರು ಶ್ರೀ ರೇಣುಕಾಚಾರ್ಯರ ನೀಡಿದ ಸಂಸ್ಕಾರ ಮತ್ತು ಆದರ್ಶ ಪಾಲನೆಗೆ ಮುಂದಾಗಬೇಕು ಎಂದು ಆಳಂದ ನಂದವಾಡಗಿ, ಜಾಲವಾದಿ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ಹಿರಿಯ ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಳು ಇಂದಿಲ್ಲಿ ಕರೆ ನೀಡಿದರು.

ಸ್ಥಳೀಯ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ನಿಮಿತ್ತವಾಗಿ ಶ್ರೀಮಠದಲ್ಲಿನ ರೇಣುಕರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಜಗದ್ಗುರು ಶ್ರೀ ರೇಣುಕಾಚಾರ್ಯರು ಮಾನವನ ದಾನವ ಗುಣಗಳನ್ನು ದಹಿಸಿ ಆತನನ್ನು ಮಹಾದೇವನನ್ನಾಗಿ ಅರ್ಪೂವ ಸಿದ್ಧಾಂತವನ್ನು ನೀಡಿದ್ದಾರೆ. ಅವರು ಹಾಕಿಕೊಟ್ಟ ಮಾನವ ಧರ್ಮಮಾರ್ಗವು ಸಮಾಜದಲ್ಲಿ ಸುಖ ಶಾಂತಿಯನ್ನು ಬೋಧಿಸುತ್ತದೆ. ಅವರ ಆರಾಧನೆಯ ಬದುಕಿಗೆ ದೊಡ್ಡ ಶಕ್ತಿಯಾಗಿದ್ದು, ನೀಡಿದ ಸಿದ್ಧಾಂತ ಸೀಖಾಮಣಿ ಗೃಂಥದ ತತ್ವಗಳು ಆಚರಣೆಗೆ ತಂದರೆ ಬದುಕು ಹಸನಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ್ ಮಹಾಸಭ ಸಮಾಜದ ತಾಲೂಕು ಅಧ್ಯಕ್ಷ ಶರಣಬಸಪ್ಪಾ ಪಾಟೀಲ ಪೂಜೆ ನೆರವೇರಿಸಿದರು.

ಮಹಾಸಭಾ ಯುವ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ, ಶರಣು ಬಿ. ಕುಂಬಾರ, ದಿನೇಶ ಪಾಟೀಲ, ಶಿವಕಾಂತಯ್ಯ ಸ್ವಾಮಿ ಹೆಬಳಿ, ಸತೀಶ ಪಾಟೀಲ ಖಾನಾಪೂರ, ವಿಜಯ ಕುಂಬಾರ, ರಾಹುಲ ಅಚಲೇರಿ, ಮಹಾದೇವ ಎಸ್. ಹತ್ತಿ, ಪ್ರವೀಣ ಚಿಲ್ಲಾಳ, ಶಿವಕೋಟಿ ಸ್ವಾಮಿ, ಸಿದ್ಧಯ್ಯಾ ಸ್ವಾಮಿ ಕೋತನಹಿಪ್ಪರಗಾ ಮತ್ತಿತರು ಉಸ್ಥಿತರಿದ್ದರು.

ಮುನ್ನಹಳ್ಳಿ ಗ್ರಾಪಂನಲ್ಲಿ ಆಚರಣೆ: ಮುನ್ನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಊರಿನ ಎಲ್ಲಾ ಪ್ರಮುಖ ಮುಖಂಡರು ಹಾಗೂ ಜಂಗಮ ಸಮಾಜದ ಮುಖಂಡರ ಪಾಲ್ಗೊಂಡು ಜಯಂತೋತ್ಸವ ಆಚರಿಸಿದರು. ಗುಂಡಯ್ಯ ಸ್ವಾವಿ,ು ರಾಚಯ್ಯ ಸ್ವಾಮಿ, ವಿರೂಪ್ಪಾಕ್ಷಯ್ಯ ಸ್ವಾಮಿ, ಮುಖಂಡ ಶಿವಪುತ್ರಪ್ಪ ಪಾಟೀಲ್, ಪ್ರಭುಲಿಂಗ ಜುಜರ್ಕೆ, ಶಿವಾ ಪಿಂರಗೆ, ಮಸನಪ್ಪ ಕಣಮುಸ, ಶಿವಪುತ್ರಪ್ಪ ಕಿಣಗಿ, ಸಿದ್ದು ವೇದಶಟ್ಟಿ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.