ಜಗದ್ಗುರು ಶಂಕರಾಚಾರ್ಯರ ಜಯಂತಿ ಆಚರಣೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.14: ಬ್ರಾಹ್ಮಣ ಸಮಾಜದ ವತಿಯಿಂದ ಪಟ್ಟಣದಲ್ಲಿ ಜಗದ್ಗುರು ಶಂಕರಾಚಾರ್ಯರ ಜಯಂತಿಯನ್ನು ಸಡಗರ ಸಂಭ್ರಮ ಮತ್ತು ಭಕ್ತಿಯಿಂದ ಆಚರಿಸಿದರು.
ತಾಲ್ಲೂಕಿನ ವಿವಿದೆಡೆಯಿಂದ ಆಗಮಿಸಿದ್ದ ಸಮಾಜದ ಮಹಿಳೆಯರೂ ಸೇರಿದಂತೆ ನೂರಾರು ಸಂಖ್ಯೆಯ ವಿಪ್ರರು ಈಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ , ವಿಶೇಷ ಪೂಜಾವಿಧಿ ವಿಧಾನಗಳಲ್ಲಿ ಭಾಗವಹಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.
ನಂತರ ಶಂಕರಾಚಾರ್ಯರ ಪಟವನ್ನು ಅಲಂಕೃತ ವಾಹನದಲ್ಲಿ ಇಟ್ಟು ಸಿಂಗರಿಸಿ ಪಟ್ಟಣದ ರಾಜಬೀದಿಯಲ್ಲಿ ವೇದ ಘೋಷಗಳೊಂದಿಗೆ ಧಾರ್ಮಿಕ ಚಿಂತಕರಾದ ಗೋಪಾಲಕೃಷ್ಣ ಅವದಾನಿ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು. ಭಜನೆ ವೇದಘೋಷ, ಜೈಕಾರಗಳು ಮೊಳಗಿದವು
ಈಶ್ವರ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಉಪನ್ಯಾಸದಲ್ಲಿ ಗೋಪಾಲಕೃಷ್ಣ ಅವದಾನಿಯವರು ಮಾತನಾಡಿ ಲೋಕಕಲ್ಯಾಣರ?ಥವಾಗಿ ಜನ್ಮತೆಳೆ?ದು ಅತೀ ಕಡಿಮೆ ವಯಸ್ಸಿನಲ್ಲಿ ಮಹತ್ತರವಾದುದ್ದನ್ನು ಸಾಧಿಸಿ ಸನಾತನ ಧರ್ಮವನ್ನ ಸಂರಕ್ಷಿಸಿ ಜಗತ್ತಿಗೆ ಜ್ಞಾನ, ಭಕ್ತಿ ಮತ್ತು ಆಧ್ಯಾತ್ಮಿಕತೆಯ ಚಿಂತನೆಯನ್ನು ಆಚಾರ್ಯ ಶಂಕರರು ನೀಡಿದ್ದಾರೆ. ಪುರಾಣ ಉಪನಿಷತ್ತು ಮಹಾಕಾವ್ಯಗಳನ್ನು ಅಧ್ಯಯನ ಮಾಡಿ ಹೊಸಭಾಷ್ಯೆ ಬರೆದು ಸಂರಕ್ಷಿಸಿದ್ದಾರೆ ಅವರ ತತ್ವಗಳಿಂದಲೇ ಸನಾತನ ಧರ್ಮ ಇಂದು ಪ್ರಜ್ವಲವಾಗಿ ಅರಳಲು ಸಾಧ್ಯವಾಗಿದೆ.
ಆಚರ?ಯತ್ರಯರಾದ ಶಂಕರಾಚಾರ್ಯ, ರಾಮಾನುಜಚಾರ್ಯ ಮತ್ತು ಮದ್ವಾಚಾರ್ಯರು ಸನಾತನ ಧರ್ಮದ ನೀತಿ ಸಂಸ್ಕಾರಗಳ ಬಗ್ಗೆ ಅರಿವು ಮೂಡಿಸಿದ ಮಹನೀಯರು ಎಂದರು.
ಇದೇ ಸಂದರ್ಭದಲ್ಲಿ ಅವರು ಜಗತ್ತಿನಲ್ಲಿ ಯಾವುದು ಸರಿ, ಯಾವುದು ತಪ್ಪು, ಏನನ್ನು ಮಾಡಬೇಕು ಏನನ್ನು ಮಾಡದಿರುವುದ ಸರಿ, ಸತ್ಯ, ಮಿಥ್ಯೆಗಳ ವೆತ್ಯಾಸ ಆಚಾರ ?ಅನಾಚಾರಗಳ ಬಗ್ಗೆ ಚಿಂತನೆ, ಮತ್ತಿತರ ವಿಚಾರಗಳನ್ನೊಳಗೊಂಡ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಆಚಾರ್ಯ ಶಂಕರರ ಪ್ರಶ್ನೋತ್ತರ ಮಾಲಿಕಾ ಸಂಗ್ರಹದ ಉಪನ್ಯಾಸ ಕಾರ್ಯಕ್ರಮವನ್ನು ಆರಂಬಿಸಿದರು.
ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅರವಿಂದ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಘುರಾಮ್ ನಾಡಿಗ್ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀರಾಮಮಂದಿರದ ಅಧ್ಯಕ್ಷ ಅನಂತರಾಮಯ್ಯ, ಮುಖಂಡರಾದ ರಾಮಚಂದ್ರು, ಹಿರಣ್ಣಯ್ಯ,ಸಂದ್ಯಾಮರ?ತಂಡ, ಮುರುಗೇಶ್, ಗುರುದತ್ತ, ಸವಿತಾ ರಮೇಶ್, ರಾಜಾರಾಮ್ ಬಾಲಸುಬ್ರಹ್ಮಣ್ಯ, ರವಿ. ಮಂಜುನಾಥ್, ಈಶ್ವರಚಂದ್ರ ದೇವಾಲಯದ ಅರ್ಚಕರಾದ ರೋಹಿತ್ ಶರ್ಮ, ಮಾಲತೇಶ್ ಭಟ್ ,ಹೊಸಹೊಳಲು ಸೋಮಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು