
ಗದಗ,ಮಾ.6: : ರಾಜ್ಯ ಸರ್ಕಾರದ ಆದೇಶದ ಮೇರೆಗೆ ಪ್ರಥಮ ಬಾರಿಗೆ ಜಿಲ್ಲಾಡಳಿತ ಭವನದಲ್ಲಿ ಸರ್ಕಾರದಿಂದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿಯನ್ನು ರವಿವಾರದಂದು ಆಯೋಜಿಸಲಾಗಿತ್ತು. ಶ್ರೀ ರೇಣುಕಾಚಾರ್ಯ ಅವರ ಭಾವಚಿತ್ರಕ್ಕೆ ಶಾಸಕರಾದ ಎಚ್.ಕೆ.ಪಾಟೀಲ ಹಾಗೂ ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಅವರು ಪುಷ್ಪಾರ್ಚಣೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
ನಂತರ ಮಾತನಾಡಿದ ಶಾಸಕ ಎಚ್.ಕೆ.ಪಾಟೀಲ ಅವರು ಸರ್ಕಾರ ರೇಣುಕಾಚಾರ್ಯರ ಜಯಂತಿ ಆಚರಿಸಲು ನಿರ್ಣಯ ಕೈಗೊಂಡು ಜಯಂತಿ ಆಚರಿಸುತ್ತಿರುವದು ಸ್ವಾಗತಾರ್ಹ. ಸಮಾಜದಲ್ಲಿನ ಭ್ರಾತೃತ್ವ ಭಾವನೆಗಳಿಗೆ ಧಕ್ಕೆ ಆದಾಗ ರೇಣುಕಾಚಾರ್ಯರ ಮಾರ್ಗದರ್ಶನಗಳು ಅತ್ಯಗತ್ಯವಾಗಿವೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನರೇಗಲ್ ಹಿರೇಮಠದ ಶ್ರೀ. ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿದ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನರೇಗಲ್ ಹಿರೇಮಠದ ಶ್ರೀ. ಮಲ್ಲಿಕಾರ್ಜುನ ಶಿವಾಚಾರ್ಯರು ಚಂದ್ರು ಬಾಳಿಹಳ್ಳಿಮಠ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಡಿ.ವಾಯ್.ಎಸ್ಪಿ, ಸಂಕದ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಸಮಾಜದ ಗಣ್ಯರುಗಳಾದ ವ್ಹಿ.ಕೆ.ಗುರುಮಠ, ಮಹೇಶ್ವರಯ್ಯ ಹೊಸಳಿಮಠ, ಮಂಜುನಾಥ ಬೇಲೇರಿ, ವೀರಯ್ಯ ಹೊಸಮಠ, ಶಿದ್ಲಿಂಗಪ್ಪ ಚೆಳಗೇರಿ, ಮಂಜುನಾಥ ಅಬ್ಬಿಗೇರಿ, ವೀರೇಶ ಕೂಗೂ, ಚನ್ನವೀರಶಾಸ್ತ್ರಿ, ಉಮಾಪತಿ ಭೂಸನೂರಮಠ, ಶಿವಾನಂದಯ್ಯ ಹಿರೇಮಠ, ಅಶೋಕ ಅಬ್ಬಿಗೇರಿ, ಪಾರ್ವತಿದೇವಿ ಶಾಬಾದಿಮಠ, ಸಂಗಮ್ಮ ಹಿರೇಮಠ ಮುಂತಾದವರು ಹಾಜರಿದ್ದರು.