ಜಗದ್ಗುರು ರೇಣುಕಾಚಾರ್ಯರ ದಿವ್ಯ ಜ್ಯೋತಿ ಯಾತ್ರೆಗೆ ನಾಳೆ ಚಾಲನೆ

ಕಲಬುರಗಿ,ಫೆ.28-ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯೋತ್ಸವ ಅಂಗವಾಗಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯೋತ್ಸವ ಸಮಿತಿ ಹಾಗೂ ಲಿಂ.ಚಂದ್ರಶೇಖರ ಪಾಟೀಲ ರೇವೂರ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಜಗದ್ಗುರು ಶ್ರೀ ರೇಣುಕಾಚಾರ್ಯರ ದಿವ್ಯ ಜ್ಯೋತಿ ಯಾತ್ರೆಯು ಮಾ.1 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನದ ಆವರಣದಿಂದ ಆರಂಭಗೊಳ್ಳಲಿದೆ.
ಹರ ಗುರು ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ರವರು ಜ್ಯೋತಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜಯಂತ್ಯೋತ್ಸವ ಸಮಿತಿ ಅಧ್ಯಕ್ಷÀ ಡಾ.ಅಣವೀರಯ್ಯ ಪ್ಯಾಟಿಮನಿ, ಜಯಂತ್ಯೋತ್ಸವ ಸಮಿತಿಯ ಗೌರವ ಅಧ್ಯಕ್ಷÀ ಶಿವಕಾಂತ ಮಹಾಜನ, ಫೌಂಡೇಶನ್ ಅದ್ಯಕ್ಷÀ ಅಪ್ಪು ಕಣಕಿ ಸೇರಿದಂತೆ ಸಮಿತಿಯ ಮತ್ತು ಫೌಂಡೇಶನ್‍ನ ಪದಾಧಿಕಾರಿಗಳು ವೀರಶೈವ ಲಿಂಗಾಯತ ಜಂಗಮ ಸಮುದಯದ ಬಾಂಧವರು, ಜಗದ್ಗುರು ಶ್ರೀ ರೇಣುಕಾಚಾರ್ಯರ ಸಧ್ಬಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ.
ನಾಳೆ ಪ್ರಾರಂಭಗೊಳ್ಳಲಿರುವ ಜ್ಯೋತಿ ಯಾತ್ರೆಗೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ ಮಾರ್ಗಮಧ್ಯದಲ್ಲಿ ಬರುವ ಹೋಬಳಿ ಕೇಂದ್ರಗಳಲ್ಲಿ ಸಂಚರಿಸಿ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದೆ. ಜಿಲ್ಲೆಯಾದ್ಯಂತ ಸಂಚರಿಸುವ ಜ್ಯೋತಿ ಯಾತ್ರೆ ಮಾರ್ಚ 4 ರಂದು ಕಲಬುರಗಿ ಪುರಪ್ರವೇಶ ಮಾಡಲಿದೆ. ಜಿಲ್ಲೆಯ ಸದ್ಭಕ್ತಾದಿಗಳು ತಮ್ಮ ತಮ್ಮ ತಾಲೂಕಾ ಕೇಂದ್ರಗಳಿಗೆ ಬರುವ ಮಾರ್ಗ ಮಧ್ಯದಲ್ಲಿ ಜ್ಯೋತಿ ಯಾತ್ರೆಗೆ ಭವ್ಯ ರೀತಿಯಿಂದ ಸ್ವಾಗತ ಕೋರಲಿದ್ದಾರೆ ಎಂದು ವಿಶ್ವನಾಥ ಸಾಲಿಮಠ, ನಾಗಲಿಂಗಯ್ಯ ಮಠಪತಿ, ಮೃತ್ಯುಂಜಯ ಪಲ್ಲಾಪುರಮಠ, ವೀರಭದ್ರಯ್ಯ ಆರ್.ಮಠ ತಿಳಿಸಿದ್ದಾರೆ.