
ಸಂಜೆವಾಣಿ ವಾರ್ತೆ
ಸಂಡೂರು:ಅ:14: ಉತ್ತರಕರ್ನಾಟಕದ ನಾಯಕರಾದ ಜಗದೀಶ ಶೆಟ್ಟರ ಅವರು ಸಮಾಜ ಮುಖಿ ಕಾರ್ಯಗಳು ಮತ್ತು ಈ ಭಾಗದ ಅಭಿವೃದ್ದಿಗೆ ತಮ್ಮದೇ ಅದ ಕೊಡುಗೆಯನ್ನು ನೀಡಿದ್ದಾರೆ ಎಂದು ಶಾಸಕ ಈ.ತುಕರಾಂ ತಿಳಿಸಿದರು.
ಅವರು ಪಟ್ಟಣದ ಶಿವವಿಲಾಸ್ ಪ್ಯಾಲೇಸ್ ಹೋಟಲ್‍ನಲ್ಲಿ ಅವರನ್ನು ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಿದರು, ಅವರ ಕಾರ್ಯಗಳು ಮತ್ತು ಮುಂದೆ ಕೈಗೊಳ್ಳಬೇಕಾದ ಈ ಭಾಗದ ಅಭಿವೃದ್ದಿ ಯೋಜನೆಗಳ ಬಗ್ಗೆ ಚರ್ಚಿಸಿದರು.