ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೇಟ್ ನಿರಾಕರಣೆ: ಡಾ.ಅಷ್ಟೂರ ಅಸಮಾಧಾನ

ಬೀದರ:ಎ.17:ಬಿಜೆಪಿಯ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ಜಗದೀಶ ಶೆಟ್ಟರ್ ಅವರಿಗೆ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೇಟ್ ನಿರಾಕರಿಸಿದ್ದು ನನ್ನನ್ನು ಒಳಗೊಂಡಂತೆ ರಾಜ್ಯದ ಅನೇಕ ಹಿರಿಯ ನಾಯಕರಿಗೆ ಅಸಮಾಧಾನ ತಂದಿದೆ ಎಂದು ಬಿಜೆಪಿ ಹಿರಿಯ ಮುಖಂಡರಾದ ಡಾ ಬಸವರಾಜ ಜಿ. ಪಾಟೀಲ ಅಷ್ಟೂರ ಬೀದರ ಅವರು ಅಸಮಾಧಾನವನ್ನು ಹೊರಹಾಕಿದ್ದಾರೆ. ನನಗೆ ಬೀದರ ದಕ್ಷಿಣ ಕ್ಷೇತ್ರದ ಟಿಕೇಟ್ ನೀಡಿದ್ದೆ ಅವರು ಹಾಗಾಗಿ ಬಿಜೆಪಿಯ ರಾಜ್ಯ ಕಾರಿಣಿ ಸದಸ್ಯರಾಗಿದ್ದಾಗಿನಿಂದ ಅವರನ್ನು ಸಮೀಪದಿಂದ ಗಮನಿಸಿದ್ದೇನೆ. ಜನರ ಪ್ರೀತಿ ವಿಶ್ವಾಸ ಗೆದ್ದವರು. ಬಹುಮುಖ್ಯವಾಗಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ, ರಾಜ್ಯಾಧ್ಯಕ್ಷ (ಕರ್ನಾಟಕದ ರಾಜ್ಯ).ರಾಗಿ, ವಿಧಾನಸಭೆಯ ವಿರೋದ ಪಕ್ಷದ ನಾಯಕರಾಗಿ ಕಂದಾಯ ಇಲಾಖೆಯ ಮಂತ್ರಿಗಳಾಗಿ, ವಿಧಾನಸಭೆ ಸಭಾದ್ಯಕ್ಷರಾಗಿ, ಗಾಮೀಣ ಅಭಿವ್ರುದ್ದಿ (ಪಂಚಾಯತ್ ರಾಜ್) ಇಲಾಖೆಯ ಸಚಿವರಾಗಿ ಕರ್ನಾಟಕದ 27ನೇ ಮುಖ್ಯಮಂತ್ರಿಯಾಗಿ ಅತ್ಯಂತ ಸಮರ್ಥವಾಗಿ ಯಾವುದೆ ಕಪ್ಪು ಚುಕ್ಕೆಗಳಿಲ್ಲದೆ ಆಯಾ ಹುದ್ದೆಗಳಿಗೆ ಗೌರವ ತಂದುಕೊಡುವ ಮೂಲಕ ಜನರ ಪ್ರೀತಿ, ವಿಶ್ವಾಸ ಗಳಿಸಿದ ಜನನಾಯಕರು. ಇದೆಲ್ಲಕ್ಕೂ ಬೆಲೆ ಕೊಡದೆ ಅವಮಾನ ಮಾಡುವ ರೀತಿಯಲ್ಲಿ ಪಕ್ಷದಿಂದ ಹೊರ ಹೋಗುವಂತೆ ಮಾಡಿದ್ದು ಸರಿಯಲ್ಲ. ಬಿಜೆಪಿಯಲ್ಲಿ ಈಗಾಗಲೆ ಕ್ರಿಮಿನಲ್ ಹಿನ್ನೆಲೆಯವರಿಗೆ, ಭ್ರಷ್ಟಾಚಾರದ ಆರೋಪ ಇದ್ದವರಿಗೆ ಟಿಕೆಟ್ ನೀಡಿದ್ದಾರೆ. ಜಗದೀಶ್ ಶೆಟ್ಟರ್ ಅವರದ್ದು ಸಿ.ಡಿ ಕೂಡ ಇಲ್ಲ. ಅದಾವೂದು ಇಲ್ಲದೇ ಇಲ್ಲದೇ ಇದ್ದರೂ ಅವರಿಗೆ ಟಿಕೆಟ್ ನೀಡಿಲ್ಲ. ಆರು ಬಾರಿ ಆರಿಸಿ ಬಂದು ಆ ಭಾಗದ ಅಭಿವೃದ್ಧಿಗೆ ಕೆಲಸ ಮಾಡಿರುವರಲ್ಲದೆ ಎಲ್ಲ ಸರ್ವೆ ವರದಿಗಳು ಅವರ ಪರವಾಗಿದ್ದಾಗಲೂ ಅವರನ್ನು ದೂರ ಇಟ್ಟಿರುವುದು ಜನತೆಗೆ ಮಾಡಿದ ಅವಮಾನವೂ ಆಗುತ್ತದೆ ಇದೆಲ್ಲವನ್ನು ಗಮನಿಸಿದರೆ ಬಿಜೆಪಿಯಲ್ಲಿ ಕರ್ನಾಟಕದಲ್ಲಿ ಜಗದೀಶ ಶೆಟ್ಟರ್ ಜೊತೆಗೆ ಅನೇಕ ಲಿಂಗಾಯತ ಸಮುದಾಯವರನ್ನು ರಾಜಕೀಯವಾಗಿ ಬಲಹೀನಗೊಳಿಸುವ ವ್ಯವಸ್ಥಿತ ಹುನ್ನಾರ ನಡೆದಿರುವುದು ಅರಿವಿಗೆ ಬರುತ್ತಿದೆ. ಹೀಗಾದಲ್ಲಿ ಕರ್ನಾಟಕದಲ್ಲಿ ಈ ಸಲ ಬಿಜೆಪಿ ಬರುವುದು ಕಷ್ಠದ ಮಾತೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.