ಜಗತ್ತು ಹುಟ್ಟಿದಾಗಲೇ ಧರ್ಮವಿತ್ತು:ಪಡೇಕನೂರಶ್ರೀ

ತಾಳಿಕೋಟೆ:ಮಾ.2: 12ನೇ ಶತಮಾನದ ಕಾಲವನ್ನು ವೇದಕಾಲವೆಂದು ಕರೆಯಲಾಗುತ್ತಿತ್ತು ಆ ಸಮಯದಲ್ಲಿ ಬಸವಣ್ಣನವರ ಕಾಲ ಅದು ಬಹಳ ಕಠಿಣವಾಗಿರತಕ್ಕಂತಹ ಕಾಲ ಇತಿಹಾಸ ನೋಡಿದರೆ ಬಹಳ ಕ್ಲೀಷ್ಠಕರವಾಗಿರತಕ್ಕಂತಹದ್ದು ಕಾಲ ಯಾಕೆಂದರೆ ಮಹಿಳೆಗೆ ಯಾವ ಸ್ವಾತಂತ್ರ್ಯವೂ ಇರಲಿಲ್ಲಾ ಹೊರಗಡೆ ಬರಲಿಕ್ಕೆ ಲಗ್ನವಾಗಿ ಗಂಡನಮನೆಗೆ ಹೋದರೆ ಮನೆಯಲ್ಲಿ ಇರಬೇಕು ಹೊರಗಡೆ ಹೋಗಬಾರದೆಂಬುದು ಆಗಿತ್ತೆಂದು ಶ್ರೀ ಪಡೆಕನೂರ ದಾಸೋಹ ಮಠದ ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು. ಬುಧವಾರರಂದು ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಮಂದಿರದ ಆವರಣದಲ್ಲಿ ಸಾಗಿಬಂದ ಶ್ರೀ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ 9ನೇ ದಿನದಂದು ಪ್ರವಚನ ಮುಂದುವರೆಸಿ ಮಾತನಾಡುತ್ತಿದ್ದ ಅವರು ಇಂತಹ ಸ್ಥಿತಿ ಮುಂದುವರೆದಿದ್ದರಿಂದ ಧರ್ಮ ಎಂಬುದಕ್ಕೆ ಕತ್ತಲು ಆವರೀಸಿತ್ತು ಆ ಧರ್ಮಕ್ಕೆ ಆವರಣ ದೋಷವೆಂದು ಕರೆಯಲಾಗಿದೆ ಸ್ಯಾಸನಗಳನ್ನು ಬರೆದಿಡಲಾಗಿತ್ತು ದೇವರ ದರ್ಶನಕ್ಕಾಗಲಿ ಯಾವುದಕ್ಕೂ ಅವಕಾಶ ಮಹಿಳೆಯರಿಗೆ ಇದಿದ್ದಿಲ್ಲಾ ಅದಕ್ಕಾಗಿ ಪರಮಾತ್ಮ ಎಲ್ಲ ನೋಡಿದ ಎಲ್ಲ ಜೀವ ರಾಶಿ ಬಳ್ಳಿಗಳಿಗೆ ಆಹಾರ ಒದಗಿಸುತ್ತಾ ಸಾಗಿರುವದು ನನ್ನ ಸಂಕಲ್ಪದಿಂದ ನಡೆದಿದೆ ಆದರೆ ಮಾನವ ಕುಲಕೋಟಿ ತಾಯಿ ಎನಿಸಿಕೊಂಡವಳಿಗೆ ಸ್ವಾತಂತ್ರ್ಯವಿಲ್ಲವಲ್ಲಾ ತಾಯಿಗೆ ಶಕ್ತಿ ಇಲ್ಲದೇ ಶಿವನಿಲ್ಲಾ ಶಕ್ತಿ ಎಂದರೆ ಜಗನ್ಮಾತೆ, ದೇವಿ, ತಾಯಿ ಎಂದರು. ಪರಮಾತ್ಮ ಆ ತಾಯಿಗೆ ಸ್ವಾತಂತ್ರ್ಯವಿಲ್ಲವೆಂದು ದೇವ ಚಿಂತೆಗೊಳಗಾದ ಈ ಸಂಪ್ರದಾಯ ಮೂಡನಂಬಿಕೆಯನ್ನು ಹೊಡೆದೊಡಿಸಬೇಕೆಂದು ಮಾನವ ರೂಪದಿಂದ ಶಿವಯೋಗಿ ಅಲ್ಲಮಪ್ರಭು ಭೂ ಮಂಡಲದಲ್ಲಿ ಪಾದಾರ್ಪಣೆಯನ್ನು ಮಾಡಿದ ಸ್ವರಾಳ ಎಂದರೆ ಲಿಂಗ, ನಿರಾಳ ಎಂದರೆ ಇಲ್ಲಾ ಎಂಬ ತತ್ವವನ್ನು ಅಲ್ಲಮನು ಹೇಳುತ್ತಾನೆ ಜಗತ್ತಿನಲ್ಲಿ ಚಲನವಲನ ಆಗುವಂತಹ ಮಾನವ ಕುಲಕೋಟಿ ಸಚರಾಚರ ವಸ್ತುಗಳು ರಚನೆಗೆ ಬಂದಿಲ್ಲಾ ಹಮ್ಮಿಬಿಮ್ಮಿಗಾಗಿ ಹೊಡೆದಾಡುತ್ತಾರೆ ನಾನು ನೀನು ಎಂಬ ಅಹಂಕಾರದಲ್ಲಿ ಜಗತ್ತು ತಾಂಡವಾಡಲಿಕ್ಕೆ ಹತ್ತಿದೆ ಮನುಷ್ಯ ಜನ್ಮತಾಳಿದ ಮೇಲೆಯೇ ಹಮ್ಮು ಬಿಮ್ಮುಗಳು ಬಂದವೆಂದು ಶ್ರೀಗಳು ಹೇಳಿದರು. ಅಲ್ಲಮ ಹೇಳಿದಂತಹ ಈ ಉಕ್ಕಿನ ಕಡಲೆಯ ಭಾವ ಯಾವ ಇತಿಹಾಸದಲ್ಲಿಲ್ಲಾ ಇಂತಹ ಜ್ಞಾನ ಉಪದೇಶ ಹೇಳುವದು ಎಲ್ಲಿಯೂ ಇಲ್ಲವೆಂದರು.
ಜಗತ್ತು ಇಲ್ಲಾ ಜನರಿಲ್ಲಾ ಪ್ರಾಣಿ ಪಕ್ಷಗಳಿಲ್ಲಾ ಜಾಗ ಇಲ್ಲಾ ಏನೇನೂ ಇಲ್ಲದಾಗ ಒಬ್ಬನೇ ಇದ್ದನಲ್ಲಾ ಈ ಸೃಷ್ಠಿಯೊಳಗೆ ಆಗ ಧರ್ಮವೆಂಬುದು ಒಂದೇ ಇತ್ತು ಅದಕ್ಕೆ ಮಹಾಪರಂಜ್ಯೋತಿ ಎಂದು ಕರೆದರೆಂದು ಶ್ರೀಗಳು ನುಡಿದರು. ಅದಕ್ಕಾಗಿ ಪರಂಜ್ಯೋತಿ ಬೆಳಗುತಿದೆ ದ್ವೇಶ ಇರಲಾರದ್ದು ನಿರ್ಮಲ ಎನ್ನಲಾಗುತ್ತದೆ ಎಂದರು. ಮೋಹ ಅನ್ನುವ ಸೃಷ್ಠಿಯ ಮೇಲೆ ಮಾನವ ಕುಲಗಳು ತಯಾರಾದವು ಮಾನವ ಕುಲಕೋಟಿಗೆ ಇವರಿಗೆ ಧರ್ಮಾಚಾರದಲ್ಲಿ ಪಾಲ್ಗೊಳ್ಳಲು ಆ ತಾಯಂದಿರರಿಗೆ ಸ್ವಾತಂತ್ರ್ಯ ಕೊಡಿಸಲು ಅಲ್ಲಮಪ್ರಭು ಅವತರಿಸಿ ಬಂದನೆಂದರು. ಅಲ್ಲಮ ಶಿವಯೋಗಿ ಮನಷ್ಯನ ರೂಪದಲ್ಲಿ ತಾಮಸಗುಣ, ಪರಮಾತ್ಮ ನಿರಾಕಾರ, ಹೀಗೆ ಇದ್ದಾನೆಂದು ಸೃಷ್ಠಿಮಾಡಲಾಗಿದೆ ಧರ್ಮ ಮೌಢ್ಯ, ಸಂಪ್ರದಾಯ, ಅಂದಕಾರ ಅನ್ನುವಂತವುಗಳು ನೂರಾರು ವರ್ಷಗಳ ಕಾಲ ಇಟ್ಟ ಸಾಮಾನಿನಂತೆ ತುಕ್ಕು ಹಿಡಿದು ಯಾವುದಕ್ಕೂ ಬಾರದಂತಾಗಿದ್ದವು ಮನಷ್ಯ ವೇದಕಾಲದಲ್ಲಿದ್ದ ಸ್ಥಿತಿಗತಿ ಕುರಿತು ವಿವರಿಸಿದ ಶ್ರೀಗಳು ಧರ್ಮ ಇತ್ತು 17 ಲಕ್ಷ ವರ್ಷಗಳ ಹಿಂದೆ ಜಗತ್ತು ಹುಟ್ಟಿದಾಗ ಇತ್ತು ಆದರೆ ಯಾರೂ ಸ್ಥಾಪನೆ ಮಾಡಿದಿಲ್ಲಾ ಅದು ಕಿಲುಬು ಗಟ್ಟಿದಂತಾಗಿತ್ತು ಇದನ್ನು ಕಂಡ ಶಿವಯೋಗಿ ಅಲ್ಲಮ ಭೂ ಮಂಡಲದತ್ತ ಬಂದ ಜನರ ಹತ್ತಿರದಲ್ಲಿ ಕಿಲುಬುಗಟ್ಟಿದಂತಹ ಧರ್ಮಚಾರ ಬಿತ್ತಲು ಹುಟ್ಟಿಬಂದನೆಂದು ಶ್ರೀಗಳು ಹೇಳಿದರು.
ಮಾಯಾದೇವಿ ಅಲ್ಲಮನಿಗೆ ಶ್ರೀಂಗಾರದ ಬಟ್ಟೆ ಬರೆಗಳನ್ನು ಉಡಲು ತೊಡಲು ಕಳುಹಿಸುತ್ತಾಳೆ ಸುಂದರವಾಗಿ ಕಾಣಲೆಂದು ಅಪೇಕ್ಷೆ ಅವಳದ್ದಾಗಿತ್ತು ಆಕೆಗೆ ಮಧುವೆ ಮಾಡಿಕೊಳ್ಳುವ ವಿಚಾರ ಹೆಚ್ಚಾಗಿತ್ತು ಆಕೆ ಶ್ರೀಂಗಾರವಾಗಿದ್ದಳು ಆಕೆ ಕೂದಲಿದ್ದಷ್ಟು ಬಂಗಾರ ಹಾಕಿಕೊಂಡಿದ್ದ ಆಕೆ ಕಳುಹಿಸಿಕೊಟ್ಟಿದ್ದ ಬಟ್ಟೆಯನ್ನು ಅಲ್ಲಮಪ್ರಭು ಹಾಕಿಕೊಂಡ ಅದನ್ನು ತೆಗೆದು ಸುಟ್ಟು ಹಾಕಿದ ಯಾಕೆಂದರೆ ಇದು ಶೂನ್ಯದ ಬೆಲೆಯದ್ದು ಎಂದು ಅಲ್ಲಮ ತಿಳಿದುಕೊಂಡಿದ್ದನೆಂದರು. ಮಾಯಾದೇವಿ ನಾನಾಪರಿಯಿಂದ ಅಲ್ಲಮನನ್ನು ಮರಳು ಮಾಡಲು ಮುಂದಾಗುತ್ತಾಳೆ ಆಕೆ ಅಲ್ಲಮನಿಗೆ ಉಡಲು ತೊಡಲು ತೊಡಲು ತಿನ್ನಲು ಕೊಟ್ಟಿದ್ದೇಲ್ಲಾ ಆತ ಮುಟ್ಟಿದ ಕೂಡಲೇ ಮಾಯವಾಗುತ್ತಿತ್ತು ಕೊನೆಗೆ ಆಕೆ ಅಲ್ಲಮನ ಹತ್ತಿರ ಬಂದು ಪಾದ ಹಿಡಿದು ನಾನು ನಿನ್ನನ್ನೇ ಮಧುವೆಯಾಗುತ್ತೇನೆಂದು ಹೇಳುತ್ತಾಳೆ ಆತ ಆಕೆಗೆ ತಿಳಿ ಹೇಳಿ ಮೋಹ ತೆಗೆದು ಹಾಕಿದ ಮೇಲೆ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದರೂ ಆಕೆ ತನ್ನ ಹಟಬಿಡದೇ ಕಾಲಲ್ಲಿ ಗೆಜ್ಜೆ ಕಟ್ಟಿಕೊಂಡು ಅಲ್ಲಮ ಹೋದಲ್ಲಿ ಬಂದಲ್ಲಿ ಹೋಗಲಿಕ್ಕೆ ಬೆನ್ನು ಹತ್ತುತ್ತಾಳೆ ಅಲ್ಲಮನನ್ನು ಹಿಡಿಯಲು ಮುಂದಾದಾಗ ಸಿಕ್ಕಂತೆ ಕಾಣುತ್ತಿದ್ದ ಅಲ್ಲಮ ಮಾಯವಾಗಿ ಬಿಡುತ್ತಿದ್ದ ಆತ ಕಂಡಂತೆ ಕಂಡರೂ ಅವನು ಆಕೆಯ ಕೈಯಲ್ಲಿ ಸಿಗುತ್ತಿದ್ದಿಲ್ಲಾ ಮುಂದೆ ಅರಣ್ಯದಲ್ಲಿ ಬೆನ್ನು ಹತ್ತಿ ಹೋದ ಮಾಯಾದೇವಿ ಕೊನೆಗೆ ದಮ್ಮು ಹತ್ತಿ ಕೆಳಗೆ ಬಿದ್ದು ಬಿಡುತ್ತಾಳೆ ಅದನ್ನು ನೋಡಿದ ಅಲ್ಲಮ ಏನು ಬೇಕು ಎಂದು ಕೇಳಿದಾಗ ನೀರು, ಊಟ ಬೇಕು ಆದರೆ ನಾನು ಸಾಯಬಾರದು ಬಧುಕಬೇಕೆಂದಳಲ್ಲದೇ ಅಲ್ಲಮನ ಪಾದಹಿಡಿದು ನಾನು ಸೋತೆ ನೀನು ಗೆದ್ದೆ ಎಂದು ಮಾಯಾದೇವಿ ಸಾಷ್ಟಾಂಗ ನಮಸ್ಕಾರ ಮಾಡಿದಾಗ ಅಲ್ಲಮನ ಆಶಿರ್ವಾದದಿಂದ ಮಾಯಾದೇವಿ ಮಾಯವಾಗಿ ಹೋಗುತ್ತಾಳೆ ಆಕೆಯ ಪ್ರಾಣ ಪಕ್ಷಿ ಹಾರಿಹೋಗುತ್ತದೆ ಪರಮಾತ್ಮನಲ್ಲಿ ಹೋಗಿ ನಿನ್ನ ವಿಶ್ವಶಕ್ತಿಯ ಮುಂದೆ ನಾನು ಸೋತೆ ಎಂದು ಪಾರ್ವತಿ ಹೇಳುತ್ತಾಳೆ ನನಗೆ ಕ್ಷಮೆ ಮಾಡಿ ಎಂದು ಕೇಳುತ್ತಾಳೆ ಇದುವೇ ಪತಿಯ ಮೇಲೆ ಇಟ್ಟಂತಹ ಭಕ್ತಿ ಎಂದು ಶ್ರೀಗಳು ನುಡಿದರು.
ಈ ಸಮಯದಲ್ಲಿ ಶ್ರೀ ಶರಣಮುತ್ಯಾರ ಮಠದ ಶ್ರೀ ಬಸಣ್ಣ ಶರಣರ, ಶರಣಪ್ಪ ಶರಣರ ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭಿಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಶರಣಗೌಡ ಪೋಲಿಸ ಪಾಟೀಲ, ಶ್ರೀಕಾಂತ ಕುಂಬಾರ, ಬಸವರಾಜ ಛಾಂದಕೋಟೆ, ಕಾಶಿರಾಯ ದೇಸಾಯಿ, ಸಂಗಮೇಶ ಶರಣರ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ, ತಿಪ್ಪಣ್ಣ ಸಜ್ಜನ, ಭಾರತ ಮಂಟಪ ಮತ್ತು ಸೌಂಡಸಿಸ್ಟಮದ ರಪೀಕ ಮುರಾಳ, ಗವಾಯಿಗಳಾದ ಹಣಮಂತಕುಮಾರ ಬಳಗಾನೂರ, ಬಸವನಗೌಡ ಬಿರಾದಾರ(ಚೊಕ್ಕಾವಿ) ಉಪಸ್ಥಿತರಿದ್ದರು.