ಕೆಂಭಾವಿ:ಅ.20:ವಿದ್ಯಾರ್ಥಿಗಳ ಪರೀಕ್ಷೆ ಭಯ ಹೋಗಲಾಡಿಸುವ ಜವಾಬ್ಧಾರಿ ಪ್ರತಿಯೊಬ್ಬ ಶಿಕ್ಷಕ ಮೇಲಿದೆ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ಹಾಗೂ ಉಪನ್ಯಾಸಕ ಜಗದೀಶ ಸಾತಿಹಾಳ ಹೇಳಿದರು.
ಪಟ್ಟಣದ ಸರಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ದಸರಾ ಉತ್ಸವ ಸಮಿತಿ ವತಿಯಿಂದ ಎಸ್‍ಎಸ್‍ಎಲ್‍ಸಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಹವ್ಯಾಸ ಬದಲಾದರೆ, ಹಣೆಬರಹ ಬದಲಾವಣೆಯಾಗುತ್ತದೆ. ನಾನು ಬದಲಾದರೆ ಮಾತ್ರ ಜಗತ್ತು ಬದಲಾಗುತ್ತದೆ. ಬದಲಾವಣೆ ಎನ್ನುವದು ನಮ್ಮಿಂದಲೆ ಆಗಬೇಕು ಹೊರತು ಬೇರೆಯವರಿಂದಲ್ಲ. ಸೌಂದರ್ಯಕ್ಕೆ ಜಗತ್ತು ತಲೆ ಬಾಗುವದಿಲ್ಲ, ಜ್ಞಾನಕ್ಕೆ ಜಗತ್ತು ತಲೆ ಬಾಗುತ್ತದೆ. ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರ ಸಕಾರಾತ್ಮಕ ಯೋಚನೆಗಿಂತ ನಕರಾತ್ಮಕ ಯೋಚನೆಗಳೆ ಹೆಚ್ಚಿವೆ. ಯೋಗ, ಧ್ಯಾನದಿಂದ ನಕಾರಾತ್ಮಕ ಯೋಚನೆಗಳನ್ನು ಸಕಾರಾತ್ಮಕವಾಗಿ ಬದಲಾಯಿಸಬಹುದು. ದೇಹ ಸೌಂದರ್ಯಕ್ಕಿಂತ ಜ್ಞಾನ ಸೌಂದರ್ಯ ಎಲ್ಲರನ್ನು ಸೆಳೆಯುತ್ತದೆ ಎಂದು ಹೇಳಿದರು.
ಸುಮಾರು ಮೂರು ಗಂಟೆಗಳ ಕಾಲ ನಡೆದ ಕಾರ್ಯಾಗಾರವು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಮೇಲೆ ಗಾಢವಾದ ಪರಿಣಾಮ ಬೀರಿತು. ಸುಮಾರು 200 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮುಖ್ಯಗುರು ವಿಠಲ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ದಸರಾ ಸಮಿತಿ ಗೌರವಾಧ್ಯಕ್ಷ ಮುದಿಗೌಡ ಮಾಲಿಪಾಟೀಲ, ಶಿಕ್ಷಕಿÀ ನಾಗರ್ನ ಕುಲಕರ್ಣಿ, ದಸರಾ ಸಮಿತಿ ಅಧ್ಯಕ್ಷ ಡಿ.ಸಿ.ಪಾಟೀಲ, ಪರಶುರಾಮ ನಾರಾಯಣಕರ್, ನರಸಿಂಹ ವಡ್ಡೆ, ಸೂಗು ಇಂಡಿ, ವೀರಣ್ಣ ಕಲಕೇರಿ, ಇಲಿಯಾಸ ವಡಕೇರಿ, ರಮೇಶ ಸೊನ್ನದ, ಮಲ್ಲನಗೌಡ ಪಾಟೀಲ, ಅಂಬಲಪ್ಪ, ಗುಡದಯ್ಯ ಸೇರಿದಂತೆ ಇತರರಿದ್ದರು.
ಶಿಕ್ಷಕ ಬಂದೇನವಾಜ ನಾಲತವಾಡ ನಿರೂಪಿಸಿದರು. ರೇವಣಸಿದ್ದಯ್ಯ ವಂದಿಸಿದರು.