ಜಗತ್ತಿನ ಅತ್ಯುತ್ತಮ ವಿಜ್ಞಾನಿಗಳಲ್ಲಿ ಬನಾರಸ್, ಗುವಹಟಿ ಐಐಟಿ ಮುಂದು: ಅಮೇರಿಕಾ

ನವದೆಹಲಿ, ನ.14- ಜಗತ್ತಿನ ಪ್ರತಿಷ್ಠಿತ ವಿಜ್ಞಾನಿಗಳ ಬಗ್ಗೆ ಶೇಕಡ ಎರಡರಷ್ಟು ವಿಜ್ಞಾನಿಗಳು ಭಾರತೀಯ ತಾಂತ್ರಿಕ ಸಂಸ್ಥೆ‌- ಐಐಟಿ ಬನಾರಸ್ ಮತ್ತು ಗುವಹಟಿ ಸಂಸ್ಥೆ ಗೆ ಸೇರಿದವರಾಗಿದ್ದಾರೆ ಎಂದು ಅಮೆರಿಕದ ಸ್ಯಾನ್ ಪೋರ್ಡ್ ಗ್ ವಿಶ್ವವಿದ್ಯಾಲಯ ಹೇಳಿದೆ.

ಐಐಟಿ ಬನಾರಸ್ ಮತ್ತು ಐಐಟಿ ಗುವಹಾಟಿಯಿಂದ 36 ಪ್ರತಿಷ್ಠಿತ ವಿಜ್ಞಾನಿಗಳು ಜಗತ್ತಿನ ವಿಜ್ಞಾನಿಗಳ ಪೈಕಿ ಸ್ಥಾನ ಪಡೆದಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಗುವಹಟಿಯ ಭಾರತೀಯ ತಾಂತ್ರಿಕ ಸಂಸ್ಥೆ -ಐಐಟಿಗೆ ಸೇರಿದ‌ 22 ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಇದ್ದಾರೆ ಎಂದು ಹೇಳಿದೆ.

ಜಗತ್ತಿನ ಪ್ರತಿಷ್ಠಿತ ವೈದ್ಯರು ವಿಜ್ಞಾನಿಗಳು ಮತ್ತು ಇಂಜಿನಿಯರ್ ಗಳ ಪಟ್ಟಿಯನ್ನು ಅಮೆರಿಕದ ಸ್ಯಾನ್ ಫೋರ್ಡ್ ಬಿಡುಗಡೆ ಮಾಡಿದ್ದು 1 ಲಕ್ಷದ 59 ಸಾವಿರದ‌ 683 ಮಂದಿಯಲ್ಲಿ 1500 ಭಾರತೀಯ ವಿಜ್ಞಾನಿಗಳು ವೈದ್ಯರು ಮತ್ತು ಇಂಜಿನಿಯರ್ಗಳು ಇದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಬನಾರಸ್ ನ ಭಾರತೀಯ ತಾಂತ್ರಿಕ ಸಂಸ್ಥೆ -ಐಐಟಿ ಯ 14 ವಿಜ್ಞಾನಿಗಳು ಸೇರಿದ್ದಾರೆ. ಎಲ್ಲಾ ವಿಜ್ಞಾನಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ತಾವು ಮಂಡಿಸಿದ ಪ್ರಬಂಧದ ಆಧಾರದ ಮೇಲೆ ಆಯ್ಕೆಯಾಗಿದ್ದಾರೆ ಭಾರತೀಯ ತಾಂತ್ರಿಕ ಸಂಸ್ಥೆ ಐಐಐಟಿ ಬನಾರಸ್ ನಿರ್ದೇಶಕ ಪ್ರಮೋದ್ ಕುಮಾರ್ ಜೈನ್ ತಿಳಿಸಿದ್ದಾರೆ.

ಜೊತೆಗೆ ಭಾರತದ ಪ್ರತಿಷ್ಠಿತ ವೈದ್ಯರು ವಿಜ್ಞಾನಿಗಳು ಮತ್ತು ಇಂಜಿನಿಯರ್ಗಳು ಜಗತ್ತಿನ ಮೂಲೆ ಮೂಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಭಾರತೀಯ ಉನ್ನತ ಕೌಶಲ್ಯದ ಮಂದಿಗೆ ಬೇಡಿಕೆ ಹೆಚ್ಚಿದೆಯೆಂದು ಅವರು ತಿಳಿಸಿದ್ದಾರೆ