ಜಗತ್ತಿನ ಅತಿದೊಡ್ಡ ವಿಮಾನ ಮರು ನಿರ್ಮಾಣಕ್ಕೆ ಉಕ್ರೇನ್ ನಿರ್ಧಾರ

ಕೀವ್, ನ.9- ವಿಶ್ವದ ಅತಿದೊಡ್ಡ‌‌‌ ವಿಮಾನವನ್ನು ಮರು ನಿರ್ಮಾಣ ಮಾಡಲು‌ ಉಕ್ರೇನ್ ತೀರ್ಮಾನಿಸಿದೆ.
ರಷ್ಯಾ ಮತ್ತು ಉಕ್ರೀನ್ ನಡುವೆ ನಡೆದ ಯುದ್ಧದಲ್ಲಿ ರಷ್ಯಾ ಸೇನಾ ಪಡೆ ಈ ವಿಮಾನವನ್ನು ನಾಶಪಡಿಸಿತ್ತು.
ಉಕ್ರೇನ್ ಭಾಷೆಯಲ್ಲಿ ಮ್ರಿಯಾ ಡ್ರೀಮ್ ಎಂದು ಕರೆಯಲ್ಪಡುವ ಆಂಟೊನೊವ್ ಆನ್ -225 ಸರಕು ಸಾಗಾಣಿಕಾ ವಿಮಾನ ವಿನ್ಯಾಸದ ಕಾರ್ಯಕ್ಕೂ ಚಾಲನೆ ನೀಡಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಆಂಟೊನೊವ್ ಕಂಪನಿ ಮಾಹಿತಿ ಹಂಚಿಕೊಂಡಿದೆ. ರಷ್ಯಾದೊಂದಿಗಿನ ಯುದ್ಧ ಅಂತ್ಯಗೊಂಡ ಬಳಿಕ ಈ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.
ವಿಶ್ವದ ಅತಿದೊಡ್ಡ ವಿಮಾನ ದುರಸ್ತಿ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲೇ ರಷ್ಯಾ ಆಕ್ರಮಣದಿಂದ ಅಡ್ಡಿಯುಂಟಾಗಿತ್ತು.
88 ಮೀಟರ್ ಬೃಹದಾಕಾರದ ರೆಕ್ಕೆಗಳನ್ನು ಹೊಂದಿರುವ ಈ ವಿಮಾನ ಪುನರ್ ನಿರ್ಮಿಸಲು 500 ದಶಲಕ್ಷ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ.