ಚಿಂಚೋಳಿ,ಸೆ.28- ಇಲ್ಲಿನ ಚಂದ್ರಂಪಳ್ಳಿಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ತಾಲೂಕಾ ಆಡಳಿತ ವತಿಯಿಂದ ಆಯೋಜಿಸಿದ್ದ ವಿಶ್ವ ಪ್ರವಾಸೋಸ್ಯಮ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರೇಡ್-2 ತಹಸೀಲ್ದಾರ ವೆಂಕಟೇಶ ದುಗ್ಗನ್ ಅವರು ಮಾತನಾಡಿ, ಚಿಂಚೋಳಿ ಉತ್ತಮ ಪ್ರವಾಸಿ ತಾಣಗಳನ್ನು ಹೊಂದಿದೆ. ಸ್ಥಳೀಯರು ಸರಕಾರದ ಸಹಕಾರದೊಂದಿಗೆ ಪ್ರವಾಸಿ ತಾಣಗಳ ಅಭಿವೃದ್ದಿಗೆ ಶ್ರಮಿಸಬೇಕು ಎಂದರು.
ಬೆಂಗಳೂರಿನ ಪರಿಸರ ವಿಜ್ಞಾನಿ ರಾಹುಲ್ ಆರಾಧ್ಯ ಮಾತನಾಡಿ ಚಿಂಚೋಳಿ ವನ್ಯಧಾಮದಲ್ಲಿ 175 ವಿಧದ ಪಕ್ಷಿಗಳಿವೆ. ಪ್ರಪಂಚದಲ್ಲಿಯೇ ಅತಿ ಎತ್ತರದ ಪ್ರದೇಶದಲ್ಲಿ ಹಾರುವ ಪಟ್ಟೆ ತಲೆ ಬಾತು ಪಕ್ಷಿ ಚಿಂಚೋಳಿ ವನ್ಯಧಾಮ ಪರಿಸರದಲ್ಲಿದೆ. ಇದು ಹಿಮಾಲಯ ಪರ್ವತಕ್ಕಿಂತಲೂ ಎತ್ತರ ಹಾರುವ ಸಾಮತ್ರ್ಯ ಹೊಂದಿದೆ. ಇಲ್ಲಿ ಮೂರು ತರಹ ಮಂಗಗಳಿವೆ. ಇಲ್ಲಿ ಕಂಡುಬಂದ ಮೂರನೇ ತರಹ ಮಂಗ ದಕ್ಷಿಣ ಭಾರತದಲ್ಲಿ ಮಾತ್ರ ಕಾಣಬಹುದು. ಅಲ್ಲದೇ ಕತ್ತೆ ಕಿರುಬ, ಸೀಳುನಾಯಿ, ನರಿ, ಹೈನಾ, ಚಿರತೆಯಂತಹ ಅನೇಕ ಪ್ರಾಣಿಗಳು ಚಿಂಚೋಳಿ ವನ್ಯಜೀವಿ ಧಾಮದಲ್ಲಿವೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ್ ಚಿಂಚೋಳಿ ತಾಲೂಕಾ ಹಚ್ಚ ಹಸಿರಿನಿಂದ ಕೂಡಿದ ಮಿನಿ ಮಲೆನಾಡಾಗಿದೆ. ಇಲ್ಲಿನ ಚಂದ್ರಂಪಳ್ಳಿ ಜಲಾಶಯ, ನಾಗರಾಳ ಜಲಾಶಯ, ಘೊಟ್‍ಂಗೊಟ್ಟಾ, ಎತ್ತಿಪೆÇೀತಾ, ಮಾಣಿಕಪೂರ್ ಫಾಲ್ಸ್ ಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ದಿಪಡಿಸಬೇಕು. ಚಿಂಚೋಳಿಯಲ್ಲಿ ಪ್ರವಾಸೋದ್ಯಮ ಕಾಲೇಜು ಸ್ಥಾಪಿಸುವ ಅಗತ್ಯವಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಅರಣ್ಯಾಧಿಕಾರಿ ಸಿದ್ದಾರೂಢ ಹೊಕ್ಕುಂದಿ ಕೆಲವೇ ದಿನಗಳಲ್ಲಿ ಚಂದ್ರಂಪಳ್ಳಿಯಿಂದ ಗೊಟ್ಟಂಗೊಟ್ಟದವರೆಗೆ ನುರಿತ ಗೈಡ್ ರೊಂದಿಗೆ ಟ್ರ್ಯಾಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ತೋಟಗಾರಿಕೆ ತರಬೇತಿ ಕೇಂದ್ರದ ಹಿರಿಯ ಸಹಾಯಕ ನಿರ್ದೇಶಕ ವೆಂಕಟ, ಸಹಾಯಕ ನಿರ್ದೇಶಕ ಬಸವರಾಜ, ಪ್ರವಾಸೋದ್ಯಮ ಇಲಾಖೆಯ ಶ್ರೀಮಂತ ಅಲಗೂಡಕರ್, ಗ್ರಾಮ ಪಂಚಾಯತ್ ಅಧ್ಯಕ್ಷ ಕಮಲಿಬಾಯಿ ಪವಾರ ಉಪಸ್ಥಿತರಿದ್ದರು. ತೋಟಗಾರಿಕೆ ಸಹಾಯಕ ಪ್ರದೀಪಕುಮಾರ ಸ್ವಾಗತಿಸಿದರು. ಮುಖ್ಯಗುರು ಮಾಧುರಿ ವಂದಿಸಿದರು. ಉಪನ್ಯಾಸಕ ಓಂಕಾರ ಮಠಪತಿ ನಿರೂಪಿಸಿದರು.