ಜಗತ್ತಿಗೆ ಶಾಂತಿ ಸಂದೇಶ ಸಾರಿದರು ಯೇಸು : ಅರುಣಕುಮಾರ ಪಾಟೀಲ

ಅಫಜಲಪುರ: ಡಿ.27:ಯೇಸುಕ್ರಿಸ್ತರು ಜಗತ್ತಿಗೆ ಶಾಂತಿಯ ಸಂದೇಶ ಸಾರಿದವರು ಹಾಗೂ ಮನುಷ್ಯನು ಮಾನವೀಯತೆಯ ಹಾದಿಯಲ್ಲಿ ಜೀವಿಸಲು ಪ್ರೇರಣೆ ನೀಡಿದವರು ಯೇಸು ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಅರುಣಕುಮಾರ ಎಂವೈ ಪಾಟೀಲ ಹೇಳಿದರು.

ಕ್ರಿಸ್ ಮಸ್ ಹಬ್ಬದ ಅಂಗವಾಗಿ ಪಟ್ಟಣದ ವಿಟಿ ನಗರದಲ್ಲಿರುವ ಸೇಂಟ್ ಜಾನ್ ಬಿಲೀಯರ್ಸ್ ಈಸ್ಟರ್ನ್ ಚರ್ಚ್ ನಲ್ಲಿ ಹಮ್ಮಿಕೊಂಡ ಕ್ರಿಸ್ ಮಸ್ ಹಬ್ಬದಲ್ಲಿ ಭಾಗಿಯಾಗಿ ಕೇಕು ಕತ್ತರಿಸಿ ಮಾತನಾಡಿದ ಅವರು ಯೇಸು ಕ್ರಿಸ್ತರು ಸಾಮಾನ್ಯರಂತೆ ಬದುಕಿ ದೇವ ಮಾನವರಾಗಿ ಜಗತ್ತಿಗೆ ಶಾಂತಿ, ಪ್ರೀತಿ, ಕರುಣೆಯ ಸಂದೇಶವನ್ನು ಸಾರಿದ್ದರು. ಎಲ್ಲರನ್ನೂ ಪ್ರೀತಿಸು, ಸರ್ವರಿಗೂ ಒಳಿತು ಮಾಡು, ಶತ್ರುಗಳನ್ನು ಕ್ಷಮಿಸು ಎಂಬಂತಹ ಅದ್ಭುತ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ. ಹೀಗಾಗಿ ನಾವು ಅವರು ಹಾಕಿ ಕೊಟ್ಟ ಹಾದಿಯಲ್ಲಿ ಸಾಗೋಣ ಎಂದರು.

ಚರ್ಚನ ಪಾಧರ್ ಅಬ್ರಹಾಂ ಜೇಮ್ಸ್ ಸಾನಿದ್ಯ ವಹಿಸಿ ಸರ್ವರಿಗೂ ಆಶೀರ್ವದಿಸಿದರು.

ಚರ್ಚ್ ಆವರಣದಲ್ಲಿ ಯೇಸುವಿನ ಜನ್ಮ ವೃತ್ತಾಂತ ಸಾರುವ ಗೋದಲಿಯ ದೀಪಾಲಂಕಾರ ಎಲ್ಲರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಅಂಬರೀಶ್ ಬುರಲಿ, ಬಸು ಕ್ಷತ್ರಿ, ಜೋಯಿತಾನ್, ಲಲಿತಾ, ರೈಚಲ್ ರಾಣಿ, ಕೇಲವಿನ್, ಸಂತರಾಂ, ಜನಿಫರ್, ಕಲಾವತಿ, ಸಿದ್ರಾಮ, ಅಜಯಕುಮಾರ ಸೇರಿದಂತೆ ಅನೇಕರಿದ್ದರು.