ಜಗತ್ತಿಗೆ ಶಾಂತಿ ಸಂದೇಶ ಯೇಸು-ಶಾಸಕ

ರಾಯಚೂರು.ಡಿ.೨೫- ಜಗತ್ತಿನಲ್ಲಿ ಅತಿ ಹೆಚ್ಚು ಜನರು ಯೇಸು ಕ್ರಿಸ್ತನನ್ನು ಪೂಜೆ ಮಾಡುವುದರ ಮೂಲಕ ಶಾಂತಿ ಸಂದೇಶ ಸಾರುತ್ತಿದ್ದಾರೆ ಎಂದು ಶಾಸಕ ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ನಗರದ ಮೆಥಡಿಸ್ಟ್ ಚರ್ಚೆನಲ್ಲಿ ಕ್ರಿಸ್‌ಮಸ್ ಹಬ್ಬದ ಕೇಕ್ ಕತ್ತರಿಸಿ ಮಾತನಾಡುತ್ತಾ, ಪ್ರಪಂಚದಲ್ಲಿರುವ ಎಲ್ಲಾ ಧರ್ಮಗಳು ಶಾಂತಿ, ನೆಮ್ಮದಿ ಹಾಗೂ ಸಾಮರಸ್ಯ ಜೀವನ ತತ್ವವನ್ನು ಸಾರುತ್ತದೆ. ಯೇಸು ಕ್ರಿಸ್ತನು ಸಹ ಶಾಂತಿ ಪ್ರಿಯನಾಗಿ, ಸಮಾಜಕ್ಕೆ ಒಳಿತು ಬಯಸುವ ಮೂಲಕ ಕೈಸ್ತ ಧರ್ಮವನ್ನು ಸ್ಥಾಪನೆ ಮಾಡಿದರು ಎಂದರು. ಈ ಸಮಾಜ ಎಲ್ಲ ಧರ್ಮಗಳ ಶಾಂತಿಯನ್ನು ಕೋರುತ್ತಿದೆ ಎಂದರು. ಈ ಸಮಾಜದ ಕೊಡುಗೆ ರಾಯಚೂರು ಏಳಿಗೆಗೆ, ಶಾಂತಿಗೆ ಮತ್ತು ಸಂಪತ್ತಿಗೆ ಸದಾ ಬೆನ್ನೆಲುಬಾಗಿ ಇರಬೇಕು ಎಂದರು.
ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಮಾತನಾಡಿ, ಪ್ರಪಂಚದಲ್ಲಿ ಕ್ರಿಸ್ ಮಸ್ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಜಗತ್ತಿಗೆ ಶಾಂತಿ ಸಾರಿದ ಯೇಸು ಕ್ರಿಸ್ತ ತೋರಿದ ಮಾರ್ಗದರ್ಶನದಲ್ಲಿ ಎಲ್ಲರೂ ಸುಖ ಶಾಂತಿ ಮತ್ತು ಸೌಹಾರ್ದತೆ ನಡೆಯಬೇಕು ಎಂದರು. ಯೇಸುಕ್ರಿಸ್ತನ ಕೃಪಾಶೀರ್ವಾದದಿಂದ ಇಂದು ಉನ್ನತ ಅಧಿಕಾರ ಅಲಂಕರಿಸಿದ್ದೇವೆ. ನನ್ನ ತಂದೆ ಸಚಿವ ಎನ್ ಎಸ್ ಬೋಸರಾಜು ಅವರು ಈ ಸಮುದಾಯದ ನಡುವೆ ಉತ್ತಮ ಒಡನಾಟದ ಮೂಲಕ ಯೇಸು ಕ್ರಿಸ್ತನ ಆಶೀರ್ವಾದದಿಂದ ರಾಜಕೀಯ ಸ್ಥಾನಮಾನ ದೊರೆತಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ ವಸಂತಕುಮಾರ, ಜಯಣ್ಣ, ರವಿ ಜಾಲ್ದಾರ್, ಸೇರಿದಂತೆ ಇನ್ನಿತರ ಇದ್ದರು.