ಜಗತ್ತಿಗೆ ಶಾಂತಿ ಸಂದೇಶವನ್ನ ಸಾರಿದವರು ಏಸು ಕ್ರಿಸ್ತ್

ಸಂಡೂರು :ಡಿ:26 ಪರಸ್ಪರ ಪ್ರೀತಿ ವಿಶ್ವಾಸ ಅವಿನಾಭಾವ ಸಂಬಂಧ ಇವುಗಳು ಬಹಳ ಮುಖ್ಯವಾಗಿ ಪ್ರೇರಣೆ ಆಗಬೇಕಾಗಿದೆ. ಕರೋನಾ ದಂತಹ ಮಹಾಮಾರಿ ಇಡೀ ಜಗತ್ತಿಗೆ ಕಾಡುತ್ತಿದ್ದು, ಕಂಟಕ ನಿವಾರಣೆಗಾಗಿ ಜನತೆ ಸಮೃದ್ದಿ ವಾತಾವರಣವನ್ನ ಶಾಂತಿ ನೆಮ್ಮದಿಯಿಂದ ನಿರ್ಮಾಣ ಮಾಡಬೇಕಾದರೆ ಪೂಜೆಗಳು ಬಹಳ ಮುಖ್ಯ. ಉತ್ತಮ ವಾತಾವರಣ ಬಹಳ ಅವಶ್ಯವೆಂದು ಸಂಡೂರಿನ ಕ್ರಿಸ್ತಜ್ಯೋತಿ ಚರ್ಚಿನ ಫಾದರ್ ವಸಂತ ಕುಮಾರ್ ತಿಳಿಸಿದರು.
ಅವರು ಸಂಡೂರಿನ ಶಿಕ್ಷಕರ ಕಾಲೋನಿಯಲ್ಲಿರುವ ಕ್ರಿಸ್ತಜ್ಯೋತಿ ಚರ್ಚನಲ್ಲಿ ಶುಕ್ರವಾರ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಪ್ರಾರ್ಥನಾ ಹಾಗೂ ಪೂಜಾ ಕಾರ್ಯಕ್ರಮವನ್ನ ನೆರವೇರಿಸಿ ಮಾತನಾಡಿದರು. ಏಸುವಿನ ಜನನ ಶಾಂತಿ ಪ್ರೀತಿಯ ತ್ಯಾಗದ ಸಂಕೇತವಾಗಿದ್ದು, ಏಸು ಜಗತ್ತಿಗೆ ಶಾಂತಿ ಸಂದೇಶವನ್ನ ಸಾರಿದವರಲ್ಲಿ ಪ್ರಮುಖರು ಜೀವನದಲ್ಲಿ ಏಸುರವರ ಸಂದೇಶವನ್ನ ಅಳವಡಿಸಿಕೊಳ್ಳಬೇಕಾಗಿದೆ. ಏಸುವಿನ ಸಂದೇಶಗಳು ಜನರಿಗೆ ದಾರಿದೀಪವಾಗಬೇಕಾಗಿದ್ದು, ಏಸುಕ್ರಿಸ್ತರು ಜಗತ್ತಿಗೆ ಕಂಗೊಳಿಸುತ್ತಿರುವ ದೃವತಾರೆ ನಕ್ಷತ್ರಗಳಿದ್ದಂತೆ ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಡೂರು ದೋಣಿಮಲೈ ದೇವಗಿರಿ ಸುಬ್ರಾಯನಹಳ್ಳಿ ತಾರಾನಗರ ಯಶವಂತನಗರ ರಾಮಘಡ ವಿವಿಧ ಗ್ರಾಮಗಳಿಂದ ಏಸುವಿನ ಭಕ್ತರು ಭಾಗವಹಿಸಿದರು.