ಜಗತ್ತಿಗೆ ರಾಮಾಯಣ ಮಹಾಕಾವ್ಯ ನೀಡಿದ ವಾಲ್ಮೀಕಿ

ಚೇಳೂರು, ನ. ೧೯- ರಾಮಾಯಣ ಮಹಾಕಾವ್ಯವನ್ನು ಜಗತ್ತಿಗೆ ಸಾರಿದ ಮಹಾನ್ ಚಿಂತಕ ಮಹರ್ಷಿ ವಾಲ್ಮೀಕಿ ಎಂದು ಹಾಗಲವಾಡಿ ಶಂಕರ್ ಹೇಳಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಭೋಡತಿಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಪೀಳಿಗೆಯ ಜನ ರಾಮಾಯಣದಲ್ಲಿ ಬರುವ ಶ್ರೀ ರಾಮನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೋಳಬೇಕು. ಸತ್ಯ ,ಧರ್ಮ, ನಿಷ್ಠೆಯಿಂದ ಭಕ್ತಿ ಮಾರ್ಗವನ್ನು ಅನುಸರಿಸಬೇಕು ಅವರ ಆದರ್ಶಗಳು ಯುವಪೀಳಿಗೆಗೆ ಮಾದರಿಯಾಗಿದೆ ಎಂದರು.
ಸಚಿವ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಮುಖ್ಯಮಂತ್ರಿ ಬಿ.ಎಸ್.ಯೂಡಿವರಪ್ಪನವರು ಕೊಡಬೇಕು. ಈಗಾಗಲೇ ನಮ್ಮ ಸಮಾಜದವರು ಬಿಜೆಪಿಯತ್ತ ಒಲವು ನೀಡಿದ್ದು ಜನಪರ ಕೆಲಸವನ್ನು ಶ್ರೀರಾಮುಲು ಅವರು ಕ್ಷೇತ್ರದಲ್ಲಿ ಮಾಡುತ್ತಿದ್ದು ಬಿಎಸ್‌ವೈ ಸರ್ಕಾರದಲ್ಲಿ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡುವ ಜತೆಗೆ ವಾಲ್ಮೀಕಿ ಸಮುದಾಯಕ್ಕೆ ಶೇ.೭.೫ರಷ್ವು ಮೀಸಲಾತಿಯನ್ನು ಕೊಡಬೇಕು ಎಂದರು.
ರಾಜನಹಳ್ಳಿ ಸ್ವಾಮೀಜಿಗಳ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆಗ ಸಮಿಶ್ರ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಮನವಿ ಕೊಟ್ಟಿದ್ದು ತದ ನಂತರ ಸರ್ಕಾರ ಪಥನವಾಯಿತ್ತು. ಕೇಂದ್ರ ಹಾಗೂ ರಾಜ್ಯ ಎರಡಲ್ಲೂ ಕೂಡ ಬಿಜೆಪಿ ಸರ್ಕಾರವಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಡಲೇ ವಾಲ್ಮೀಕಿ ಸಮುದಾಯಕ್ಕೆ ಶೇ. ೭.೫ರಷ್ವು ಮೀಸಲಾತಿಯನ್ನು ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಮಂಜಣ್ಣ, ಕರಿಬಸವಯ್ಯ, ಪ್ರಭು, ಪುನೀತ್, ದೇವರಾಜು, ಮಂಜಣ್ಣ, ಮುಕುಂದ, ಚೇತನ್ ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು ಭಾಗವಹಿಸಿದ್ದರು.