ಜಗತ್ತನ್ನು ಸೃಷ್ಠಿಕರಿಸಿದ ಆ ಭಗವಂತನೇ ಮೊದಲ ಕಲಾವಿದ

ರಾಯಚೂರು,ಜ.೨೨- ಉದಯ ನಗರದಲ್ಲಿ ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯ ಆವರಣದಲ್ಲಿ ಅಂತರಾಷ್ಠ್ರೀಯ ಕ್ಲಾರಿಯೋನೆಟ್ ವಾದಕರಾದ ಡಾ. ಪಂ. ನರಸಿಂಹಲು ವಡವಾಟಿಜಿಯವರ ೮೨ ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ ಕಲಾವಿದರ ದಿನಾಚರಣೆಯನ್ನು ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರ ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟಕರಾಗಿ ಆಗಮಿಸಿದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಮಹಾದೇವಪ್ಪ ಗಂಗಪ್ಪ ಕೂಡ ಒಕ್ಕಲಿಗ ಮಾತನಾಡಿ ಈ ಜಗತ್ತಿನಲ್ಲಿ ಮೊದಲ ಕಲಾವಿದನೆಂದರೆ ಆ ಪರಶಿವ ಭಗವಂತನಾಗುತ್ತಾನೆ. ಯಾಕೆಂದರೆ ಆತ ಈ ಸೃಷ್ಠಿಯ ಕಾರ್ಯಕರ್ತ ಒಬ್ಬರ ಹಾಗೆ ಇನ್ನೊಬ್ಬರಿಲ್ಲ ಹಾಗೂ ಮುಂದುವರಿದ ತಂತ್ರಜ್ಞಾನದ ಪ್ರಕಾರ ಹೇಳಬೇಕಾದರೆ, ಈಗ ಕೆಲವು ಮಹಾವಿದ್ಯಾಲಯಗಳಲ್ಲಿ ಮುಖ್ಯ ಕಛೇರಿಗಳಲ್ಲಿ ನಮ್ಮ ಹೆಬ್ಬೆಟ್ಟನ್ನು ಒತ್ತುವ ಯಂತ್ರಗಳು ಬಂದಿವೆ. ಅಂದ್ರೆ ತಮ್ ಒತ್ತುತ್ತಾರೆ, ಆದರೆ ಒಬ್ಬರ ತಮ್ ಇರುವ ಹಾಗೆ ಇನ್ನೊಬ್ಬರ ತಮ್ ಗಳಿಲ್ಲವೆಂದರೆ ಮೊದಲ ಕಲಾವಿದ ಯಾರು ಎಂದು ನಾವು ನೀವೆಲ್ಲರು ಅರ್ತೈಸಿಕೊಳ್ಳಬೇಕಾಗಿದೆ ಎಂದರು.
ಇವರ ಜನ್ಮ ದಿನವನ್ನು ಕಲಾವಿದರ ದಿನವೆಂದು ಆಚರಿಸುತ್ತಿರುವುದು ತುಂಬಾ ಶ್ಲಾಘನೀಯವಾದದು ಅವರಿಗೆ ನಾನು ಜನ್ಮ ದಿನದ ಹಾರ್ಧಿಕ ಶುಭಾಷಯಗಳನ್ನು ತಿಳಿಸುತ್ತೇನೆ ಎಂದು ಹೇಳಿದರು. ನಂತರ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಡಾ. ಬಸವ ಪ್ರಭು ಪಾಟೀಲ್ ಬೆಟ್ಟದೂರುರವರು ಮಾತನಾಡಿ ವಡವಾಟಿಜಿಯವರು ಕಲಾವಿದರಾಗಿ ಈ ಪ್ರಪಂಚಕ್ಕೆ ರಾಯಚೂರಿನ ಹೆಸರನ್ನು ಬೆಳೆಸಿದ ಕೀರ್ತಿ ಸಲ್ಲುತ್ತದೆ.
ರಾಯಚೂರ ಏರಿಯಾದಲ್ಲಿ ಒಂದು ಪುಟ್ವ ಗ್ರಾಮವಾದ ವಡವಾಟಿಯಲ್ಲಿ ಜನಿಸಿದ ಇವರು ಕ್ಯಾಲಿಪೋರ್ನಿಯಾದ ಯುನಿವರ್ಷಿಟಿಯಲ್ಲಿ ವಿಸಿಟಿಂಗ್ ಪ್ರೋಫೇಸರ್ ಆಗಿ ನೇಮಕಗೊಳ್ಳುತ್ತಾರೆ ಎಂದರೆ, ಇದು ಸಣ್ಣ ಮಾತಲ್ಲ ಇದರಲ್ಲಿಯೇ ತೋರಿಸುತ್ತೆ ಅವರು ಎಂಥಾ ಕಲಾವಿದರಿರಬಹುದು ಎಂದು ಹೇಳಿದರು. ವೇದಿಕೆಯ ಮೇಲೆ ಡಾ.ಪಂ. ವಡವಾಟಿಜಿ ದಂಪತಿಗಳನ್ನು ಸರ್ವರೂ ಸೇರಿ ಸನ್ಮಾನಿಸಿ ಗೌರವಿಸಿದರು. ನಂತರ ವೇದಿಕೆಯ ಮೇಲೆ ಸರ್ವ ಗಣ್ಯರನ್ನು ಗೌರವಿಸಲಾಯಿತು.
ಪ್ರಾರಂಭದಲ್ಲಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆಯನ್ನು ಪ್ರಸ್ತುತ ಪಡಿಸಿದರು. ಶಾರದಾ ವಡವಾಟಿ ಭರತ್ ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಪ್ರಸ್ತುತ ಪಡಿಸಿದರು. ಇವರಿಗೆ ವಾದ್ಯ ಸಾಥಿಯಾಗಿ ಗೋಪಾಲ ಗುಡಿಬಂಡಿ, ಸರಸ್ವತಿ ಇದ್ದರು.
ಈ ಸಂದರ್ಭದಲ್ಲಿ ಯೋಗ ರವೀಶ ಭರತ್, ರಾಘವೇಂದ್ರ ಬೆಂಗಳೂರು, ಕೆ. ಎನ್.ರೆಡ್ಡಿ ಪತ್ರಕರ್ತರು, ವಿಜಯಲಕ್ಷ್ಮೀ,ಸರಸ್ವತಿ ಹೆಚ್. ರಾಜಶೇಖರ, ಮಹಾಲಕ್ಷ್ಮೀ ವೀರೇಶ,ಹಾಗೂ ವಿದ್ಯಾರ್ಥಿಗಳ ಸರ್ವ ಪಾಲಕರು ಉಪಸ್ಥಿತರಿದ್ದರು.