ಜಗತ್ತನ್ನು ಮೆಚ್ಚಿಸಲು ಹುಚ್ಚು ಸಮರ್ಥನೆ ಬೇಡ:ಅಟ್ಟೂರ

ಕಲಬುರಗಿ:ಜು.13:ಜಗತ್ತನ್ನು ಮೆಚ್ಚಿಸಲು ಹುಚ್ಚು ಸಮರ್ಥನೆಗಳಿಗಿಂತ ಮನಸ್ಸಾಕ್ಷಿಗೆ ಒಪ್ಪಿ ಬಾಳಿದ ಶರಣರ ನಡೆ ನುಡಿಯೇ ನಮಗೆ ದಾರಿ ದೀಪವಾಗಿದೆ ಎಂದು ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಹೇಳಿದರು.
ಸೋಮವಾರ ಕಲಬುರಗಿ ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 114 ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತ ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಶ್ರೆ?ಷ್ಠ ರಾಜಕೀಯ ಮುತ್ಸದ್ಧಿ, ಪ್ರಧಾನಿಯಾಗಿ ನೂತನ ಅನುಭವ ಮಂಟಪವನ್ನು ಕಟ್ಟಿದ ತನ್ಮೂಲಕ ವಿಶ್ವದಲ್ಲಿಯೆ ಮೊದಲ ಪ್ರಜಾಪ್ರಭುತ್ವದ ಬುನಾದಿ ಹಾಕಿದ ಪ್ರಜಾ ಪ್ರಭುತ್ವವಾದಿಯಾಗಿದ್ದಾರೆ.ಬಸವಣ್ಣನವರು ಸರ್ವ ಸಮಾನತೆಯನ್ನು ತಂದು ಮನುಷ್ಯತ್ವವನ್ನು ಎತ್ತಿ ಹಿಡಿದು ಮಾನವತಾವಾದಿ ಯಾಗಿದ್ದಾರೆ. ಶತ ಶತಮಾನಗಳ ಕಾಲ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದಾಸ್ಯಕ್ಕೆ ಒಳಗಾಗಿದ್ದ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಸ್ತ್ರೀಲೋಕ ಉದ್ದಾರ ಮಾಡುವುದರೊಂದಿಗೆ ಸಮಾನತೆ ಸಾರಿದ್ದಾರೆ.ಬಸವಣ್ಣನವರು ವಿಶ್ವದಲ್ಲಿಯೇ ಮಾದರಿ ಸಾರ್ವಜನಿಕ ಶಿಕ್ಷಣವನ್ನು ಜಾರಿಗೆ ತಂದು ಅನುಭವ ಮಂಟಪದಲ್ಲಿ ಕಾರ್ಯಗತಗೊಳಿಸಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಿದ ಶಿಕ್ಷಣ ಕ್ರಾಂತಿಯ ಹರಿಕಾರರಾಗಿ ಸಮಾನತೆ ಸಾರುವ ಮೂಲಕ ಸಮಸಮಾಜ ನಿರ್ಮಿಸಿದ್ದಾರೆ.ಅದೆ ಹಂತದಲ್ಲಿ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಕೂಡ ನಿರಂತರವಾಗಿ ಶರಣರ ಆಚಾರ ವಿಚಾರಗಳು ಜನರಿಗೆ ಮುಟ್ಟಿಸುವ ಮೂಲಕ ಸಮ ಸಮಾಜದ ಪರಿಕಲ್ಪನೆ ಮೂಡಿಸುವ ಶ್ರೀಮಠದ ಕಾರ್ಯ ಶ್ಲಾಘನೀಯವೆಂದು ಮಾರ್ಮಿಕವಾಗಿ ಹೇಳಿದರು.ಮುಖ್ಯ ಅತಿಥಿಗಳಾಗಿ ಉದ್ದಿಮೆದಾರರಾದ ಸಿದ್ದಣ್ಣ ಬಿರಾದಾರ ಸಿರಗಾಪುರ ಆಗಮಿಸಿದರು.
ಕು.ಸಿಂಚನಾ ಪ್ರಾರ್ಥಿಸಿದರು. ಶಿಕ್ಷಕರಾದ ಚನಬಸಪ್ಪ ಸ್ವಾಗತಿಸಿದರು. ಸಂಗಮೇಶ ನಾಗೂರ ನಿರೂಪಿಸಿದರು. ಮಾಣಿಕ ಮಿರ್ಕಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಶಾಸ್ತ್ರಿ ಹಸರಗುಂಡಗಿ, ಸಿದ್ದಣ್ಣ ವಾಡಿ, ಶರಣಬಸಪ್ಪ ಪೆÇೀಲಿಸ ಪಾಟೀಲ, ಭಗವಂತರಾವ ಡಿಗ್ಗಿ,ಜಗನ್ನಾಥ ಸಜ್ಜನ, ಶೇಖರ ದೇಗಾಂವ,ಗುರುರಾಜ ಹಸರಗುಂಡಗಿ ಸೇರಿದಂತೆ ಹಲವಾರೂ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.