ಜಗಜ್ಯೋತಿ ನಗರದಲ್ಲಿ ಮಹಿಳಾ ದಿನಾಚರಣೆ

ಕಲಬುರಗಿ:ಮಾ.16: ಇಲ್ಲಿನ ಸಾಯಿ ಮಂದಿರ ಹತ್ತಿರ ಇರುವ ಜಗಜ್ಯೋತಿ ನಗರದ ಡಾ. ಗಿರಿ ಲೇಔಟ್‍ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ಫರತಾಬಾದ ಪಿಯು ಕಾಲೇಜಿನ ಉಪನ್ಯಾಸಕರಾದ ಲಲತಾ ರೆಡ್ಡಿಯವರು ಮಹಿಳಾ ದಿನದ ಇತಿಹಾಸ ಹಾಗೂ ಮಹತ್ವವನ್ನು ಬಹಳ ಸವಿವರವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮೊದಲಿಗೆ ಭಾರತಿ ಹಿರೇಮಠ ಅವರು ಸ್ವಾಗತ ಗೀತೆಯನ್ನು ಪ್ರಸ್ತುತಪಡಿಸಿದರು ಹಾಗೂ ಮಹಿಳೆಯರ ಕುರಿತು ಸರ್ವಜ್ಞ ಕಾಲೇಜಿನ ಉಪನ್ಯಾಸಕರಾದ ವಿನುತಾ ಮೇಡಂ, ಲಕ್ಷ್ಮಿ ಮೇಡಂ ಹಾಗೂ ವಿಶಾಲಾಕ್ಷಿ ದೇಸಾಯಿಯವರು ಹಾಡಿದರು. ಮಹಿಳೆಯರಿಗೆ ವಿವಿಧ ಆಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಾಕಷ್ಟು ಮಹಿಳೆಯರು ಬಹಳ ಸ್ಫುರ್ತಿಯಿಂದ ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದುಕೊಂಡರು. ನಮೃತಾ ಎ. ಗಚ್ಚಿನಮಠ ಅವರು ನಿರೂಪಣೆ ಮಾಡಿದರು, ಸಹಾಯಕ ಸಾಂಖಿಕ ಅಧಿಕಾರಿ ಗೀತಾಂಜಲಿ ಅವರು ವಂದನಾರ್ಪಣೆಗೈದರು.