ಜಗಜೀವನ ರಾಮ್ ಜಯಂತಿ ಆಚರಣೆ

ವಾಡಿ:ಎ.5: ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ದಿವಂಗತ ಡಾ. ಬಾಬು ಜಗಜೀವನ್ ರಾಮ್ ಅವರ 116ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಅಧ್ಯಕ್ಷ ಲಕ್ಷ್ಮಣ ಅಮಕಾರ ಹಾಗೂ ಗ್ರಾಮದ ಮುಖಂಡ ಶಿವಯ್ಯ ಸ್ವಾಮಿ ಹಿರೇಮಠ ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮುಖಂಡರಾದ ನರಸಪ್ಪ ಹೋಸಮನಿ, ಶ್ರೀಮಂತ ದೊಡ್ಡಮನಿ, ರಾಮುಜೀ ಪೆÇೀತೆಗೊಳ, ಶಿವಕುಮಾರ್ ಮಾಂಗ್, ಮಲ್ಲಪ್ಪ ಹೊಸಮನಿ, ನಾಗರಾಜ ಚೋಣೆಧಾರ ಇದ್ದರು.