ಜಗಜೀವನ್ ರಾಮ್ ಆದರ್ಶಗಳನ್ನು ಪಾಲಿಸಿ

ಕೋಲಾರ,ಏ.೬: ಬಾಬೂಜಿ ಎಂದೇ ಪ್ರಸಿದ್ದರಾಗಿದ್ದ ಡಾ.ಬಾಬು ಜಗಜೀವನ್ ರಾವ್ ಅವರ ನಿಸ್ವಾರ್ಥ ಸೇವೆ ದೃಢ ನಿರ್ಧಾರ ಸ್ವಾತಂತ್ರ್ಯ ಚಳುವಳಿ ಮತ್ತು ಸಮರ್ಥನಾ ಮನೋಭಾವಗಳ ಹೋರಾಟಗಳಿಂದಾಗಿ ಅವರು ಇಂದಿನ ಸಮಾಜಕ್ಕೆ ಆದರ್ಶಮಯ ವ್ಯಕ್ತಿಯಾಗಿದ್ದರು. ಇವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರು ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್ ಅವರು ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ, ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಅವರ ೧೧೪ನೇ ಜನ್ಮ ದಿನಾಚರಣೆಯ ಭಾವಚಿತ್ರ ಅನಾವರಣ ಮತ್ತು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಮತ್ತು ತ್ಯಾಗದಿಂದ ತನ್ನದಾಗಿಸಿಕೊಳ್ಳಬಹುದು ಎಂಬುದನ್ನು ಬಾಬೂಜಿಯವರ
ಬದುಕು ತಿಳಿಸಿಕೊಡುತ್ತದೆ ಎಂದರು ಶಾಸಕ ಶ್ರೀನಿವಾಸಗೌಡ ಕಾರ್ಯಕ್ರಮದ ವಹಿಸಿ ಮಾತನಾಡಿ, ಭಾರತಕ್ಕೆ ಸಂವಿಧಾನವನ್ನು ಬರೆದ ಡಾ. ಅಂಬೇಡ್ಕರ್‌ಅವರನ್ನು ಪ್ರಪಂಚವೇ ಅನುಸರಿಸುತ್ತಿದೆ. ಕೂಲಿ ಮಾಡಿ ಜೀವನ ಸಾಗಿಸಲು ಕಷ್ಟವಾಗಿದ್ದ ಕಾಲಘಟ್ಟದಲ್ಲಿ ಬಾಬು ಜಗಜೀವನ್ ರಾಮ್ ಅವರ ಹಸಿರು ಕ್ರಾಂತಿಯಿಂದಾಗಿ ಬಡ ಕುಟುಂಬದವರ ಆಹಾರ ಕೊರತೆ ದೂರವಾಯಿತು. ಬಾಬೂಜಿ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೆ ಆದ್ಯತೆ ಕೊಟ್ಟಿದ್ದರಿಂದ ಇಂದು ಸಮಾಜದಲ್ಲಿ ಆಹಾರ ಪದಾರ್ಥಗಳ ಕೊರತೆ ಇಲ್ಲ. ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ ನಿಲ್ಲಬೇಕು ಎಂದ ಅವರು ಕೃಷಿವಲಯದಲ್ಲಿ ಅವರ ಮಾರ್ಗದರ್ಶನ, ನಾಯಕತ್ವ ಅವಿಸ್ಮರಣೀಯವಾದುದ್ದು ಎಂದು ತಿಳಿಸಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಆರ್.ರಮೇಶ್ ಕುಮಾರ್ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ ಅವರು ಮಾತನಾಡಿ, ವೈಚಾರಿಕತೆಗಳನ್ನು ವಿಚಾರಗಳನ್ನು ಮುಂದಿನ ಪಿಳಿಗೆಗೆ ವರ್ಗಾಯಿಸುವ ಸಲುವಾಗಿ
ಜಯಂತಿಗಳನ್ನು ಆಚರಣೆ ಮಾಡಬೇಕು. ಶಿಕ್ಷಣ ಪಡೆಯುವುದಕ್ಕೂ ಕಷ್ಟ ಇದ್ದ ಕಾಲದಲ್ಲಿ ಬಿಲ್ರ್ಲಾ ವಿದ್ಯಾರ್ಥಿವೇತನವನ್ನು ಪಡೆದು ಬನಾರಸ್ ನಂತಹ ಪ್ರತಿಷ್ಟಿತ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಪ್ರತಿಬೆ ಒಂದು ಇದ್ದರೆ ಯಾವ ಹಂತಕ್ಕಾದರೂ ಬೆಳೆಯಬಹುದು ಎಂದು ತಿಳಿಸಿಕೊಟ್ಟ ಮಹಾಜ್ಞಾನಿ ಬಾಬು ಜಗಜೀವನ್ ರಾಮ್. ದೇಶದ ವಿವಿಧ ಮಹತ್ವದ ಹುದ್ದೆಗಳನ್ನು ಅಲಂಕರಿಸಿದರೂ ಕೂಡ ಯಾವುದೇ ವಿವಾದಗಳಿಗೆ ಸಿಳುಕಿಕೊಳ್ಳದೆ ಜನರ ಏಳಿಗೆಗಾಗಿ ಶ್ರಮಿಸಿದರು.
ಆಲ್ ಇಂಡಿಯಾ ಡಿಪ್ರೆಸ್ಡ್ ಕ್ಲಾಸ್ಸ್ ಲೀಗ್ ಸಂಘಟನೆ ಮೂಲಕ ಸಮಾನತೆಯನ್ನು ಸಾಧಿಸಬೇಕು ಅನ್ನುವುದು ಅವರ ಉದ್ದೇಶವಾಗಿತ್ತು. ರಾಜಕೀಯ ಸಮಾನತೆ ಇರಲಿ, ಆರ್ಥಿಕ ಸಮಾನತೆ ಇರಲಿ ಇದಕ್ಕೆ ಮೊದಲ ಅಡಿಪಾಯ ಶಿಕ್ಷಣ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು ಎಂದು
ತಿಳಿಸಿದರು. ಕವಿ ಹಾಗೂ ವಿಮರ್ಶಕ ಕೋಟಿಗಾನಹಳ್ಳಿ ರಾಮಯ್ಯ ವಿಶೇಷ ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷರಾದ ಆರ್.ಶ್ವೇತ ಶಬರೀಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಸಂಜೀವಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಾಲಾಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ರಾಜಣ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್, ಸಮುದಾಯದ ಮುಖಂಡರಾದ ನಾಗನಾಳ ಮುನಿಯಪ್ಪ,
ಸೇರಿದಂತೆ ದಲಿತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.