ಜಗಜೀವನ್ ರಾಮ್ ಅವರ ಆದರ್ಶ ಪಾಲಿಸಿ: ಅಮರೇಶ್

oppo_0


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಏ.05: ತಳ ಸಮುದಾಯದಿಂದ ಬೆಳೆದು ದೇಶ ಕಂಡಂತಹ ಉನ್ನತ ಸಾಧನೆಯನ್ನು ಮಾಡಿದ ಡಾ. ಬಾಬು ಜಗಜೀವನ್ ರಾಮ್ ಅವರ ಆದರ್ಶವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಹಶೀಲ್ದಾರ್ ಅಮರೇಶ್ ಜಾಲಹಳ್ಳಿ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ಪ್ರಯುಕ್ತ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ನಂತರ ದಲಿತ ಮುಖಂಡರಾದ ಬದ್ದಿ ಮರಿಸ್ವಾಮಿ ಮಾತನಾಡಿ ಈಗ ನೀತಿಸಂಹಿತೆ ಇದೆ. ಮುಂದಿನ ವರ್ಷ ಬಾಬು ಜಗಜೀವನ್ ರಾಮ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆಗೆ ಮಾಡಬೇಕು ಎಂದು ಸಲಹೆ ಸೂಚಿಸಿದರು.
ಇವರ ವಿಚಾರಗಳು ಪ್ರತಿಯೊಬ್ಬರ ದಾರಿದೀಪವಾಗಬೇಕು, ಹಾಡು ಮುಟ್ಟದ ಸೊಪ್ಪಿಲ್ಲ ಇವರು ನಿರ್ವಹಿಸದ ಖಾತೆಗಳಿಲ್ಲ, ಕೃಷಿಯಲ್ಲಿ ದಿಟ್ಟ  ಹೆಜ್ಜೆಯ ಪರಿಣಾಮವಾಗಿ‌ ಹಸಿರು ಕ್ರಾಂತಿಯ ಹರಿಕಾರ ಎಂಬ ಹೆಸರು ಇವರಿಗಿದೆ. ಸ್ವಾಮಿನಾಥನವರು ಇವರ  ಪ್ರೇರಣೆಯನ್ನು ಅಳವಡಿಸಿಕೊಂಡಿದ್ದರು. ಕೃಷಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಪರಿಚಯಿಸಿದ ಮೊಟ್ಟ ಮೊದಲ ಏಕೈಕ ವ್ಯಕ್ತಿಯಾಗಿದ್ದರು. ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡದಲ್ಲದೆ ದಲಿತರ ಪರ ಮತದಾನದ ಧ್ವನಿಯನ್ನು ಎತ್ತಿ ಹಿಡಿದ  ಮೊದಲಿಗರು. ಜ್ಞಾನದ ಜ್ಯೋತಿಯಾದ
 ಡಾ. ಬಿ.ಆರ್. ಅಂಬೇಡ್ಕರ್ ಅವರ ಮರಣ ಹೊಂದಿದಾಗ ಸಹಾಯ ಅಸ್ತ್ರವಾಗಿ ವೈಯಕ್ತಿಕ 2500 ಗಳನ್ನು  ನೀಡಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತುಕಾರಾಮ ಯಮುನಪ್ಪ ಮಾದರ, ಪಶು ವೈದ್ಯಾಧಿಕಾರಿ ಕೊಟ್ರೇಶ್, ವೈದ್ಯಾಧಿಕಾರಿ ಡಾ. ಬದ್ಯಾನಾಯ್ಕ್, ವಕೀಲರಾದ ಹನುಮಂತಪ್ಪ, ಅಜ್ಜಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.