ಜಗಜೀವನರಾಮ ಸಮುದಾಯ ಭವನಕ್ಕೆ ಜಮೀನು ನೀಡಲು ಆಗ್ರಹ

ಶಹಾಬಾದ: ನ.7: ನಗರದಲ್ಲಿ ಡಾ.ಬಾಬು ಜಗಜೀವನರಾಮ ಸಮುದಾಯ ಭವನಕ್ಕೆ 2016-17ರಲ್ಲಿ ಸರ್ಕಾರದಿಂದ 1 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಅದಕ್ಕಾಗಿ ಜಮೀನು ಮಂಜೂರು ಮಾಡಬೇಕೆಂದು ಕರ್ನಾಟಕ ನವ ನಿರ್ಮಾಣ ವೇದಿಕೆ ತಾಲ್ಲೂಕ ಆಡಳಿತಕ್ಕೆ ಆಗ್ರಹಿಸಿದೆ.

ರಾಜ್ಯ ಸರ್ಕಾರದಿಂದ 2016-17ರಲ್ಲಿ ಅನುದಾನ ಮಂಜೂರಾಗಿದ್ದು, ಸಮುದಾಯ ಭವನಕ್ಕೆ ಸ್ಥಳ ಲಭ್ಯವಿಲ್ಲ. ಸರ್ಕಾರಿ ಗೈರಾಣಿ ಜಮೀನಿನ ಸರ್ವೇ ನಂ-184ರಲ್ಲಿ 27 ಎಕರೆ 38 ಗುಂಟೆ ಜಮೀನು ಲಭ್ಯವಿದೆ. ಸರ್ಕಾರಿ ಗೈರಾಣು ಜಮೀನಿನಲ್ಲಿ 2 ಎಕರೆ ಭೂಮಿ ಮಂಜುರು ಮಾಡಿ ಪರಿಶಿಷ್ಟ ಜನಾಂಗದ ಕನ್ನಡ ಸಾಂಸ್ಕøತಿಕ ಕಾರ್ಯಕ್ರಮ, ಮದುವೆ, ಸಭೆ ಸಮಾರಂಭಕ್ಕೆ ಅನುವು ಮಾಡಿಕೊಡಬೇಕು. ಸರ್ಕಾರ ಅನುದಾನ ಸದ್ಬಳಕ್ಕೆಗೆ ಅವಕಾಶ ಮಾಡಿಕೊಡಬೇಕೆಂದು ಸಂಘಟನೆಯ ನಿಯೋಗ ತಹಸೀಲ್ದಾರ್ ಸುರೇಶ ವರ್ಮಾಗೆ ಒತ್ತಾಯಿಸಲಾಯಿತ್ತು.

ಈ ಸಂದರ್ಭದಲ್ಲಿ ಕರ್ನಾಟಕ ನವನಿರ್ಮಾಣ ವೇದಿಕೆ ಜಿಲ್ಲಾಧ್ಯಕ್ಷ ಚಂದ್ರಕಾಂತ ನಾಟೇಕರ್, ಶಹಾಬಾದ ತಾಲ್ಲೂಕ ಅಧ್ಯಕ್ಷ ನಾಗರಾಜ ಮುದ್ನಾಳ, ಸೇಡಂ ಅಧ್ಯಕ್ಷ ರೇವಣಸಿದ್ದಪ್ಪ ಹೊನಗುಂಟಿಕರ್, ಅಂಬ್ರೇಶ ಮೈನಾಳಕರ್, ರವಿ ಹುಸನಪ್ಪಾ, ರೇವಣಸಿದ್ದಪ್ಪ ಪಸ್ಪುಲ್, ಲಕ್ಷ್ಮಣ ಹೈಯಾಳಕರ್, ಸುದರ್ಶನ ಸಬ್ಬಿ, ಶಿವರಾಜ ಕೊರೆ, ರವಿ ಬೆಳಮಗಿ, ಶರಣು ಪಗಲಾಪುರ್, ಕರ್ಣ ಕಾಳನೂರ್, ನಾಗಪ್ಪ ರಾಯಚೂರಕರ, ನಂದಕಿಶೋರ ಕಾಂಬಳೆ, ಅಂಬರೀಷ ಮಾಳಗಿ, ಮರಲಿಂಗ ಮಂಡಿ ಇದ್ದರು.