ಜಕ್ಕಲ ಮಡಗು ಹೂಳೆತ್ತುವ ಕಾರ್ಯಕ್ಕೆ ರಫಿಕ್ ಸಲಹೆ

ಚಿಕ್ಕಬಳ್ಳಾಪುರ.ಫೆ೭:ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಗೆ ಬರುವ ಎಲ್ಲಾ ೩೧ ವಾರ್ಡ್ ಗಳಿಗೆ ಬೌಂಡರಿ ಹಾಕಬೇಕು ಹಾಗೂ ನಗರಕ್ಕೆ ಕುಡಿಯುವ ನೀರಿನ ಮೂಲ ಆಸರೆ ಎನಿಸಿರುವ ಜಕ್ಕಲಮಡುಗು ಜಲಾಶಯದಲ್ಲಿ ಈಗಾಗಲೇ ಮಂಜೂರಾತಿ ಆಗಿರುವ ೨.೬ ಕೋಟಿ ರೂಗಳ ವೆಚ್ಚದಲ್ಲಿ ಹೊಳೆತ್ತುವ ಕಾರ್ಯ ಮಾಡಬೇಕು ಎಂದು ನಗರಸಭೆ ಹಿರಿಯ ಸದಸ್ಯ ಎಸ್. ಎಂ. ರಫಿಕ್ ತಿಳಿಸಿದರು
ಚಿಕ್ಕಬಳ್ಳಾಪುರ ನಗರಸಭೆಯ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ೨೦೨೪ ೨೫ರ ಬಜೆಟ್ ಪೂರ್ವ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಗರ ಸಭೆ ವ್ಯಾಪ್ತಿಗೆ ಬರುವ ಖಾಸಗಿ ಆಸ್ತಿಗಳಿಗೆ ಸಂಬಂಧಿಸಿದಂತೆ ನಗರವಾಸಿಗಳು ಟ್ಯಾಕ್ಸ್ ಕಟ್ಟುತ್ತಾರೆ ಅದು ಅವರೇ ಅವರ ಆಸ್ತಿಗೆ ಕಟ್ಟುವ ಟ್ಯಾಕ್ಸ್ ಆಗಿರುವುದರಿಂದ ಟ್ಯಾಕ್ಸ್ ಬಾಕಿ ಉಳಿದರೆ ಅದಕ್ಕೆ ಬಡ್ಡಿ ಮತ್ತು ಸುಸ್ತಿ ಬಡ್ಡಿ ಹಾಕಬಾರದು ಎಂದು ತಿಳಿಸಿದರು.
ಈ ವರ್ಷ ಅಲ್ಲದಿದ್ದರೂ ಮುಂದಿನ ವರ್ಷ ಸಹ ನಗರವಾಸಿಗಳು ತಮ್ಮ ಆಸ್ತಿಗೆ ಟ್ಯಾಕ್ಸ್ ಕಟ್ಟೆ ಕಟ್ಟುತ್ತಾರೆ ಹಾಗಾಗಿ ಅವರಿಗೆ ಬಡ್ಡಿ ಹಾಕುವುದು ನ್ಯಾಯವಾದ ಕ್ರಮವಲ್ಲ ಎಂದರು.
ನಗರಸಭೆಯ ೩೧ ವಾರ್ಡ್ಗಳಲ್ಲಿ ಎಲ್ಲಾ ವಾರ್ಡ್ ಗಳಿಗೂ ತಲಾ ೩೦ ಎಲೆಕ್ಟ್ರಿಕ್ ಫೋನ್ ಸಹಿತ ಸಂಪೂರ್ಣ ವಿದ್ಯುತ್ ಸಂಕಲ್ಪ ಕಲ್ಪಿಸಬೇಕು ಇದರಿಂದ ನಗರವಾಸಿಗಳಿಗೆ ಅನುಕೂಲವಾಗುತ್ತದೆ ಎಂದರು.
ನಗರ ಸಭೆಯ ಕೆಲವು ಸದಸ್ಯರುಗಳು ತಮ್ಮ ತಮ್ಮ ವಾರ್ಡ್ಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಕಾರಣ ನಗರ ಸಭೆಯಲ್ಲಿ ಅಧ್ಯಕ್ಷರು ಇಲ್ಲದೆ ಜಿಲ್ಲಾಧಿಕಾರಿಗಳೇ ಕಷ್ಟಡಿಯನ್ ಆಗಿರುವುದರಿಂದ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಅನೇಕ ಕಾಮಗಾರಿಗಳ ಪೂರೈಕೆಯ ಬಗ್ಗೆ ವಿವರಣೆ ನೀಡಿದರು.
೧೫ನೇ ವಾರ್ಡಿನ ನಗರಸಭೆ ಸದಸ್ಯ ಅಂಬರೀಶ್ ಮಾತನಾಡಿ
ನಗರ ಸಭೆ ಆಸ್ತಿಗಳನ್ನು ಬಾಡಿಗೆಗೆ ನೀಡಿರುವ ಕಟ್ಟಡಗಳಿಗೆ ನೂತನವಾಗಿ ಟೆಂಡರ್ ಕರೆಯಬೇಡಿ ಸಾಲ ಸೌಲಭ ಮಾಡಿ ಅವರು ವ್ಯಾಪಾರ ವಹಿವಾಟು ಮಾಡಿರುತ್ತಾರೆ ಅಕ್ಕಪಕ್ಕದ ಆಸ್ತಿಗಳ ಬಾಡಿಗೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಸ್ವಲ್ಪ ಹೆಚ್ಚು ಕಡಿಮೆ, ಈಗಿರುವ ಬಾಡಿಗೆದಾರರ ಬಾಡಿಗೆಯನ್ನು ಪರಿಷ್ಕರಿಸಿ ಅವರಿಗೆ ಕಟ್ಟಡವನ್ನು ಬಾಡಿಗೆಗೆ ನೀಡಿದರೆ ಹೆಚ್ಚಿನ ಅನುಕೂಲ ಆಗುತ್ತದೆ ಎಂದರು.
ಐದನೇ ವಾರ್ಡಿನ ನಗರಸಭೆ ಸದಸ್ಯ ಜಿ ನಾಗರಾಜ್ ಮಾತನಾಡಿ ನಗರದಲ್ಲಿ ತುಂಬಾ ಬಡವರು ಮತ್ತು ನಿರ್ಗತಿಕರು ಮೃತಪಟ್ಟ ಲ್ಲಿ ಅವರ ಅಂತ್ಯಕ್ರಿಯೆಗೆ ನಗರಸಭೆ ವತಿಯಿಂದ ೫೦೦೦ ರೂಗಳನ್ನು ನೀಡಬೇಕು ಎಂದರು ಹಾಗೂ ಒಂದು ಶವಸಾಗಿಸುವ ವಾಹನವನ್ನು ಸರ್ಕಾರದ ವತಿಯಿಂದ ಮಂಜೂರಾತಿ ಮಾಡಿಸಬೇಕು ಎಂದರು.ನಗರ ಸಭೆ ಸದಸ್ಯ ಆರ್ ಮಟಮಪ್ಪ ರವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪಿ ಏನ್ ರವೀಂದ್ರರವರು ಮಾತನಾಡಿ ನಗರ ಅತ್ಯಂತ ಪ್ರಮುಖವಾದುದಾಗಿದೆ ನಗರಸಭೆ ಸದಸ್ಯರುಗಳು ಅತ್ಯಂತ ಉತ್ತಮವಾದ ಸಲಹೆಗಳನ್ನು ಮತ್ತು ಆಗಬೇಕಾಗಿರುವ ಕೆಲಸಗಳನ್ನು ಪಟ್ಟಿಮಾಡಿ ನೀಡಿದ್ದಾರೆ ಅವುಗಳಲ್ಲಿ ನ್ಯಾಯ ಸಮ್ಮತವಾದದ್ದನ್ನು ಪರಿಹರಿಸಿ ಕೊಡಲು ಪ್ರಯತ್ನಿಸುತ್ತೇನೆ ಮತ್ತು ನಗರಸಭೆ ಸದಸ್ಯರುಗಳು ಆಡಳಿತ ವರ್ಗ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ಮಂಜುನಾಥ್ ಒಳಗೊಂಡಂತೆ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು.