ಜಕಣಾಚಾರಿ ಜನ್ಮದಿನಾಚರಣೆ ಸಿಎಂಗೆ ಅಭಿನಂದನೆ

ಮುದ್ದೇಬಿಹಾಳ:ಡಿ.25: ಸಧ್ಯ ಇದೇ ಮೊದಲಬಾರಿ ಜನೇವರಿ 1 ರಂದು ವಿಶ್ವಕರ್ಮ ಸಮೂದಾಯದ ಮಹಾನ್ ಶಿಲ್ಪಿ ಅಮರ ಶಿಲ್ಪಿ ಜಕಣಾಚಾರಿ ಅವರ ಜಯಂತ್ಯೋತ್ಸವವನ್ನು ಸರಕಾರದಿಂದ ಆಚರಿಸುವಂತೆ ಆದೇಶಿಸುವ ಮೂಲಕ ಸಮಾಜಕ್ಕೆ ಗೌರವ ತಂದಕೊಟ್ಟ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ತಾಲೂಕಾ ವಿಶ್ವಕರ್ಮ ಸಮಾಜದ ವತಿಯಿಂದ ಅಭಿನಂದಿಸಲಾಗುವುದು ಎಂದು ತಾಲೂಕಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಲ್ಲಣ್ಣ ಪತ್ತಾರ(ತಾರನಾಳ) ಹೇಳಿದರು.

ಗುರುವಾರ ಪ್ರಕಟಣೆ ನೀಡಿದ ಅವರು ಕಳೇದ 20 ವರ್ಷಗಳಿಂದ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರೀಷತ್ ಸದಸ್ಯ ಕೆ ಪಿ ನಂಜುಂಡಿಯವರು ಅಸಂಘಟಿತ ಈ ಸಮಾಜವನ್ನು ಇಡಿ ರಾಜ್ಯದ ತುಂಬೇಲ್ಲ ಸಂಚರಿಸಿ ಸಮಾಜವನ್ನು ಸಂಘಟಿಸಿ ಸಮಾರು 17 ರಾಜ್ಯಮಟ್ಟದ ಸಮ್ಮೇಳನ ನಡೆಸುವ ಮೂಲಕ ಒಗ್ಗಟ್ಟು ಮೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಹಾಗಾಗಿ ನಮ್ಮ ನಾಯಕರು ಕೆ ಪಿ ನಂಜುಂಡಿಯವರೇ ಎಂದು ಇಡಿ ರಾಜ್ಯದ ಎಲ್ಲ ವಿಶ್ವಕರ್ಮ ಸಮಾಜ ಬಾಂಧವರು ಒಪ್ಪಿಕೊಂಡಿದ್ದಾರೆ ಹಾಗಾಗಿಯೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಒತ್ತಾಯಿಸಿ ಈ ಬಾರಿ ವಿಶ್ವಕರ್ಮ ಸಮಾಜದ ಅಮರ ಶಿಲ್ಪಿ ಜಕಣಾಚಾರಿಯವರ ಶಾಶ್ವತ ನೆನಪು ಉಳಿಯುವಂತೆ ಸರಕಾರ ವಿಶೇಷ ಸ್ಥಾನ ಮಾನ ನೀಡಬೇಕು ಎಂದು ಒತ್ತಾಯಿಸಿದ್ದರು ಇದರಿಂದಾಗಿ ಸಧ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಈ ಬಾರಿ ಸರಕಾರದಿಂದ ಅಮರ ಶಿಲ್ಪಿ ಜಕಣಾಚಾರಿ ಜಯಂತ್ಯೋತ್ಸವವನ್ನು ಸರಕಾರದಿಂದ ಆಚರಿಸುವ ಆದೇಶಿದ್ದು ಸ್ವಾಗತಿಸುವ ಮೂಲಕ ಅಭಿನಂದಿಸುವುದಾಗಿ ಹೇಳಿದರು

ಅದರಂತೆ ಹಲವು ವರ್ಷಗಳಿಂದ ಈ ಸಮೂದಾಯ ಪಂಚಕಸುಬುಗಳನ್ನು ಮಾಡಿಕೊಂಡು ಜೀವನ ನಡೆಸಿಕೊಂಡಸು ಬರುತ್ತಿದ್ದಾರೆ. ಆದರೇ ಇಲ್ಲಿ ತನಕ ಸರಕಾರ ಯಾವೂದೇ ಸೌಲಭ್ಯಗಳನ್ನು ಪಡೆದುಕೊಳ್ಳದೇ ವಂಚಿತಗೊಂಡು ತೀರಾ ಸಂಕಷ್ಟದಲ್ಲಿದೇ ಈ ನಿಟ್ಟಿನಲ್ಲಿ ಈಗಾಗಲೇ ಸರಕಾದರಿಂದ ಸ್ಥಾಪಿತಗೊಂಡಿರುವ ವಿಶ್ವಕರ್ಮ ಸಮಾಜದ ಅಭಿವೃದ್ದಿ ನಿಗಮಕ್ಕೆ ಈ ಬಾರಿ 300 ಕೋಟಿಗಳ ವಿಶೇಷ ಅನುದಾನ ನೀಡಿ ಸರಕಾರದ ಸೌಲಭ್ಯಗಳ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಶಕ್ತಿತುಂಬಬೇಕು ಎಂದು ನಗರ ಸಮಾಜದ ಅಧ್ಯಕ್ಷ ನಾರಾಯಣ ದೋಟಿಹಾಳ, ಮುಖಂಡರಾದ ಮನೋಹರ ಶಿರವಾಳ, ಮಾನಪ್ಪ ತಮದಡ್ಡಿ, ತಾಲೂಕಾ ಕಾರ್ಯಾಧ್ಯಕ್ಷ ಕಾಶಿನಾಥ ಪತ್ತಾರ (ಅಯ್ಯನಗುಡಿ) ಉಪಾಧ್ಯಕ್ಷ ಮನೋಜ ಬಡಿಗೇರ, ಕಾರ್ಯದರ್ಶಿ ಚಂದ್ರಶೇಖರ ಪತ್ತಾರ, ಖಜಾಂಚಿ ಈರಣ್ಣ ಬಡಿಗೇರ (ಕೆ ಎಸ್ ಆರ್ ಟಿ ಸಿ) ಯುವ ಘಟಕದ ಅಧ್ಯಕ್ಷ ರಮೇಶ ತಮದಡ್ಡಿ, ಮುತ್ತು ಬಡಿಗೇರ, ಕಾಳಪ್ಪ ಹಳ್ಳೂರ, ಅಶೋಕ ಬಳಬಟ್ಟಿ, ಮಳಿಯಪ್ಪ ಪತ್ತಾರ, ಬ್ರಹ್ಮಾನಂದ ನಂದರಗಿ,ವೀರುಪಾಕ್ಷೀ ಇಟಗಿ, ಈರಣ್ಣ ಕಾಳಗಿ, ಮೌನೇಶ ಹಂದ್ರಾಳ, ಲಕ್ಷ್ಮಣ ಹಳ್ಳೂರ, ಸೇರಿದಂತೆ ಹಲವರು ಅಭಿನಂದಿಸಿ ಮನವಿ ಮಾಡಿಕೊಂಡಿದ್ದಾರೆ.