ಜಂಭಯ್ಯನಕೆರೆ ಬಳಿ ಅನಾಮದೇಯ ಶವ ಪತ್ತೆ

ಕೂಡ್ಲಿಗಿ.ನ. 4 : ಸುಮಾರು 60 ವರ್ಷ ವಯಸ್ಸಿನ ಗಂಡಸಿನ ಅನಾಮಧೇಯ ಶವವೊಂದು ಕೂಡ್ಲಿಗಿ ಪೊಲೀಸ್ ಠಾಣಾ ಸರಹದ್ದಿನ ಜಂಭಯ್ಯನಕೆರೆ ಬಳಿ ಮರವೊಂದಕ್ಕೆ ನೇಣು ಹಾಕಿಕೊಂಡ ರೀತಿಯಲ್ಲಿ ಕಂಡುಬಂದಿದೆ. ಇಂದು ಬೆಳಿಗ್ಗೆ ದಾರಿಹೋಕರು ನೀಡಿದ ಮಾಹಿತಿಯಂತೆ ಕೂಡ್ಲಿಗಿ ಪೊಲೀಸರು ಜಂಭಯ್ಯನಕೆರೆ ಬಳಿ ಹೋಗಿ ನೋಡಲಾಗಿ ಸುಮಾರು 60 ವರ್ಷದ ಗಂಡಸಿನ ಶವ ನೇಣುಬಿಗಿದುಕೊಂಡು ಸಾವನ್ನಪ್ಪಿರುವ ರೀತಿ ಕಂಡು ಬರುತ್ತಿದ್ದು ಬಿಳಿ ಪಂಜೆ ಹಾಗೂ ಬಿಳಿ ಅಂಗಿ ಧರಿಸಿದ್ದು ಇಂದು ನಸುಕಿನ ಜಾವ ನೇಣುಹಾಕಿಕೊಂಡು ಸಾವನ್ನಪ್ಪಿರ ಬಹುದೆಂದು ಹೇಳಲಾಗುತ್ತಿದ್ದು ಈ ಮೃತ ವ್ಯಕ್ತಿಯ ಶವದ ಹೆಸರು ವಿಳಾಸ ತಿಳಿದಿಲ್ಲವಾಗಿದ್ದು ಪೊಲೀಸರು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗೆ ಮಾಹಿತಿ ನೀಡಿ ವಿಳಾಸ ಪತ್ತೆಹಚ್ಚಲು ಮುಂದಾಗಿದ್ದು ಈ ಚಹರೆ ವ್ಯಕ್ತಿ ಯಾರೆಂದು ತಿಳಿದಲ್ಲಿ ತಕ್ಷಣ ಕೂಡ್ಲಿಗಿ ಪಿಎಸ್ಐ  ಮೊಬೈಲ್  9480803057 ಮತ್ತು ಸಿಬ್ಬಂದಿ ಮೊಬೈಲ್ 9964882275 ಗೆ ಮಾಹಿತಿ ನೀಡಲು ಕೋರಿದ್ದಾರೆ.