ಜಂಭಕೇಶ್ವರನಿಗೆ ಸವಾಲು ಹಾಕಿದವಳು ಸತ್ಯಕ್ಕ -ಹೆಚ್.ಸೌಭ್ಯಾಗಲಕ್ಷ್ಮೀ


ಸಂಜೆವಾಣಿ ವಾರ್ತೆ
ಸಂಡೂರು: ಜು: 31:  36 ವಚನಕಾರ್ತಿಯರಲ್ಲಿ ಶರಣೆ ಸತ್ಯಕ್ಕ ಒರ್ವರು  ವಚನಗಳನ್ನು ಬೆಳಕಿಗೆ ತಂದವರು ಫ.ಗು.ಹಳಕಟ್ಟಿಯವರು. ಹಾನಗಲ್ಲ ಕುಮಾರಸ್ವಾಮಿಗಳವರು ವಚನಗಳ ಅಧ್ಯಯನವೇಗೊತ್ತಿಲ್ಲ, ವಚನಗಳ ಮೂಲಕ ಶರಣರನ್ನು ಪರಿಚಯಿಸಿದವರು ಫ.ಗು.ಹಳಕಟ್ಟಿಯವರು. ಬಿ.ಎಂ. ಶ್ರೀಯವರು ವಚನಗಳ ಅಧ್ಯಾಯನ ಮಾಡಿದವರಲ್ಲಿ ಈರ್ವರು ಬೆಳಕಿನತ್ತವಚನಸಾಹಿತ್ಯವನ್ನು ಅಧ್ಯಯನವೇ ಮಾಡಲಿಲ್ಲ, ಬೇರೆ ರಾಜ್ಯದವರು ಶರಣರ ಚಿಂತನೆ ಮಾಡಿದರು. ನಾವು ಚಿಂತನೆಮಾಡಿಲ್ಲ ಶರಣರದು ಅಹಿಂಸಾತ್ಮಕ ಚಳುವಳಿ ಶರಣರು ಹೇಡಿಗಳಲ್ಲಿ ಹಿಂಸೆ ಅಗಬಾರದು ಎನ್ನುವ ದೃಷ್ಟಿಯಿಂದ ವಚನಸಾಹಿತ್ಯವನ್ನು ಉಳಿಸಲು ಪಲಾಯನವಾದರು. ಸತ್ಯಕ್ಕ ಅಲಕ್ಷ್ಮಿತ ವಚನಕಾರ್ತಿ, ಸತ್ಯಕ್ಕನ ವಚನವೊಂದು ನಾವು ಅಧ್ಯಯನವನ್ನು ಮಾಡಿಲ್ಲ, ಸತ್ಯಕ್ಕ ನಿಗೆ ಶರಣರ ಸಾಲಿನಲ್ಲಿ ವೈಶಿಷ್ಟಯತೆ ಇದೆ 29 ವಚನಗಳು ಮಾತ್ರ ಲಭ್ಯವಾಗಿದ್ದು ಜಂಭಕೇಶ್ವರ ಎನ್ನುವ ಅಂಕಿತದಿಂದ ಸಾಹಿತ್ಯವನ್ನು ರಚಿಸಿದರು, ಸತ್ಯಕ್ಕನನ್ನು ದಲಿತವರ್ಗಕ್ಕೆ ಸೇರಿದಳು ಎನ್ನುವುದು ಕೆಲವರಲ್ಲಿ ಇದೆ, ಅಕ್ಕಮಹಾದೇವಿ, ಪಾಲ್ಕುರಿಗೆ ಸೋಮನಾಥ, ಚನ್ನಬಸವಪುರಾಣ, ಕಥಾಮಣಿ ಕಾವ್ಯಗಳಲ್ಲಿ ಸತ್ಯಕ್ಕನ ಬಗ್ಗೆ ಉಲ್ಲೇಖ ಇದೆ, ಸತ್ಯಕ್ಕ ಉನ್ನತ ಶರಣೆಯಾಗಿ ಸಾಧನೆ ಮಾಡಿದರು, ಕಸಬಳಿಯುವ ಕಾಯಕದೊಂದಿಗೆ ಗುರುತಿಸಿಕೊಳ್ಳಲಾಗಿದೆ, ಶರಣರ ತತ್ವಗಳಿಂದ ನಾವು ದೂರವಿದ್ದು ಅಸಮಾನತೆಯನ್ನು ಹಓಗಲಾಡಿಸಲು ಸಾಧ್ಯವಿಲ್ಲದಂತಾಗಿದೆ ಎಂದು ಶಾಸಪ ಅಧ್ಯಕ್ಷರು, ಚಿತ್ತವಾಡಗಿ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕಿ ಹೆಚ್. ಸೌಲಭಾಗ್ಯಲಕ್ಷ್ಮೀ ತಿಳಿಸಿದರು.
ಅವರು ಪಟ್ಟಣದ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಪರಮಪೂಜ್ಯ ಶ್ರೀ ಪ್ರಭುಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಗುಡೇಕೋಟೆ ಜ್ಯೋತಿ ನಾಗರಾಜ ಅಧ್ಯಕ್ಷತೆಯಲ್ಲಿ ಅನುಭಾವ – 4 ಸತ್ಯಕ್ಕೆ ಶರಣೆ ಎನ್ನುವ ಕಉರಿತು ಉಪನ್ಯಾಸ ನೀಡಿದರು. ಮಠಗಳ ಪರಂಪರೆಗೆ ಬುನಾದಿಹಾಕಿದವರು ಬೇಡರು ಕೆಳವರ್ಗದವರು ಮಠಗಳ ನಿರ್ಮಾಣ ಮಾಡಿದರು, ಪುರಾಣಗಳಲ್ಲಿ ಬರೆದಿರುವುದೆಲ್ಲ ಸತ್ಯವಲ್ಲ ಕಾವ್ಯಗಳಲ್ಲಿ ಸತ್ಯಕ್ಕನ ಬಗ್ಗೆ ಬೇರೆ ಬೇರೆ ಅಭಿಪ್ರಾಯವಿದೆ ಹರಿಹರನ ಕಾವ್ಯಗಳಲ್ಲಿ ಕಾಲ್ಪನಿಕ ಹೆಚ್ಚಾಗಿದೆ, ತತ್ವಪದಗಳನ್ನು ಸತ್ಯಕ್ಕೆ ಬರೆದರು ಬದುಕಿನ ತಾತ್ವಿಕತೆಯ ಶರಣಧರ್ಮವನ್ನು ಬರದವಳು, ಉತ್ತಮ ವಚನಗಳು ಸತ್ಯಕ್ಕನಲ್ಲಿ ಲಭಿಸುತ್ತವೆ, ಶಿವಭಕ್ತನುಡಿಗಳು ಮಾತ್ರ ಸತ್ಯಕ್ಕನದಾಗಿದೆ, ಕಾಯಕತತ್ವದಲ್ಲಿ ಪ್ರಾಮಾಣಿಕತೆ ಮೆರೆದವಳು ಸತ್ಯಕ್ಕ, ಕಾಯಕವೇ ಪ್ರತಿಫಲದ ಶರಣಸಿದ್ದಾಂತವಾಗಿದೆ. ಪರಸ್ತ್ರೀ ಪರಧನ ಈ ಎರಡು ನಾಶವಾಗಲು ಸಾಧ್ಯ, ಸತ್ಯವಂತೆ ಸತ್ಯಕ್ಕ ಇದು ಅನ್ವರ್ಥಕ ನಾಮ ಸತ್ಯಕ್ಕ ಮತ್ತು ಮುಕ್ತಾಯಕ್ಕನ ಸಂವಾದವನ್ನು ನಾವು ಎಲ್ಲಿಯೂ ಹಏಳುವುದಿಲ್ಲ ಅದರೆ ಅಲ್ಲಮಪ್ರಭು ಮತ್ತು ಮುಕ್ತಾಯಕನ ಸಂವಾದವನ್ನು ಮಾತ್ರ ಹೇಳುತ್ತೇವೆ, ಮುಕ್ತಾಯಕ್ಕನಂತಹ ಜ್ಞಾನಿಯನ್ನು ಸತ್ಯಕ್ಕ ಇನ್ನೋರ್ವ ಜ್ಞಾನಿಯಾದಳು,. ಸತ್ಯಕ್ಕ ದಏವರಿಗೆ ಸವಾಲು ಹಾಕಿ ಜಂಭುಕೇಶ್ವರನಿಗೆ ಸವಾಲು ಹಾಕಿದ ಧಿಮಂತಶರಣೆ, ಸತ್ಯಕ್ಕ ಅಚಲ ದೃಢ ತಾತ್ವಿಕತೆಗೆ ಬಧ್ಧಳಾದವಳು, ಪರಧನ, ಪರಸತಿ, ಪರದೈವಂಗಳು ಶರಣರ ತಾತ್ವಿಕ ನಿಲುವಾಗಿತ್ತು. ಪೂಜೆ ಮಂತ್ರ ಇವು ನೇಮವಲ್ಲ, ಎನ್ನುವ ನೈತಿಕ ತಾತ್ವಿಕ ತಳಹದಿಯಮೇಲೆ ನಿಂತಿವೆ ವ್ಯಕ್ತಿಯ ಆಧಾರದ ಮೇಲೆ ಹಿರಿಯತ್ವ ನಿರ್ಧಾರವಾಗುತ್ತದೆ. ಅನುಭಾವಕ್ಕೆ ಲಿಂಗಭೇಧವಿಲ್ಲ ಎಂದು ಸಾರಿದವಳು ಸತ್ಯಕ್ಕ ವಚನಗಳಿಗಿಂತ ಪುರಾಣ ಪ್ರಜ್ಞೆ ಜ್ಞಾನ, ವಿಚಿತ್ರವಾಗಿತ್ತು. ದೇವರನ್ನೇ ಪ್ರಶ್ನಿಸುವ ಗಟ್ಟಿತನ ಶರಣರಲ್ಲಿ ಮತ್ತು ಶರಣೆಯರಲ್ಲಿ ಮನೆಮಾಡಿತ್ತು.  ಅದಿಯಿಲ್ಲ, ಅಂತ್ಯವೂ ಇಲ್ಲ ಎಂದು ಬಿಂಬಿಸಿದವರು ಅಲ್ಲಮ ಪ್ರಭುಗಳು ಎಂದು ಸೌಭಾಗ್ಯಲಕ್ಷ್ಮೀಯವರು ತಿಳಿಸಿದರು.
ನರಿಬಸವರಾಜರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು, ಕಮ್ಮಾರ ಉಮೇಶ್ ಸಾಥ್ ನಿಡಿದರು, ಶೃತಿ ಹರೀಶ್ ಗಾಣಿಗರು, ಕವನ ವಾಚನ ಅಂಕಮನಾಳ್ ಶಾಂತಲ ಪ್ರಭುರಾಜ, ನಿರೂಪಣೆ, ಐರಾಣಿಮಠದ ಗಿರಿಜಮ್ಮ, ನೆರವೇರಿಸಿದರು, ಕಾರ್ಯಕ್ರಮದಲ್ಲಿ ಕೊಟಗಿ ತಿಪ್ಪೇರುದ್ರ, ಜಿ.ಎಂ. ಪ್ರದೀಪಕುಮಾರ್, ಬಂಡೆಮ್ಯಾಗಳ ಆಶಾವಿರೇಶ್, ಜೆ.ಸಿದ್ದಮ್ಮ, ನಾಗವೇಣಿ, ಉಗ್ರಾಣದ ವಿಶಾಲಾಕ್ಷಮ್ಮ, ಜಿ.ನಳಿನಿ ಪ್ರದೀಪ್ ಕುಮಾರ, ಗಂಗಮ್ಮ, ಅಂಕಮನಾಳ್ ದ್ರಾಕ್ಷ್ಯಣಮ್ಮ, ಜ್ಯೋತಿ ಸರೋಜಮ್ಮ, ಹಗರಿಬಸವರಾಜಪ್ಪ, ನಾಗರಾಜ ನರಸಾಪುರ, ಜ್ಯೋತಿಗೌರಮ್ಮ, ನೀಲಾಂಬಿಕೆ, ಗೋನಾಳ್ ನಿರ್ಮಲ, ಗದಗ ಮಾನ್ವಿಮನೆತನದ ಲತಾ ಮತ್ತು ಕಉಟುಂಬದವರು ತಕ್ಕಲಕೋಟೆ ಶಾಂತಮ್ಮ, ಐಕಲ ಸಹನ, ಸುಮಿತ್ರಮ್ಮ ಹೊಳಗುಂದಿ, ಅಲ್ಲದೆ ಹಲವಾರು ಮಹಾನೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

One attachment • Scanned by Gmail