ಜಂಬಲದಿನ್ನಿ : ೯ನೇ ವಾರ್ಷಿಕ ಮಹಾಸಭೆ – ಸಮಾಜ ಮುಖಿ ಕಾರ್ಯ

ಸಂಘಕ್ಕೆ ಗ್ರಾಹಕರೇ ಜೀವಾಳ: ಸಮಸ್ಯೆ ಆಲಿಸಿ -ಟಿ.ಬಸವರಾಜ
ಸಿರವಾರ.ಸೆ.೨೩-ಸಿರವಾರದಂತಹ ದೊಡ್ಡ ವಾಣಿಜ್ಯ ಪಟ್ಟಣದಲ್ಲಿ ಇಂದು ಅನೇಕ ಸಹಕಾರ ಸಂಘಗಳು ಹುಟ್ಟಿಕೊಂಡಿವೆ, ಸಹಕಾರಿ ಬ್ಯಾಂಕಿಗೆ ಗ್ರಾಹಕರಿಗೆ ಜೀವಾಳವಾಗಿದ್ದಾರೆ, ನಮ್ಮ ಸಿಬ್ಬಂದಿಗಳು ಗ್ರಾಹಕರ ಸಮಸ್ಯೆಗಳನ್ನು ಆಲಿಸಿ, ತಾಳ್ಮೆಯಿಂದ, ಸಹನೆಯಿಂದ ಸೇವೆ ನೀಡುತ್ತಿದ್ದರುವುದರಿಂದ ೯ ನೇ ವರ್ಷದಲ್ಲಿಯೂ ಲಾಭದತ್ತ ಸಾಗುತ್ತಿದ್ದೂ, ನಿಧೇರ್ಶಕರ ಒಪ್ಪಿಗೆ ಪಡೆದು ಸಮಾಜಮುಖಿ ಕಾರ್ಯಗಳನ್ನು ಸಹಕಾರಿಯಿಂದ ಮಾಡುತ್ತಿದ್ದೆವೆ ಎಂದು ಜಂಬಲದಿನ್ನಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಅಧ್ಯಕ್ಷ ಟಿ.ಬಸವರಾಜ ಹೇಳಿದರು.
ಪಟ್ಟಣದಲ್ಲಿರುವ ಜಂಬಲದಿನ್ನಿ ಸೌಹಾರ್ದ ಪತ್ತಿನ ಸಹಕಾರಿಯಲ್ಲಿ ಬುಧುವಾರ ದಿ.ಪಂ.ಸಿದ್ದರಾಮ ಜಂಬಲದಿನ್ನಿ ಅವರ ೧೦೩ನೇ ಜನ್ಮದಿನಾಚರಣೆ ಹಾಗೂ ಸಹಕಾರಿಯ ೯ನೇ ವಾರ್ಷಿಕ ಮಹಾಸಭೆಯ ಹಾಗೂ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಹಕರು ನಮ್ಮ ಸಹಕಾರಿಯ ಮೇಲ ನಂಬಿಕೆ ಇಟ್ಟು ಇಟ್ಟಿರುವ ಠೇವಣಿ, ಪಡೆದಿರುವ ಸಾಲವನ್ನು ಸಕಾಲಕಕ್ಕೆ ಮರಳಿಸುತ್ತಿರುವುದು ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆ, ಪರಿಶ್ರಮದಿಂದ ೯ನೇ ವರ್ಷದಲ್ಲಿಯೂ ಲಾಭದಲ್ಲಿ ಸಾಗುತ್ತಿದೆ.
ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಸಹಕಾರಿಯಾಗಲು ಸಹಕಾರಿ ಸ್ಥಾಪನೆ ಮಾಡಿದ್ದೇವೆ. ಹಣ ಗಳಿಸುವುದಿದ್ದರೆ ಅನೇಕ ಮಾರ್ಗಗಳು ಇವೇ. ಸಂಘದಿಂದ ಬಂದಿರುವ ಲಾಭದಲ್ಲಿ ಅನೇಕ ಸಮಾಜಿಕ ಕೆಲಸಗಳನ್ನು ಮಾಡುತ್ತಿದ್ದೆವೆ. ವಾರ್ಷಿಕವಾಗಿ ೬೪ ಕೊ. ವ್ಯವಹಾರ ಮಾಡುತ್ತಿದೆ. ೨೦೨೦-೨೧ ನೇ ಸಾಲಿನಲ್ಲಿ ೨೪,೫೭,೭೮೪.೮೫ ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಶೇರುದಾರರಿಗೆ ಶೇ ೧೮ ರಷ್ಟು ಲಾಭಾಂಶವನ್ನು ಕೊಡಲಾಗುವುದು ಎಂದು ಘೋಷಣೆ ಮಾಡಿದರು. ಸಾಮಾಜಿಕ ಕಳಕಳಿಯನ್ನು ಸಹಕಾರಿ ಹೊಂದಿದ್ದು ಕಳೆದ ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ಕೈ, ಕಾಲು ಕಳೆದುಕೊಂಡ ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಮೂರು ಜನ ವಿದ್ಯಾರ್ಥೀನೀಯರಿಗೆ ೫೦ ಸಾವಿರ ರೂ.ಗಳನ್ನು ಸಹಕಾರಿಯಿಂದ ನೀಡಲಾಯಿತು, ಅಲ್ಲದೇ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನೀಯರಿಗೆ ನಗದು ಬಹುಮಾನದ ಜೊತೆಗೆ ಸನ್ಮಾನಿಸಿ ಗೌರವಿಸುತ್ತಿದ್ದೆವೆ, ಈ ವರ್ಷ ಜಂಬಲದಿನ್ನಿ ಗ್ರಾಮದಲ್ಲಿ ತಂದೆ-ತಾಯಿ ಇಲ್ಲದ ನಿರ್ಗತಿಕ ಅನಾಥ ಮಕ್ಕಳ ಅನುಕೂಲಕ್ಕಾಗಿ ೨.೫೦ ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಕೊಡುವ ಮೂಲಕ ಅವರಿಗೆ ನಮ್ಮ ಸಹಕಾರಿಯ ನೇರವಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ನಿರ್ದೇಶಕ ಡಾ.ನಾಗೇಶ್ ಶ್ಯಾವಿ ಮಾತನಾಡಿದರು. ಮುಖ್ಯಕಾರ್ಯನಿರ್ವಾಣಾಧಿಕಾರಿ ಟಿ.ನಾಗರಾಜ ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸಿದರು. ಹಿಂದಿನ ಸಿಓ ಅವರಿಗೆ
ಕೊವೀಡ್‌ನಿಂದ ಮೃತಪಟ್ಟ ಹಿನ್ನಲ್ಲೆಯಲ್ಲಿ ೨ ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿರೇಶ ಹೆಚ್, ನಿರ್ಧೇಶಕರಾದ ಟಿ.ಅಮರೇಶ, ಶರಣಗೌಡ,ಎಂ.ನಾಗರಾಜಗೌಡ, ಡಿ.ಶರಣಗೌಡ, ವಿಜಯಕುಮಾರ್ ಜಾಡಲದಿನ್ನಿ, ಮಲ್ಲಿಕಾರ್ಜುನ ಅಂಗಡಿ,ಶಂಕ್ರಪ್ಪ, ಸಿಬ್ಬಂದಿಗಳಾ ಗುರುರಾಜ, ಮಲ್ಲಿಕಾರ್ಜುನವೈಟ್ಲಾ, ಕುಮಾರಗೌಡ, ನಾಗರಾಜ,ರಾಚಪ್ಪ, ತ್ರಿಯಂಬಕೇಶ್ವರ ಸೇರಿದಂತೆ ಗ್ರಾಹಕರು ಇದ್ದರು.