ಜಂಬಲದಿನ್ನಿ : ಅಪ್ಪು ಅಭಿಮಾನಿಗಳಿಂದ ಪುನೀತ್ ರಾಜ್‌ಕುಮಾರ್ ವೃತ್ತ ಅನಾವರಣ

ಸಿರವಾರ.ಅ.೨೯- ತಾಲೂಕಿನ ಜಂಬಲದಿನ್ನಿ ಗ್ರಾಮದಲ್ಲಿ ಶುಕ್ರವಾರದಂದು ಅಪ್ಪು ಅಭಿಮಾನಿಗಳ ವತಿಯಿಂದ ಚಲನಚಿತ್ರ ನಟ ದಿ.ಡಾ.ಪುನೀತ್ ರಾಜ್ ಕುಮಾರ ವೃತ್ತವನ್ನು ಅನಾವರಣ ಮಾಡಲಾಯಿತು.
ಇದೇ ವೇಳೆ ಅಪ್ಪು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ಪಟೇಲ್ ಅಯ್ಯನಗೌಡ, ಬಸನಗೌಡ, ಬಸವರಾಜಪ್ಪ, ಗೌಡ, ಶಿವಶಂಕರಗೌಡ , ಮಾಜಿ ಸದಸ್ಯರು ಬೀರಪ್ಪ , ಗ್ರಾಮ ಪಂಚಾಯತಿ ಸದಸ್ಯರು ಗುಂಡಪ್ಪ, ಜಂಬಲಾದಿನ್ನಿ ಬಸವರಾಜ, ಬಾಲಪ್ಪ, ಸುನಂದ, ಅರುಣ್ ಕುಮಾರ್, ಗ್ರಾಮಸ್ಥರು ಉಪಸ್ಥಿತರಿದ್ದರು.