ಜಂಬಗಿ ದಲಿತ ಓಣಿಗೆ ಸ್ಮಶಾನ ಭೂಮಿ ಮಂಜೂರು

(ಸಂಜೆವಾಣಿ ವಾರ್ತೆ)
ಔರಾದ: ಸೆ.19: ತಾಲೂಕಿನ ಜಂಬಗಿ ಗ್ರಾಮದ ಮಾದಿಗ ಸಮಾಜದ ಜನಾಂಗಕ್ಕೆ ಜಿಲ್ಲಾಡಳಿತ ಸ್ಮಶಾನ ಭೂಮಿ ಮಂಜೂರು ಮಾಡಿ ಆದೇಶ ಹೊರಡಿಸಿದ್ದು ಸತತ ಎರಡು ವರ್ಷದ ಹೋರಾಟದ ಫಲವಾಗಿ ಸ್ಮಶಾನ ಭೂಮಿ ಮಂಜೂರು ಆಗಿದೆ ಎಂದು ಯುವ ಮುಖಂಡ ಬಂಟಿ ದರ್ಬಾರೆ ತಿಳಿಸಿದರು.
ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ಹಾಗೂ ತಾಸೀಲ್ದಾರ ಅರುಣಕುಮಾರ್ ಕುಲಕರ್ಣಿ ರವರಿಗೆ ಧನ್ಯವಾದ ತಿಳಿಸಿದರಲ್ಲದೆ ಕಳೆದ ಎರಡು ವರ್ಷಗಳಿಂದ ಸತತ ಹೋರಾಟಕ್ಕೆ ತಾಲೂಕಿನಲ್ಲಿ ದಲಿತ ಶಾಸಕ ಸಚಿವರಿದ್ದರು ಹೇಳಿಕೊಳ್ಳುವಂತ ಅಭಿವೃಧಿ ಕೆಲಸ ಆಗಿಲ್ಲ, ಅಲ್ಲದೆ ತಾಲೂಕಿನಲ್ಲಿ ಬಹಳಷ್ಟು ಗ್ರಾಮಗಲ್ಲಿ ಮರಣದ ನಂತರವು ಶವಸಂಸ್ಕಾರ ಮಾಡಲು ದಲಿತರಿಗೆ ಒಂದು ಸ್ಮಶಾನ ಭೂಮಿ ಇಲ್ಲದೆ ಇರುವುದು ನಾಚಿಕೆಯ ಸಂಗತಿ,
ಇಡಿ ದೇಶವೇ ಸ್ವತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದೆ, ಆದರೆ ನಿಜವಾದ ಸ್ವತಂತ್ರ ಕಾಣದಂತಾಗಿದೆ, ಸರ್ಕಾರದ ಇಂತಹ ನಡೆಯಿಂದ ಮನುಕುಲವೇ ತಲೆತಗ್ಗಿಸುಂತಾಗಿದೆ ಎಂದು ಆಡಳಿತ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಂಟಿ ದರ್ಬಾರೆ ಅವರ ಸತತ ಹೋರಾಟದಿಂದ ನಮ್ಮ ಊರಿನ ದಲಿತ ಸಮುದಾಯಕ್ಕೆ ಸ್ಮಶಾನ ಭೂಮಿ ಮಂಜೂರಾಗಿದೆ, ತಮ್ಮ ಯಾವುದೇ ಹೋರಾಟಕ್ಕೆ ಬೆಂಬಲ ಸದಾ ಬೆಂಬಲ ಸೂಚಿಸುತ್ತೇವೆ, ಎಂದು ಗೌರವ ಸನ್ಮಾನಗೈದರು.
ಈ ಸಂದರ್ಭದಲ್ಲಿ ಪ್ರಭು ಕಲ್ಲಪ್ಪ, ರಮೇಶ ಬಾಬು, ಅನಿಲ ಮಾರುತಿ, ಸೈಮನ್, ಮಾರುತಿ, ದಯಾನಂದ, ದ್ರೌಪದಿ, ಸುಮಿತ್ರಾ, ಸಂತೋಷಿ, ಶಾಂತಮ್ಮ ಮಾದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.