ಜಂಬಗಿ ಗ್ರಾಮ ಪಂಚಾಯಿತಿ: ಸುಮನಬಾಯಿ ಅಧ್ಯಕ್ಷೆ, ರುಕುಮಿಣಿಬಾಯಿ ಉಪಾಧ್ಯಕ್ಷೆ

ಔರಾದ್: ಜು.30:ತಾಲೂಕಿನ ಜಂಬಗಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸುಮನಬಾಯಿ ಬಾಬುರಾವ್ ಅಧ್ಯಕ್ಷೆಯಾಗಿ ರುಕುಮಿಣಿಬಾಯಿ ಪಂಡಿರನಾಥ, ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಹುದ್ದೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲು ನಿಗದಿ ಮಾಡಲಾಗಿತ್ತು. ಅಧ್ಯಕ್ಷ ಹುದ್ದೆಗೆ ಸುಮನಬಾಯಿ ಬಾಬುರಾವ್ ಹಾಗೂ ಬಾಬುರಾವ್ ಮಸ್ಕಲೆ, ನಾಮಪತ್ರ ಸಲ್ಲಿಸಿದರು, ಇಬ್ಬರು ಅಭ್ಯರ್ಥಿಗಳು ಸರಿ ಸಮಾನ ಮತಗಳು ಪಡೆದ ಕಾರಣ ಲ್ಯಾಟರಿ ಮುಖಾಂತರ ಆಯ್ಕೆ ಪ್ರಕ್ರಿಯೆ ಮುಂದುವರಸಲಾಯಿತ್ತು. ಈ ಪ್ರಕ್ರಿಯೆಯಲ್ಲಿ ಸುಮನಬಾಯಿ ಬಾಬುರಾವ್ ಹೆಸರು ಅಂತಿಮಗೊಳಿಸಲಾಯಿತು.

ಚುನಾವಣೆ ಅಧಿಕಾರಿ ಸಹಾಯಕ ಗ್ರಾಮಿಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಾಹಯಕ ಅಭಿಯಂತರು ಸುಭಾಷ ದಾಲಗೊಂಡೆ ಅವರು ಅಭ್ಯರ್ಥಿ ಸುಮನಬಾಯಿ ಬಾಬುರಾವ್ ಇವರನ್ನು ಜಂಬಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ರುಕುಮಿಣಿಬಾಯಿ ಪಂಡಿರನಾಥ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ನೂತನ ಗ್ರಾಪಂ ಅಧ್ಯಕ್ಷೆ ಸುಮನಬಾಯಿ ಬಾಬುರಾವ್ ಅವರು ಮಾತನಾಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸ್ವಚ್ಛತೆ, ಸರ್ಕಾರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳು, ಎಲ್ಲಾ ಸದಸ್ಯರು ಸಹಕಾರ, ಶಾಸಕರ ಸಹಕಾರದಿಂದ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಲೋಪದೋಷಗಳು ಬರದ ಹಾಗೆ ಸಾರ್ವಜನಿಕರ ಪರ ಕೆಲಸಗಳನ್ನು ಮಾಡುತ್ತೇನೆ ಎಂದರು.

ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣೆ ಅಧಿಕಾರಿ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಾಹಯಕ ಅಭಿಯಂತರು ಸುಭಾಷ ದಾಲಗೊಂಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪಾ ಗಾದಗೆ ಭಾಗವಹಿಸಿದ್ದರು. ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ, ಪಿಎಸ್‍ಐ ಸಿದ್ದಣ್ಣ ಗಿರಿಗೌಡ್, ಪಿಎಸ್‍ಐ ಸಿದ್ದಲಿಂಗ ಬಂದೊಬಸ್ತ್ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.