ಜಂಪ್ ರೋಪ್ ನಲ್ಲಿ ವಿಶ್ವ ದಾಖಲೆ
ಯುವತಿಗೆ ಭರತರೆಡ್ಡಿ ಆರ್ಥಿಕ ನೆರವು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.02: ಕೆಲ ದಿನಗಳ ಹಿಂದೆ ಹೊಸಪೇಟೆಯಲ್ಲಿ ನಡೆದ ಜಂಪ್ ರೋಪ್ ಪದರ್ಶನದಲ್ಲಿ ವಿಶ್ವ ದಾಖಲೆ ಬರೆಯಲಾಗಿದೆ. ಇದರಲ್ಲಿ ಪಾಲ್ಗೊಂಡು ನಮ್ಮ ಜಿಲ್ಲೆಯ ಕಂಪ್ಲಿ ತಾಲೂಕಿನ‌ ಜಾಯಿಗನೂರಿನ ಪ್ರತಿಭೆಗೆ ಮತ್ತಷ್ಟು ಸಾಧನೆ ಮಾಡಲು ಸಹಕಾರಿಯಾಗುವಂತೆ. ನಗರದ ಟಚ್ ಫರ್ ಲೈಫ್ ಪೌಂಡೇಶನ್ ಅಧ್ಯಕ್ಷ, ಕಾಂಗ್ರೆಸ್ ಯುವ ಮುಖಂಡ ನಾರಾ ಭರತರೆಡ್ಡಿ 50 ಸಾವಿರ ರೂಗಳ ಚೆಕ್ ನ್ನು ನಿನ್ನೆ ತಮ್ಮ ಕಚೇರಿ ಆವರಣದಲ್ಲಿ ವಿತರಿಸಿದರು.
ಜಾಯಿಗನೂರಿನ  ವೀರನಗೌಡ ಅವರ ಇಬ್ಬರ ಪುತ್ರಿಯರಲ್ಲಿ ಚಿಕ್ಕವಳಾದ ರಿಷಿತ್ ಐದನೇ ತರಗತಿಯಿಂದಲೇ ಹೊಸಪೇಟೆಯಲ್ಲಿ ರಫಿಕ್ ಕೋಟ ಅವರ ಬಳಿ ತರಬೇತಿ ಪಡೆದಳು.
ಉತ್ತಮ ಪಟುವಾದ ಇವರು  ಈಗಾಗಲೇ  ರಾಜಸ್ಥಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಪದಕ, ಇಳಕಲ್ಲಿನಲ್ಲಿ ನಡೆದ ಪಂದ್ಯದಲ್ಲಿ ರಾಜ್ಯಮಟ್ಟದ ಪದಕವನ್ನು ಪಡೆದಿದ್ದರು.
ಹಾಲಿ ಬೆಂಗಳೂರಿನ ಮೌಂಟ್ ಕಾರ್ಮಿಲ್ ಕಾಲೇಜಿನಲ್ಲಿ ಬಿ.ಕಾಂ ಅಭ್ಯಾಸ ಮಾಡುತ್ತಿರುವ ರಿಷಿತ. ಕೆಲ ದಿನಗಳ ಹಿಂದೆ ವಿಕಾಸ್ ಸೌಹಾರ್ದ ಬ್ಯಾಂಕ್ ಹಮ್ಮಿಕೊಂಡಿದ್ದ 36 ತಾಸುಗಳ ಜಂಪ್ ರೋಪ್ ಪ್ರದರ್ಶನದಲ್ಲಿ  ಸ್ನೇಹಿತೆಯರಾದ ಹೊಸಪೇಟೆಯ ವರ್ಷ ಮತ್ತು  ಫಲಕ್ ಜೊತೆ ಪಾಲ್ಗೊಂಡರು. ಈ ಪ್ರದರ್ಶನದಲ್ಲಿ ದೇಶದ 18 ರಾಜ್ಯಗಳ 140 ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಜಂಪ್ ರೋಪ್ ನಲ್ಲಿ ಈ ವರಗೆ ಇದ್ದ 24 ತಾಸುಗಳ ದಾಖಲೆಯನ್ನು ಸರಿಗಟ್ಟಿ 36 ತಾಸುಗಳ ಪ್ರದರ್ಶನ ನೀಡಿ, ಲಿಮ್ಕ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್ ದಲ್ಲಿ ದಾಖಲಿಸಿದರು.
ಈಗ ಬರುವ ವರ್ಷ ಯುಎಸ್ ಎ ನಲ್ಲಿ ನಡೆಯುವ ಪ್ರದರ್ಶನಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿರುವ ರಿಷಿತ ಮತ್ತಷ್ಟು ದಾಖಲೆ ಮಾಡಲಿ ಎಂದು ಹರಸಿ ಭರತ್ ರೆಡ್ಡಿ ಪ್ರೋತ್ಸಾಹದಾಯಕವಾಗಿ ಆರ್ಥಿಕ ನೆರವು ನೀಡಿದ್ದಾರೆ.

 ಗ್ರಾಮೀಣ ಅದರಲ್ಲೂ ನಮ್ಮ ಜಿಲ್ಲೆಯ ಪ್ರತಿಭೆಗಳು ವಿಶ್ವ ಮಟ್ಟದ ಕ್ರೀಡೆಗಳಲ್ಲಿ  ಪಾಲ್ಗೊಳುವುದು ಸಂಸತದ ವಿಷಯ ಅದಕ್ಕಾಗಿ ಕರೆದು ಪ್ರೋತ್ಸಾಹಿಸಿದೆ.
ಭರತ್ ರೆಡ್ಡಿ: ಕಾಂಗ್ರೆಸ್ ಯುವ ಮುಖಂಡ.