ಜಂತು ಹುಳು ನಿವಾರಿಸಿ ಮಕ್ಕಳ ಆರೋಗ್ಯ ಗುಣಮಟ್ಟ ಕಾಪಾಡಿ: ಸುನಂದಾ

ಇಂಡಿ: ನ.30:ಸದೃಡ ಶರೀರದಲ್ಲಿ ಸದೃಡ ಮನಸ್ಸು ಇರುತ್ತದೆ ಆದ್ದರಿದ್ದ ಒಂದು ದೇಶದ
ಪ್ರಗತಿಗೆ ಮಾನವ ಸಂಪನ್ಮೋಲ ಪ್ರಮುಖವಾಗಿದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಇವರ ಆರೋಗ್ಯ ಗುಣಮಟ್ಟ ಕಾಪಾಡಿ ಶಸಕ್ತ ದೇಶ ನಿರ್ಮಾಣ ಮಾಡುವ ಗುರಿಹೊಂದಲಾಗಿದೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಒಂದು ದೇಶದ ಅಭಿವೃದ್ದಿಗೆ ಆರೋಗ್ಯವಂತ ಮಾನವ ಕುಲಕೋಟಿಯ ಪ್ರಮುಖವಾಗಿದ್ದು. ಪತ್ರಿಯೋಬ್ಬರ ಆರೋಗ್ಯ ಗುಣಮಟ್ಟ ಕಾಪಾಡಬೇಕಾಗಿರುವುದು ಸರಕಾರಗಳ ಕರ್ತವ್ಯ ಆದ್ದರಿಂದ ಇಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳು ಇತರೆ ರೋಗಗಳನ್ನು ತಡೆಗಟ್ಟಲು ಸಾಕಷ್ಟು ಶ್ರಮಿಸುತ್ತಿವೆ.
ಇಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನವಾಗಿದ್ದು ಜಂತು ಹುಳು ಸಣ್ಣ ಮಕ್ಕಳಲ್ಲಿ ಕಂಡು ಬರುತ್ತದೆ. 1 ವರ್ಷದಿಂದ 19 ವರ್ಷದ ಮಕ್ಕಳಲ್ಲಿ ಇಂತಹ ರೋಗ ಕಂಡುಬರುತ್ತದೆ. ಚಿಕ್ಕಮಕ್ಕಳಿಗೆ ಅತೀಯಾದ ಸಿಹಿ ತಿನಸುಗಳನ್ನು ಸೇವಿಸುವದರಿಂದ ಜಂತುಹುಳು ಕಾಣಿಸಿಕೊಳ್ಳುತ್ತವೆ. ಮಕ್ಕಳ ಹೊಟ್ಟೆಯಲ್ಲಿ ಜಂತುಗಳ ಬೆಳೆವಣಿಗೆ ಹೆಚ್ಚಾತ್ತಾ ಹೋದಂತೆ ಹೋಟ್ಟೆ ಕಡಿತ , ಸುಸ್ತು, ಅತೀಯಾದ ಭೇದಿ ಉಂಟಾಗುತ್ತದೆ ಇಂತಹ ಸಂಧರ್ಬದಲ್ಲಿ ಸೂಕ್ತ ವ್ಯದ್ಯರ ಸಲಹೆ ಪಡೇದು ಜಂತು ಹುಳುಗಳ ಬೆಳವಣಿಗೆ ಕುಂಟಿತಗೋಳಿಸಿ ಮಕ್ಕಳ ಆರೋಗ್ಯ ಕಾಪಾಡಬೇಕು ಎಂದರು.

ಸಿ.ಎಚ್.ಓ ಲಕ್ಷ್ಮೀ, ಪಿಎಚ್.ಸಿ.ಓ ಹೊನ್ನಮೋರೆ, ಅಂಗನವಾಡಿ ಕಾರ್ಯಕರ್ತೆ ದೀಪಾ ಹೊನ್ನಕಟ್ಟಿ ಇದ್ದರು.