ಜಂತುಹುಳು ರಹಿತ ಮಕ್ಕಳು, ಆರೋಗ್ಯವಂತ ಮಕ್ಕಳು


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ. 14 :- ಜಂತುಹುಳು ರಹಿತ ಮಕ್ಕಳು ಉತ್ತಮ ಆರೋಗ್ಯ ಮಕ್ಕಳು ಎಂದು ಕೂಡ್ಲಿಗಿ ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪಕುಮಾರ ತಿಳಿಸಿದರು.
ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ನಿನ್ನೆ  ಬೆಳಿಗ್ಗೆ ಆಯೋಜಿಸಿದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಮಕ್ಕಳ ಹಾಗೂ ವಯಸ್ಕರ ಆರೋಗ್ಯಕ್ಕೆ ಸಾಕಷ್ಟು ಒತ್ತು ಕೊಡುತ್ತಿದ್ದು ಅದರಂತೆ ಮಕ್ಕಳು ಹೆಚ್ಚಾಗಿ ಬಳಲುತ್ತಿರುವ ಜಂತುಹುಳು ನಿವಾರಣೆಗೆ 1ರಿಂದ 19 ವರ್ಷದ ಮಕ್ಕಳಿಗೆ ಜಂತುಹುಳು ಮಾತ್ರೆಯನ್ನು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಇಂದು ಕಡ್ಡಾಯವಾಗಿ ನೀಡುತ್ತಿದ್ದು ಈ ಮಾತ್ರೆಯನ್ನು ಮಕ್ಕಳು ಸೇವಿಸುವುದರಿಂದ ಜಂತುಹುಳು ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾರದಾಬಾಯಿ ಹಾಗೂ ಉಪಾಧ್ಯಕ್ಷೆ ರೇಣುಕಾದುರುಗೇಶ ಮಾತನಾಡಿ ಜಂತುಹುಳು ಇರುವ ಮಕ್ಕಳು ಅಪೌಷ್ಟಿಕತೆ ಹಾಗೂ ರಕ್ತಹೀನತೆಯಿಂದ ಬಳಲಿದಂತಿರುತ್ತಾರೆ ಅಲ್ಲದೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಿಂದ ಕುಂಠಿತರಾಗಿರುತ್ತಾರೆ ಇಂತಹ ಮಕ್ಕಳಿದ್ದಲ್ಲಿ ತಕ್ಷಣ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳನ್ನು ಪರೀಕ್ಷಿಸುವುದು ಉತ್ತಮ ಎಂದು ಪಾಲಕ ಪೋಷಕರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಡಾ.ಅಚ್ಯುತ್, ಡಾ.ರವಿಕುಮಾರ, ಆರೋಗ್ಯ ಇಲಾಖೆಯ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಗದೀಶ, ಸೀನಿಯರ್ ಎಲ್ ಹೆಚ್ ವಿ ಶಿವರುದ್ರಮ್ಮ, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಂರಕ್ಷಣಾಧಿಕಾರಿಗಳಾದ ಗಿರಿಜಾಅಂಜಿನಪ್ಪ, ಭವ್ಯ, ಐಸಿಟಿಸಿಯ ಪ್ರಶಾಂತಕುಮಾರ ಹಾಗೂ ಇತರರು ಉಪಸ್ಥಿತರಿದ್ದರು. ಅನೇಕ ಮಕ್ಕಳಿಗೆ ಜಂತುಹುಳು ಮಾತ್ರೆ ವಿತರಿಸಿ ಸೇವಿಸಲಾಯಿತು. One attachment • Scanned by GmailReplyForward